ನವದೆಹಲಿ: Post Office PPF Account: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ಮರುದಿನವೇ ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಪೋಸ್ಟ್ ಆಫೀಸ್ ಸಹ ಅನೇಕ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿದೆ, ಇದರಲ್ಲಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಉತ್ತಮ ಆದಾಯ ಮತ್ತು ಸುರಕ್ಷಿತ ಹೂಡಿಕೆಗಾಗಿ ಹಣವನ್ನು ಹೂಡಿಕೆ ಮಾಡಬಹುದು. ಇಂತಹ ವಿಶೇಷ ಯೋಜನೆಗಳಲ್ಲಿ ಒಂದು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್). ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ. ಅಂಚೆ ಕಚೇರಿಯ ಪಿಪಿಎಫ್ ಯೋಜನೆಯನ್ನು ದೀರ್ಘಕಾಲದವರೆಗೆ ಹೂಡಿಕೆ ಮಾಡಲಾಗುತ್ತದೆ.


COMMERCIAL BREAK
SCROLL TO CONTINUE READING

ಪಿಪಿಎಫ್‌ನಲ್ಲಿ ಹೂಡಿಕೆಯ ಮೇಲಿನ ಬಡ್ಡಿದರ :
ಅಂಚೆ ಕಚೇರಿಯ (Post Office) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ನೀವು ಈಗ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದರೆ, ನಿಮಗೆ ವಾರ್ಷಿಕ 7.1 ಪ್ರತಿಶತದಷ್ಟು ಬಡ್ಡಿ ಸಿಗುತ್ತದೆ. ಈ ಬಡ್ಡಿದರ 2020 ಏಪ್ರಿಲ್ 1 ರಿಂದ ಅನ್ವಯಿಸುತ್ತದೆ. ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಲಾಗುತ್ತದೆ.


PPF vs NPS: ನಿವೃತ್ತಿಯ ನಂತರ ನಿಮಗೆ ಯಾವುದು ಹೆಚ್ಚು ಪ್ರಯೋಜನಕಾರಿ !


ಪಿಪಿಎಫ್ ಖಾತೆಯನ್ನು ಯಾರು ತೆರೆಯಬಹುದು?
ನೀವು ಭಾರತೀಯ ಪ್ರಜೆಯಾಗಿದ್ದರೆ, ನೀವು ಅಂಚೆ ಕಚೇರಿಯಲ್ಲಿ ನಿಮ್ಮ ಅಕೌಂಟ್ ಓಪನ್ ಮಾಡಿ ಪಿಪಿಎಫ್ (PPF) ಖಾತೆಯನ್ನು ತೆರೆಯಬಹುದು. ಇಡೀ ದೇಶದ ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ಕೇವಲ ಒಂದು ಪಿಪಿಎಫ್ ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ ಎಂಬುದನ್ನು ನೆನಪಿನಲ್ಲಿಡಿ.  ಒಂದು ಹಣಕಾಸು ವರ್ಷದಲ್ಲಿ ನೀವು ಮಿನಿಮಂ 500 ರೂ. ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ. ಆದರೆ 1.50 ಲಕ್ಷ ರೂ.ಗಿಂತ ಹೆಚ್ಚು ಹೂಡಿಕೆಯ ಮೇಲೆ ಬಡ್ಡಿ ಲಭ್ಯವಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.


ತೆರಿಗೆ ವಿನಾಯಿತಿಯ ಲಾಭ:
ನೀವು ಪಿಪಿಎಫ್‌ನಲ್ಲಿ ಇರಿಸಿದ ಮೊತ್ತವು ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಅಡಿಯಲ್ಲಿ ಬರುತ್ತದೆ. ಹಣಕಾಸಿನ ವರ್ಷದಲ್ಲಿ ನೀವು ಕನಿಷ್ಠ 500 ರೂಪಾಯಿಗಳನ್ನು ಪಿಪಿಎಫ್ ಖಾತೆಗೆ ಜಮಾ ಮಾಡದಿದ್ದರೆ, ನಿಮ್ಮ ಖಾತೆ ಸಂಪರ್ಕ ಕಡಿತಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಲ ಅಥವಾ ಹಣವನ್ನು ಹಿಂಪಡೆಯುವ ಸೌಲಭ್ಯ ನಿಮಗೆ ಸಿಗುವುದಿಲ್ಲ. ಆದಾಗ್ಯೂ, ಮುಕ್ತಾಯದ ಮೊದಲು, ಕನಿಷ್ಠ ಶುಲ್ಕ 500 ಮತ್ತು 50 ರೂ.ಗಳನ್ನು ಜಮಾ ಮಾಡುವ ಮೂಲಕ, ನೀವು ಅದನ್ನು ಪುನರುಜ್ಜೀವನಗೊಳಿಸಬಹುದು.


ಇದನ್ನೂ ಓದಿ - PPF ಸೇರಿದಂತೆ ಇತರ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ


ನೀವು ಯಾವಾಗ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ:
ಐದನೇ ವರ್ಷಕ್ಕೆ ಒಮ್ಮೆ ಮಾತ್ರ ನೀವು ಈ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಅದರಲ್ಲೂ ಠೇವಣಿ ಮೊತ್ತದ 50 ಪ್ರತಿಶತದವರೆಗೆ ಮಾತ್ರ ನೀವು ಹಣವನ್ನು ಹಿಂತೆಗೆದುಕೊಳ್ಳಬಹುದು. ನೀವು ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ಮುಚ್ಚಲು ಬಯಸಿದರೆ, ಖಾತೆಯನ್ನು ತೆರೆದ ಐದು ವರ್ಷಗಳು ಪೂರ್ಣಗೊಂಡ ನಂತರವೇ ಅದು ಸಾಧ್ಯ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.