ನವದೆಹಲಿ: ಪಿಪಿಎಫ್ ಹೂಡಿಕೆಯ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಇದು ನಿಮಗೆ ಉತ್ತಮ ಬಡ್ಡಿ ಒದಗಿಸುವ ಹೂಡಿಕೆಯಾಗಿದೆ. ಜೊತೆಗೆ ನಿಮಗೆ ತೆರಿಗೆ ವಿನಾಯಿತಿಯೂ ಲಭ್ಯವಿದೆ. ನೀವು ಪಿಪಿಎಫ್‌ನಲ್ಲಿ ತಿಂಗಳಿಗೆ ಕೇವಲ 1000 ರೂಪಾಯಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ನಿಮ್ಮದಾಗಿಸಬಹುದು. ಪಿಪಿಎಫ್‌ನಲ್ಲಿ 1000 ರೂಪಾಯಿಗಳ ಸಣ್ಣ ಹೂಡಿಕೆಯೊಂದಿಗೆ ನೀವು 26 ಲಕ್ಷದ ಭಾರೀ ಮೊತ್ತವನ್ನು ಹೇಗೆ ಸಂಗ್ರಹಿಸಬಹುದು ಎಂದು ನಾವು ನಿಮಗೆ ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಪಿಪಿಎಫ್‌ನಲ್ಲಿ ಹೂಡಿಕೆ :
ಪಿಪಿಎಫ್ ಖಾತೆಯಲ್ಲಿ ಮೊದಲಿಗೆ ಕನಿಷ್ಠ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ, 15 ವರ್ಷಗಳ ನಂತರ ಖಾತೆ ಮೆಚ್ಯೂರಿಟಿಯ ಬಳಿಕ ಖಾತೆದಾರನು ತನ್ನ ಎಲ್ಲಾ ಹಣವನ್ನು ಹಿಂಪಡೆಯಬಹುದು. ಆದರೆ ಹಣವನ್ನು ಹಿಂತೆಗೆದುಕೊಳ್ಳುವ ಬದಲು ಖಾತೆಯನ್ನು ಚಾಲನೆಯಲ್ಲಿಡಲು ನೀವು ಬಯಸಿದರೆ, ನೀವು ಅದನ್ನು ತುಂಬಾ ಸುಲಭವಾಗಿ ಮಾಡಬಹುದು. 15 ವರ್ಷಗಳ ನಂತರ, ನೀವು ಪಿಪಿಎಫ್ ಖಾತೆಯನ್ನು 5-5 ವರ್ಷಗಳವರೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದರ ಅವಧಿಯನ್ನು ವಿಸ್ತರಿಸಬಹುದು. ಈ ಸಮಯದಲ್ಲಿ, ನೀವು ಪ್ರತಿ ತಿಂಗಳು ಅದರಲ್ಲಿ ಹೂಡಿಕೆ ಮಾಡಲು ಬಯಸಿದರೆ ಅದಕ್ಕೂ ಅವಕಾಶವಿದೆ. ಒಂದೊಮ್ಮೆ ನೀವು ಹೂಡಿಕೆ ಮಾಡದೆ ಖಾತೆಯನ್ನು ಮುಂದುವರೆಸಲು ಇಚ್ಚಿಸಿದರೆ ಅದೂ ಕೂಡ ಸಾಧ್ಯ. ನೀವು ಹೂಡಿಕೆ ಇಲ್ಲದೆ ಅದನ್ನು ಮುಂದುವರೆಸಲು ಬಯಸಿದರೆ  ನಂತರ ಖಾತೆಯಲ್ಲಿನ ಠೇವಣಿಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಪ್ರಸ್ತುತ, ಪಿಪಿಎಫ್‌ಗೆ ಶೇಕಡಾ 7.1 ರಷ್ಟು ಬಡ್ಡಿ ನೀಡಲಾಗುತ್ತಿದೆ.


