PPF vs NPS: ನಿವೃತ್ತಿಯ ನಂತರ ನಿಮಗೆ ಯಾವುದು ಹೆಚ್ಚು ಪ್ರಯೋಜನಕಾರಿ !

PPF vs NPS: ಪ್ರತಿಯೊಬ್ಬರೂ ತಮ್ಮ ನಿವೃತ್ತಿಯ ನಂತರದ ಜೀವನದ ಭದ್ರತೆ ಬಗ್ಗೆ ಯೋಚಿಸುತ್ತಾರೆ. ನಿವೃತ್ತಿ ಬಳಿಕ ಜೀವನ ಉತ್ತಮವಾಗಿರಬೇಕು ಎಂದರೆ ದುಡಿಯುವಾಗ ಹೂಡಿಕೆ ಆರಂಭಿಸಬೇಕು ಎಂದು ಹಣಕಾಸು ಸಲಹೆಗಾರರು ಹೇಳುತ್ತಾರೆ. ಪಿಪಿಎಫ್ ಮತ್ತು ಎನ್‌ಪಿಎಸ್ ನಿವೃತ್ತಿ ನಿಧಿಗಳನ್ನು ಸಿದ್ಧಪಡಿಸುವ ಅತ್ಯುತ್ತಮ ಹೂಡಿಕೆ ಆಯ್ಕೆಗಳಾಗಿವೆ. ಈ ಹೂಡಿಕೆ ಆಯ್ಕೆಗಳ ಮೂಲಕ ಯಾವುದೇ ಅಪಾಯವಿಲ್ಲದೆ ನಿವೃತ್ತಿ ನಿಧಿಯನ್ನು ತಯಾರಿಸಬಹುದು. 

Written by - Yashaswini V | Last Updated : Jan 11, 2021, 04:30 PM IST
  • ಪಿಪಿಎಫ್ ಮತ್ತು ಎನ್‌ಪಿಎಸ್ ನಿವೃತ್ತಿ ನಿಧಿಗಳನ್ನು ಸಿದ್ಧಪಡಿಸುವ ಅತ್ಯುತ್ತಮ ಹೂಡಿಕೆ ಆಯ್ಕೆ
  • ಎನ್‌ಪಿಎಸ್ ಲಾಕ್-ಇನ್ ಅವಧಿ ಕೇವಲ ಮೂರು ವರ್ಷಗಳು
  • ಪಿಪಿಎಫ್‌ನಲ್ಲಿ ಲಾಕ್-ಇನ್ ಅವಧಿ 15 ವರ್ಷಗಳು
PPF vs NPS: ನಿವೃತ್ತಿಯ ನಂತರ ನಿಮಗೆ ಯಾವುದು ಹೆಚ್ಚು ಪ್ರಯೋಜನಕಾರಿ ! title=
PPF vs NPS

ನವದೆಹಲಿ : PPF vs NPS: ಪ್ರತಿಯೊಬ್ಬರೂ ತಮ್ಮ ನಿವೃತ್ತಿಯ ನಂತರದ ಜೀವನದ ಭದ್ರತೆ ಬಗ್ಗೆ ಯೋಚಿಸುತ್ತಾರೆ. ನಿವೃತ್ತಿ ಬಳಿಕ ಜೀವನ ಉತ್ತಮವಾಗಿರಬೇಕು ಎಂದರೆ ದುಡಿಯುವಾಗ ಹೂಡಿಕೆ ಆರಂಭಿಸಬೇಕು ಎಂದು ಹಣಕಾಸು ಸಲಹೆಗಾರರು ಹೇಳುತ್ತಾರೆ. ಪಿಪಿಎಫ್ ಮತ್ತು ಎನ್‌ಪಿಎಸ್ ನಿವೃತ್ತಿ ನಿಧಿಗಳನ್ನು ಸಿದ್ಧಪಡಿಸುವ ಅತ್ಯುತ್ತಮ ಹೂಡಿಕೆ ಆಯ್ಕೆಗಳಾಗಿವೆ. ಈ ಹೂಡಿಕೆ ಆಯ್ಕೆಗಳ ಮೂಲಕ ಯಾವುದೇ ಅಪಾಯವಿಲ್ಲದೆ ನಿವೃತ್ತಿ ನಿಧಿಯನ್ನು ತಯಾರಿಸಬಹುದು. 

