ನವದೆಹಲಿ : Indane Smart Cylinder : ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತನ್ನ ಗ್ರಾಹಕರಿಗೆ ಹೊಸ ಸಿಲಿಂಡರ್ ಅನ್ನು ಪರಿಚಯಿಸಿದೆ. ಸ್ಮಾರ್ಟ್ ಕಿಚನ್ (Smart kitchen) ಅನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪರಿಚಯಿಸಲಾಗಿದೆ ಎಂದು ಎಂದು ಐಒಸಿ ಹೇಳಿದೆ. ಈ ಹೊಸ ಸಿಲಿಂಡರ್‌ಗೆ ಕಾಂಪೋಸಿಟ್ ಸಿಲಿಂಡರ್ (Composite Cylinder) ಎಂದು ಹೆಸರಿಸಲಾಗಿದೆ. ಈ ಸಿಲಿಂಡರ್‌ನ ವಿಶೇಷತೆಯೆಂದರೆ ಇದರಲ್ಲಿ ಎಷ್ಟು ಅನಿಲ ಉಳಿದಿದೆ, ಎಷ್ಟು ಖಚಾಗಿದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

Indane ಸ್ಮಾರ್ಟ್ ಸಿಲಿಂಡರ್ :
ಇಂಡೇನ್ ಕಾಂಪೋಸಿಟ್ ಸಿಲಿಂಡರ್ (Indane Composite Cylinder) ಸಾಮಾನ್ಯ ಸಿಲಿಂಡರ್ ಗಿಂತ  ಹೆಚ್ಚು ಸುರಕ್ಷಿತವಾಗಿದೆ ಎನ್ನಲಾಗಿದೆ. ಇದು ಮೂರು ಪದರಗಳಿಂದ ಕೂಡಿದೆ. ಇದು ಬ್ಲೋ-ಮೋಲ್ಡ್ ಹೈ-ಡೆನ್ಸಿಟಿ ಪಾಲಿಥಿಲೀನ್ ಇನ್ನರ್ ಲೈನರ್‌ನಿಂದ ಮಾಡಲ್ಪಟ್ಟಿದೆ. ಇದನ್ನು ಪಾಲಿಮರ್-ಸುತ್ತಿದ ಫೈಬರ್ ಗ್ಲಾಸ್ ಪದರದಿಂದ ಮುಚ್ಚಲ್ಪಟ್ಟಿರುತ್ತದೆ. ಇದನ್ನು ಹೊರಗಿನ ಎಚ್‌ಡಿಪಿಇ ಜಾಕೆಟ್‌ಗೆ ಅಳವಡಿಸಬಹುದಾಗಿದೆ. 