ತಿಂಗಳಿಗೆ 1000 ರೂಪಾಯಿಗಳ ಹೂಡಿಕೆಯಿಂದ ಎಷ್ಟು ಹಣ ಸಂಗ್ರಹಿಸಬಹುದು?
ನೀವು ಪಿಪಿಎಫ್‌ನಲ್ಲಿ ಪ್ರತಿ ತಿಂಗಳು 1000 ರೂಪಾಯಿ ಹೂಡಿಕೆ (Investment) ಮಾಡಿದರೆ, ನಿಮ್ಮ ಸಣ್ಣ ಹೂಡಿಕೆ ಲಕ್ಷ ರೂಪಾಯಿಗಳಾಗಬಹುದು. ಇದಕ್ಕಾಗಿ ಕೆಲವು ಪ್ರಮುಖ ವಿಷಯಗಳನ್ನು ನೆನಪಿಡಬೇಕು. ಮೊದಲನೆಯದಾಗಿ, ನೀವು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ನೀವು 20 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ. ಆದ್ದರಿಂದ ನೀವು 60 ವರ್ಷ ತುಂಬುವವರೆಗೆ ನೀವು ಅದನ್ನು ಚಾಲನೆಯಲ್ಲಿ ಇಡಬಹುದು. ಮೊದಲ 15 ವರ್ಷಗಳಲ್ಲಿ ತಿಂಗಳಿಗೆ 1000 ರೂಪಾಯಿಗಳ ಹೂಡಿಕೆ ಎಷ್ಟಾಗಲಿದೆ ಮತ್ತು ಅದನ್ನು 5-5 ವರ್ಷಗಳವರೆಗೆ ಹೆಚ್ಚಿಸಿದರೆ ಅದರಿಂದ ಏನು ಪ್ರಯೋಜನ ಎಂದು ತಿಳಿಯೋಣ.


ಇದನ್ನೂ ಓದಿ - Provident Fund News: ನಿಮ್ಮಗೆ UAN ನಂಬರ್ ಗೊತ್ತಿಲ್ಲವೇ, ಅದನ್ನು ಜನರೇಟ್ ಮಾಡಬೇಕಾ? ಹೇಗೆ ಇಲ್ಲಿದೆ


1. ಮೊದಲ 15 ವರ್ಷಗಳ ಕಾಲ ಹೂಡಿಕೆ :
ಪಿಪಿಎಫ್ ಖಾತೆಯಲ್ಲಿ ಮೊದಲಿಗೆ ಕನಿಷ್ಠ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು 15 ವರ್ಷಗಳವರೆಗೆ ಪ್ರತಿ ತಿಂಗಳು 1000 ರೂಪಾಯಿಗಳನ್ನು ಠೇವಣಿ ಮಾಡುವುದನ್ನು ಮುಂದುವರಿಸಿದರೆ, ನೀವು ಒಟ್ಟು 1.80 ಲಕ್ಷ ರೂಪಾಯಿಗಳನ್ನು ಸಂಗ್ರಹಿಸುತ್ತೀರಿ. ಈ ಠೇವಣಿಗೆ ಪ್ರತಿಯಾಗಿ, 15 ವರ್ಷಗಳ ನಂತರ ನಿಮಗೆ 3.25 ಲಕ್ಷ ರೂ. ನೀಡಲಾಗುತ್ತದೆ. ಪ್ರಸ್ತುತ ಪಿಪಿಎಫ್ ಖಾತೆಗೆ 7.1% ಬಡ್ಡಿ ನೀಡಲಾಗುತ್ತಿದ್ದು ಇದರ ಅನ್ವಯ 15 ವರ್ಷಗಳ ಕಾಲ ಪ್ರತಿ ತಿಂಗಳು 1000 ರೂ. ಹೂಡಿಕೆ ಮಾಡುವುದರಿಂದ ನಿಮಗೆ 1.45 ಲಕ್ಷ ರೂ. ಬಡ್ಡಿ ದೊರೆಯುತ್ತದೆ.


2. ನಿಮ್ಮ ಪಿಪಿಎಫ್ ಖಾತೆಯನ್ನು 5 ವರ್ಷಗಳ ಅವಧಿಗೆ ಮುಂದುವರೆಸಿದರೆ:
15 ವರ್ಷಗಳ ನಂತರ ನಿಮ್ಮ ಪಿಪಿಎಫ್‌ (PPF) ಖಾತೆ ಮೆಚ್ಯೂರ್ ಆದ ಬಳಿಕ ನೀವು ಅದನ್ನು 5 ವರ್ಷಗಳ ಅವಧಿಗೆ ವಿಸ್ತರಿಸಿದರೆ ಮತ್ತು ನೀವು ಪ್ರತಿ ತಿಂಗಳು 1000 ರೂಪಾಯಿಗಳನ್ನು ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, 5 ವರ್ಷಗಳ ನಂತರ, 3.25 ಲಕ್ಷ ರೂ.ಗಳ ಮೊತ್ತವು 5.32 ಲಕ್ಷ ರೂ.ಗೆ ಹೆಚ್ಚಾಗುತ್ತದೆ.