PPF vs NPS: ತಿಳಿಯಲೇಬೇಕಾದ ಪ್ರಮುಖ ವಿಷಯಗಳು ! 
ಪಿಪಿಎಫ್ ಕೇಂದ್ರ ಸರ್ಕಾರದ (Central Government) ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ, ಅಲ್ಲಿ ಹೂಡಿಕೆದಾರರು ಎನ್‌ಪಿಎಸ್ ಆದಾಯವನ್ನು ಪಡೆಯುತ್ತಾರೆ (ಪ್ರಸ್ತುತ ಶೇಕಡಾ 7.1). ರಿಟರ್ನ್ಸ್ ಅನ್ನು ಮಾರುಕಟ್ಟೆಗೆ ಲಿಂಕ್ ಮಾಡಲಾಗಿದೆ. ಆದ್ದರಿಂದ ಪಿಪಿಎಫ್ ಹೂಡಿಕೆಯು ಅಪಾಯ ಮುಕ್ತವಾಗಿರುತ್ತದೆ. ಆದರೆ ಎನ್‌ಪಿಎಸ್ ಹೂಡಿಕೆಯು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತದೆ. ಎರಡೂ ರೀತಿಯ ಹೂಡಿಕೆಗಳು ಲಾಕ್-ಇನ್ ಅವಧಿಯನ್ನು ಹೊಂದಿವೆ. ಆದರೆ ಎನ್‌ಪಿಎಸ್ ವಿಷಯದಲ್ಲಿ ಇದು ಕೇವಲ ಮೂರು ವರ್ಷಗಳು ಮತ್ತು ಪಿಪಿಎಫ್‌ನಲ್ಲಿ ಲಾಕ್-ಇನ್ ಅವಧಿ 15 ವರ್ಷಗಳು.

ಇದನ್ನೂ ಓದಿ : ಪಿಪಿಎಫ್ ಖಾತೆ ಮೆಚ್ಯೂರ್ ಆದ ಬಳಿಕ ಏನು ಮಾಡಬೇಕು? ತಜ್ಞರು ಏನ್ ಹೇಳ್ತಾರೆ?

ನೀವು ಎಷ್ಟು ಆದಾಯವನ್ನು ಪಡೆಯುತ್ತೀರಿ? 
ಪಿಪಿಎಫ್‌ (PPF)ನಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರು ಸುಮಾರು 8 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು ಎಂದು ನಿರೀಕ್ಷಿಸಿದರೆ, ಎನ್‌ಪಿಎಸ್‌ನಲ್ಲಿ ಹೂಡಿಕೆದಾರರು ಒಬ್ಬರ ಹೂಡಿಕೆಯ ಮೇಲೆ ಸುಮಾರು 12 ಪ್ರತಿಶತದಷ್ಟು ಲಾಭವನ್ನು ನಿರೀಕ್ಷಿಸಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಆದರೆ ಹಣಕಾಸು ವರ್ಷದಲ್ಲಿ ಪಿಪಿಎಫ್ ಹೂಡಿಕೆಯು 1.5 ಲಕ್ಷ ರೂ.ಗಳ ಹೂಡಿಕೆಯ ಮಿತಿಯನ್ನು ಹೊಂದಿದೆ. ಆದರೆ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಿತಿಯಿಲ್ಲ.

ಹೂಡಿಕೆಯ ಮೇಲೆ ತೆರಿಗೆ ರಿಯಾಯಿತಿ (Tax rebate on investment) :
ಪಿಪಿಎಫ್ ಮತ್ತು ಎನ್‌ಪಿಎಸ್ (NPS) ಮೇಲಿನ ಆದಾಯ ತೆರಿಗೆ ನಿಯಮಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಪಿಪಿಎಫ್‌ನಲ್ಲಿ, ಇಇಇ ವರ್ಗಕ್ಕೆ ಸೇರುವ ಕಾರಣ ಮೆಚುರಿಟಿ ಮೊತ್ತವನ್ನು ಯಾವುದೇ ಆದಾಯ ತೆರಿಗೆಯಿಂದ ಮುಕ್ತಗೊಳಿಸಲಾಗುತ್ತದೆ. ಅಲ್ಲಿ ಹೂಡಿಕೆದಾರರು ಬಡ್ಡಿ ಮತ್ತು ಹೂಡಿಕೆಯ ಮೇಲೆ ಪಡೆದ ಮುಕ್ತಾಯ ಮೊತ್ತದ ಮೇಲೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ. 

ಇದನ್ನೂ ಓದಿ : ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ Post Officeನ 4 ಪ್ರಮುಖ ಉಳಿತಾಯ ಯೋಜನೆಗಳಿವು

ಎನ್‌ಪಿಎಸ್ ಹಿಂಪಡೆಯುವಿಕೆಯ ಮೇಲೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಹೂಡಿಕೆಗೆ ವಿನಾಯಿತಿ ನೀಡಲಾಗುತ್ತದೆ, ಇದು ಹೂಡಿಕೆದಾರರು ಪಾವತಿಸಬೇಕಾದ ಶೇಕಡಾ 10 ರಷ್ಟು ಬಂಡವಾಳ ಲಾಭ ತೆರಿಗೆಯನ್ನು ಒಳಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News