ನಿವೃತ್ತಿಯ ಬಳಿಕ ತಿಂಗಳಿಗೆ 70 ಸಾವಿರ ಪೆನ್ಷನ್ ಪಡೆಯಬೇಕೆ? ಇಲ್ಲಿದೆ ಅದ್ಭುತ ಯೋಜನೆ!
National Pension System: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ನಿಮಗೆ 32 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಗಳ ಒಟ್ಟು ಮೊತ್ತವನ್ನು ನೀಡುತ್ತದೆ. ಅದರ ಜೊತೆಗೆ, ಪ್ರತಿ ತಿಂಗಳಿಗೆ 70 ಸಾವಿರ ರೂಪಾಯಿಗೂ ಅಧಿಕ ಪಿಂಚಣಿಯನ್ನು ಸಹ ನೀವು ಪಡೆದುಕೊಳ್ಳಬಹುದು. ಲೆಕ್ಕಾಚಾರ ಹೇಗೆ ತಿಳಿದುಕೊಳ್ಳೋಣ ಬನ್ನಿ
National Pension System: ನಿವೃತ್ತಿಯ ನಂತರ ಹೆಚ್ಚುವರಿ ನಿಧಿ ಮತ್ತು ಅದರ ಜೊತೆಗೆ ನಿಯಮಿತ ಆದಾಯಕಾಗಿ ಜನರು ಅನೇಕ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯೋಜನೆ ಇಂತಹುದೇ ಯೋಜನೆಗಳಲ್ಲಿ ಒಂದು, ಇದು ಹೂಡಿಕೆದಾರರಿಗೆ ದೊಡ್ಡ ಮೊತ್ತದ ನಿಧಿಯನ್ನು ನೀಡುವುದರ ಜೊತೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಸಹ ಕೊಡುತ್ತದೆ. ಈ ಯೋಜನೆಯಲ್ಲಿ ನೀವು ಎಷ್ಟು ಹೂಡಿಕೆ ಮಾಡುವಿರೋ, ನಿಮಗೆ ನಿವೃತ್ತಿಯ ಬಳಿಕ ಅಷ್ಟು ಹೆಚ್ಚು ಹಣ ಸಿಗುತ್ತದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಭಾರತೀಯರು ಅಷ್ಟೇ ಅಲ್ಲ ಎನ್ ಆರ್ ಐಗಳೂ ಕೂಡ ಹೂಡಿಕೆ ಮಾಡಬಹುದು. 18 ರಿಂದ 70 ವರ್ಷ ವಯಸ್ಸಿನವರು ಇದರಲ್ಲಿ ಹೂಡಿಕೆ ಮಾಡಬಹುದು. ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ, ಟೈರ್ 1 ಮತ್ತು ಟೈರ್ 2 ಎಂಬ ಎರಡು ಖಾತೆಗಳನ್ನು ತೆರೆಯಲಾಗುತ್ತದೆ. ಟೈರ್ 1 ಇಲ್ಲದೆ ಯಾರೂ ಟೈರ್ 2 ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ-ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚುವರಿ ಬಡ್ಡಿಯ ಲಾಭ ಪಡೆಯಿರಿ, ಆರ್ಬಿಐ ಹೇಳಿದ್ದೇನು?
ಎನ್‌ಪಿಎಸ್‌ನಿಂದ ಕೋಟಿ ಆದಾಯ ಪಡೆಯುವುದು ಹೇಗೆ
ಹೂಡಿಕೆದಾರರು 28 ನೇ ವಯಸ್ಸಿನಲ್ಲಿ NPS ನಲ್ಲಿ ತಿಂಗಳಿಗೆ 10,000 ರೂಪಾಯಿಗಳನ್ನು ಹೂಡಿಕೆ ಮಾಡಲು ಆಂಭಿಸಿದರೆ ಮತ್ತು 60 ವರ್ಷ ವಯಸ್ಸಿನವರೆಗೆ ಅದನ್ನು ಮುಂದುವರೆಸಿದರೆ, ಅವರು 1.5 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಪಡೆಯಬಹುದು ಮತ್ತು ತಿಂಗಳಿಗೆ 75,000 ರೂಪಾಯಿಗಳ ಪಿಂಚಣಿಯನ್ನು ಸಹ ಪಡೆಯುತ್ತಾರೆ.