3. ಮತ್ತೆ  5 ವರ್ಷಗಳ ಅವಧಿಗೆ ವಿಸ್ತರಿಸಿದರೆ:
5 ವರ್ಷಗಳ ನಂತರ, ನೀವು ಮತ್ತೆ 5 ವರ್ಷಗಳ ಕಾಲ ಪಿಪಿಎಫ್ ಹೂಡಿಕೆಯನ್ನು ಮುಂದುವರೆಸಿದರೆ ಮುಂದಿನ 5 ವರ್ಷಗಳ ನಂತರ, ನಿಮ್ಮ ಪಿಪಿಎಫ್ ಖಾತೆಯಲ್ಲಿನ ಹಣವು 8.24 ಲಕ್ಷ ರೂ.ಗೆ ಹೆಚ್ಚಾಗುತ್ತದೆ.


ಇದನ್ನೂ ಓದಿ - EPFO : ಲಕ್ಷಾಂತರ ಪಿಂಚಣಿದಾರರಿಗೆ ಸಿಗಲಿದೆ ಈ ಪ್ರಯೋಜನ


4. ಮೂರನೇ ಬಾರಿಗೆ 5 ವರ್ಷಗಳ ಕಾಲ ಮುಂದುವರೆಸಿದರೆ...
ನೀವು ಈ ಪಿಪಿಎಫ್ ಖಾತೆಯನ್ನು ಮೂರನೇ ಬಾರಿಗೆ 5 ವರ್ಷಗಳವರೆಗೆ ವಿಸ್ತರಿಸಿದರೆ ಮತ್ತು 1000 ರೂಪಾಯಿಗಳನ್ನು ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, ಒಟ್ಟು ಹೂಡಿಕೆಯ ಅವಧಿ 30 ವರ್ಷಗಳಾಗುತ್ತದೆ.  ಇದರ ಜೊತೆಗೆ ನಿಮ್ಮ ಪಿಪಿಎಫ್ ಖಾತೆಯಲ್ಲಿನ ಮೊತ್ತವು 12.36 ಲಕ್ಷ ರೂಪಾಯಿ ತಲುಪುತ್ತದೆ.


5. ನಾಲ್ಕನೇ ಬಾರಿಗೆ 5 ವರ್ಷಗಳ ಅವಧಿ ವಿಸ್ತರಿಸಿದರೆ- 
ನೀವು ಈ ಪಿಪಿಎಫ್ ಖಾತೆಯನ್ನು 30 ವರ್ಷಗಳ ನಂತರವೂ ಮತ್ತೆ 5 ವರ್ಷಗಳವರೆಗೆ ಹೆಚ್ಚಿಸಿದರೆ ಮತ್ತು ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡುವುದನ್ನು ಮುಂದುವರೆಸಿದರೆ ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪಿಪಿಎಫ್ ಖಾತೆಯಲ್ಲಿ ಮುಂದಿನ 5 ವರ್ಷಗಳ ನಂತರ, ಅಂದರೆ, 35 ನೇ ವರ್ಷದಲ್ಲಿ ನಿಮ್ಮ ಪಿಪಿಎಫ್ ಖಾತೆಯಲ್ಲಿನ ಹಣವು 18.15 ಲಕ್ಷ ರೂ. ಆಗಲಿದೆ.


6. ಐದನೇ ಬಾರಿಗೆ 5 ವರ್ಷಗಳ ಕಾಲ ಮುಂದುವರೆದರು: 
35 ವರ್ಷಗಳ ನಂತರ, ನೀವು ಪಿಪಿಎಫ್ ಖಾತೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸುತ್ತೀರಿ ಮತ್ತು ತಿಂಗಳಿಗೆ 1000 ರೂಪಾಯಿಗಳ ಹೂಡಿಕೆಯನ್ನು ಮುಂದುವರೆಸುತ್ತೀರಿ ಎಂದು ಭಾವಿಸೋಣ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪಿಪಿಎಫ್ ಖಾತೆಯಲ್ಲಿ ಮುಂದಿನ 5 ವರ್ಷಗಳ ನಂತರ, 40 ನೇ ವರ್ಷದಲ್ಲಿ ಒಟ್ಟು 26.32 ಲಕ್ಷ ರೂ. ಲಭ್ಯವಾಗಲಿದೆ. ಅಂದರೆ, ನೀವು 20 ನೇ ವಯಸ್ಸಿನಲ್ಲಿ ಪ್ರಾರಂಭಿಸಿದ 1000 ರೂಪಾಯಿಗಳ ಹೂಡಿಕೆ ನಿವೃತ್ತಿಯವರೆಗೂ 26.32 ಲಕ್ಷ ರೂ. ಮೊತ್ತವಾಗಿ ನಿಮ್ಮ ಕೈ ಸೇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.