ದೆಹಲಿ: ನೀವು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ಓದಲೇ ಬೇಕು. ನಿಮ್ಮ ಸಂಬಳದಿಂದ ಕಡಿತಗೊಳಿಸಿದ ಪಿಎಫ್ (PF) ಮೊತ್ತದ ಮೇಲೆ ಸರ್ಕಾರವು ಗಮನಾರ್ಹವಾದ ಬಡ್ಡಿಯನ್ನು (Interest) ಪಾವತಿಸುತ್ತದೆ. ಆದರೆ ಕೆಲವರು ಕೆಲಸದ ಬದಲಾವಣೆಯೊಂದಿಗೆ ಪಿಎಫ್ ಖಾತೆಯನ್ನು ಖಾಲಿ ಮಾಡಿ ಬಿಡುತ್ತಾರೆ. ಹೀಗೆ ಮಾಡಿದರೆ ಭಾರೀ ನಷ್ಟವಾಗಲಿದೆ.
ಉದ್ಯೋಗಗಳನ್ನು ಬದಲಾಯಿಸುವಾಗ ಪಿಎಫ್ ಖಾತೆಯನ್ನು ಖಾಲಿ ಮಾಡಬೇಡಿ :
ಇಪಿಎಫ್‌ಒ (EPFO) ಪ್ರಕಾರ, ಯಾವುದೇ ಉದ್ಯೋಗಿಯು ಉದ್ಯೋಗಗಳನ್ನು ಬದಲಾಯಿಸುವಾಗ ಪಿಎಫ್ (PF) ಖಾತೆಯನ್ನು ಖಾಲಿ ಮಾಡಬಾರದು. ಆದರೆ ಸಾಮಾನ್ಯವಾಗಿ ಜನರು ಇದನ್ನೇ ಮಾಡುತ್ತಾರೆ. ಯಾಕೆಂದರೆ ಕೆಲಸ ಬಿಟ್ಟ ಮೇಲೆ ಆ ಖಾತೆಗೆ ಬಡ್ಡಿ (Interest) ಬರುವುದಿಲ್ಲ ಎಂಬ ಯೋಚನೆ ಜನರಲ್ಲಿದೆ. ಆದರೆ ಕೆಲಸ ಬಿಟ್ಟ ನಂತರವೂ, ಆ ಖಾತೆಗೆ ಬಡ್ಡಿ ಬರುತ್ತಿರುತ್ತದೆ.
ಇದನ್ನೂ ಓದಿ : Reliance Jio: ಗ್ರಾಹಕರಿಗೆ 'ಭಾರಿ ಅಗ್ಗದ ಪ್ಲಾನ್ ನೀಡಿದ 'ರಿಲಾಯನ್ಸ್ ಜಿಯೋ!
3 ವರ್ಷಗಳವರೆಗೆ ಬಡ್ಡಿ ಸಿಗಲಿದೆ :
ನೌಕರರ ಭವಿಷ್ಯ ನಿಧಿ ಸಂಸ್ಥೆ ಸಕ್ರಿಯವಲ್ಲದ ಖಾತೆಗಳಿಗೂ ಸಹ 3 ವರ್ಷಗಳವರೆಗೆ ಬಡ್ಡಿಯನ್ನು ಪಾವತಿಸುತ್ತದೆ. ಉದ್ಯೋಗಿ ಕೆಲಸ ಬಿಟ್ಟ ನಂತರ ಖಾತೆಯನ್ನು ತೆರವುಗೊಳಿಸದಿದ್ದರೆ, ಇಪಿಎಫ್‌ಒ ಮೂರು ವರ್ಷಗಳ ಕಾಲ ಅದರ ಮೇಲೆ ಬಡ್ಡಿಯನ್ನು ಪಾವತಿಸುತ್ತದೆ. ಆದ್ದರಿಂದ, ಕೆಲಸ ಬದಲಾಯಿಸಿದ ಕೂಡಲೇ ಪಿಎಫ್ ಖಾತೆಯನ್ನು (PF account) ಖಾಲಿ ಮಾಡಿ ಬಿಡಬಾರದು. ಹೊಸ ಕಂಪನಿಯಲ್ಲಿ ಹಳೆಯ ಪಿಎಫ್ ಖಾತೆಯ ಬಗ್ಗೆ ಮಾಹಿತಿಯನ್ನು ನೀಡಬೇಕು.
ಪಿಎಫ್‌ನಲ್ಲಿ ಎಷ್ಟು ಹಣವನ್ನು ಜಮಾ ಮಾಡಲಾಗುತ್ತದೆ :
ನೌಕರರು ಮತ್ತು ಕಂಪನಿ ಎರಡು ಕಡೆಯಿಂದ ಶೇ 12ರಂತೆ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಖಾತೆಗೆ ಸರ್ಕಾರ ಬಡ್ಡಿ ಪಾವತಿಸುತ್ತದೆ. ಪ್ರಸ್ತುತ, ಪಿಎಫ್ ಖಾತೆಗಳಿಗೆ ಶೇ 8.50 ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಬಡ್ಡಿದರವು (Interest rate) ಇತರ ಉಳಿತಾಯ ಖಾತೆಗಳಿಗಿಂತ ಉತ್ತಮವಾಗಿದೆ.
ಇದನ್ನೂ ಓದಿ : LIC Nivesh Plus Plan: ಈ ಯೋಜನೆಯಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.