ಇದನ್ನೂ ಓದಿ-ದೇಶದ ಕೋಟ್ಯಾಂತರ ಸಣ್ಣ ವ್ಯಾಪಾರಿಗಳಿಗೊಂದು ಭಾರಿ ನೆಮ್ಮದಿಯ ಸುದ್ದಿ!
ಒಟ್ಟು 1.6 ಕೋಟಿ ರೂಪಾಯಿಗಳು ಲಭಿಸುತ್ತವೆ
ಲೆಕ್ಕಾಚಾರದ ಪ್ರಕಾರ 28 ವರ್ಷದಿಂದ 60 ವರ್ಷಗಳವರೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಒಟ್ಟು ಮೊತ್ತ 38 ಲಕ್ಷ 40 ಸಾವಿರ ರೂ. ಆಗುತ್ತದೆ. ಇದರ ಮೇಲೆ ಅಂದಾಜು ಶೇಕಡಾ 10 ರಷ್ಟು ಆದಾಯವನ್ನು ಪರಿಗಣಿಸಿದರೆ, ಒಟ್ಟು ಕಾರ್ಪಸ್ 2.80 ಕೋಟಿ ರೂ. ಆಗುತ್ತದೆ. ಇಲ್ಲಿ ಅನ್ಯೂಟಿ ಖರೀದಿ ನಿಮ್ಮ ಒಟ್ಟು ಕಾರ್ಪಸ್‌ನ ಶೇ.40ರಷ್ಟು ಇರುತ್ತದೆ ಮತ್ತು ಅಂದಾಜು ಅನ್ಯೂಟಿ ದರವನ್ನು ವಾರ್ಷಿಕವಾಗಿ ಶೇ.8 ರಷ್ಟು ಇರಿಸಿದರೆ, ನಂತರ 60 ವರ್ಷ ವಯಸ್ಸಿನ ನಂತರ, ನೀವು ತಿಂಗಳಿಗೆ 75,000 ಪಿಂಚಣಿ ಪಡೆದು, ಒಟ್ಟು 1.6 ಕೋಟಿ ರೂ.ಒಟ್ಟು ಮೊತ್ತವನ್ನು ಸಹ ಪಡೆದುಕೊಳ್ಳಬಹುದು.
ಇದನ್ನೂ ಓದಿ-LIC ಪಾಲಸಿ ಹೊಂದಿರುವವರಿಗೆ ಬಿಗ್ ಶಾಕ್... ಇನ್ಮುಂದೆ ಪಾಲಸಿಗಳ ಮೇಲೆ ಸಿಗಲ್ಲ ಈ ಲಾಭ!
ಇಕ್ವಿಟಿ ಎಕ್ಸ್ಪೋಜರ್ ಮತ್ತು ಸಿಂಗಲ್ ಇನ್ವೆಸ್ಟ್ಮೆಂಟ್ ಆಯ್ಕೆ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಸರ್ಕಾರದ ಬೆಂಬಲಿತ ಸಾಮಾಜಿಕ ಭದ್ರತಾ ಹೂಡಿಕೆ ಯೋಜನೆಯಾಗಿದೆ. ಇದು ಹೂಡಿಕೆದಾರರಿಗೆ ವೈಯಕ್ತಿಕ ಹೂಡಿಕೆಗಳಿಗೆ ಸಾಲ ಮತ್ತು ಇಕ್ವಿಟಿ ಎಕ್ಸ್ಪೋಜರ್ ಎರಡನ್ನೂ ನೀಡುತ್ತದೆ. NPS ಯೋಜನೆಯಲ್ಲಿ, ಖಾತೆದಾರರಿಗೆ ಈಕ್ವಿಟಿಯಲ್ಲಿ ಶೇ.75 ರಷ್ಟು ರಿಸ್ಕ್ ಅನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.