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ


ಹೊಸ ಕಾಂಪೋಸಿಟ್ ಸಿಲಿಂಡರ್ ನ ಅನುಕೂಲತೆಗಳೇನು ನೋಡೋಣ..   
 1. ಅವು ಸಾಮಾನ್ಯ ಸಿಲಿಂಡರ್‌ಗಳಿಗಿಂತ ಹೆಚ್ಚು ಹಗುರವಾಗಿರುತ್ತವೆ. 
2. ಸಿಲಿಂಡರ್‌ನ ಕೆಲವು ಭಾಗಗಳು ಪಾರದರ್ಶಕವಾಗಿರುತ್ತವೆ, ಇದರಿಂದಾಗಿ ಸಿಲಿಂಡರ್‌ನಲ್ಲಿ ಎಷ್ಟು ಅನಿಲ ಉಳಿದಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಇದರ ಪ್ರಕಾರ ಮುಂದಿನ ಬುಕಿಂಗ್ (LPG booking) ಯಾವಾಗ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.
3. ಮುಖ್ಯ ವಿಚಾರ ಎಂದರೆ ಅದು ತುಕ್ಕು ಹಿಡಿಯುವುದಿಲ್ಲ. ಇದು ನೆಲದ ಮೇಲೆ ಯಾವುದೇ ಕಲೆ ಅಥವಾ ಗುರುತು ಉಳಿಸುವುದಿಲ್ಲ.
4. ಮಾಡರ್ನ್ ಕಿಚನ್ (Modern Kitchen) ಅನ್ನು ಮನಸ್ಸಿನಲ್ಲಿಟ್ಟುಕೊಂಡು ಕಾಂಪೋಸಿಟ್ ಸಿಲಿಂಡರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
5. ಪ್ರಸ್ತುತ, ದೆಹಲಿ, ಗುರುಗ್ರಾಮ್, ಹೈದರಾಬಾದ್, ಫರಿದಾಬಾದ್ ಮತ್ತು ಲುಧಿಯಾನದಲ್ಲಿ ಆಯ್ದ ವಿತರಕರ ಬಳಿ  ಮಾತ್ರ 5 ಕೆಜಿ ಮತ್ತು 10 ಕೆಜಿ ಗಾತ್ರಗಳಲ್ಲಿ ಈ ಸಿಲಿಂಡರ್ ಲಭ್ಯವಿದೆ. ಶೀಘ್ರದಲ್ಲೇ ಇದನ್ನು ದೇಶಾದ್ಯಂತ ಮಾರಾಟ ಮಾಡಲಾಗುವುದು.
6. 10 ಕೆಜಿ ಸಿಲಿಂಡರ್ ಅಡುಗೆ ಮತ್ತು ಸಬ್ಸಿಡಿಯಿರುವ (LPG Subsidy) ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ 5 ಕೆಜಿ ಸಿಲಿಂಡರ್ ಸಬ್ಸಿಡಿ ರಹಿತ ವಿಭಾಗದಲ್ಲಿಯೂ  ಲಭ್ಯವಿದೆ.


ಇದನ್ನೂ ಓದಿ : EPFO : ಮನೆಯಲ್ಲಿ ಕುಳಿತು ನಿಮ್ಮ PF ಖಾತೆಯ ಬ್ಯಾಂಕ್ ಅಕೌಂಟ್ ನವೀಕರಿಸಬಹುದು ; ಹೇಗೆ ಇಲ್ಲಿ ನೋಡಿ


ಹಳೆಯ ಸಿಲಿಂಡರ್ ನೊಂದಿಗೆ  ಎಕ್ಸ್ಚೇಂಜ್ ಮಾಡಿಕೊಳ್ಳಬಹುದು : 
ಈ ಸಿಲಿಂಡರ್ ಗಾಗಿ ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ. 10 ಕೆಜಿ ಸಿಲಿಂಡರ್‌ಗೆ ಭದ್ರತಾ ಠೇವಣಿ 3350 ರೂ., 5 ಕೆಜಿ ಸಿಲಿಂಡರ್‌ಗೆ ಭದ್ರತಾ ಠೇವಣಿ 2150 ರೂ. ಪಾವತಿಸಬೇಕಾಗುತ್ತದೆ.  ನೀವು ಇಂಡೇನ್ ಗ್ರಾಹಕರಾಗಿದ್ದರೆ, ನಿಮ್ಮ ಅಸ್ತಿತ್ವದಲ್ಲಿರುವ ಸಿಲಿಂಡರ್ ಅನ್ನು ಹೊಸ ಕಾಂಪೋಸಿಟ್ ಸಿಲಿಂಡರ್ ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ, ಭದ್ರತಾ ಠೇವಣಿಯ ಬ್ಯಾಲೆನ್ಸ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಕಾಂಪೋಸಿಟ್ ಸಿಲಿಂಡರ್‌ಗಳು ಕೂಡಾ ಸಾಮಾನ್ಯ ಸಿಲಿಂಡರ್‌ಗಳಂತೆ ಮನೆ ಮನೆ ವಿತರಣೆಯಾಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