800 ರೂಪಾಯಿ ದಾಟಲಿದೆ ಗ್ಯಾಸ್ ಸಿಲಿಂಡರ್..ಆದರೂ ನೀವು 300 ರೂ. ಉಳಿಸಬಹುದು..!

ಪೇಟಿಎಂ ತನ್ನ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುತ್ತಿದೆ. ಈ ಆಫರ್ ಮೊದಲ ಬಳಕೆದಾರರಿಗೆ ಮಾತ್ರ. ಯಾರಾದರೂ ಪೇಟಿಎಂ ಮೂಲಕ ಗ್ಯಾಸ್ ಬುಕ್  ಮಾಡಿದರೆ ಮತ್ತು ಪಾವತಿಗೆ ಪೇಟಿಎಂ ಬಳಸಿದರೆ, ಆ ಗ್ರಾಹಕರಿಗೆ  ಈ ಆಫರ್ ಸಿಗಲಿದೆ.

Written by - Ranjitha R K | Last Updated : Jun 30, 2021, 12:20 PM IST
  • ಸಿಲಿಂಡರ್ ಬುಕ್ ಮೇಲೆ ಸಿಗಲಿದೆ 300 ರೂ.ಗಳ ರಿಯಾಯಿತಿ
  • 3 ಸಿಲಿಂಡರ್ ಬುಕ್ ಮೇಲೆ ಸಿಗಲಿದೆ ರಿಯಾಯಿತಿ
  • ಪೇಟಿಎಂ ತನ್ನ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುತ್ತಿದೆ.
800 ರೂಪಾಯಿ ದಾಟಲಿದೆ ಗ್ಯಾಸ್ ಸಿಲಿಂಡರ್..ಆದರೂ ನೀವು 300 ರೂ. ಉಳಿಸಬಹುದು..! title=
ಸಿಲಿಂಡರ್ ಬುಕ್ ಮೇಲೆ ಸಿಗಲಿದೆ 300 ರೂ.ಗಳ ರಿಯಾಯಿತಿ (photo india.com)

ನವದೆಹಲಿ : ಅಡುಗೆ ಅನಿಲ ಬೆಲೆ (LPG Price) 809 ರೂಪಾಯಿಗಳಿಂದ 835 ರೂಪಾಯಿ ಮುಟ್ಟಿದೆ.  ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದರ ನಿಗದಿಯಾಗಿದೆ.  ನೀವು ಗ್ಯಾಸ್ ಬುಕ್ಕಿಂಗ್ ನಲ್ಲಿ 300 ರೂಪಾಯಿ ಉಳಿಸಬಹುದು.  ನೀವು ಮೂರು ಸಿಲಿಂಡರ್ ಬುಕ್ಕಿಂಗ್ ನಲ್ಲಿ ತಲಾ 300 ರೂಪಾಯಿ ಉಳಿಸಬಹುದು. ಅದು ಹೇಗೆ..ನೋಡೋಣ.

1. ಪೇಟಿಎಮ್ ನಿಂದ ಗ್ಯಾಸ್ ಬುಕ್ ಮಾಡಿ
ಪೇಟಿಎಂ (Paytm) ತನ್ನ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುತ್ತಿದೆ. ಈ ಆಫರ್ ಮೊದಲ ಬಳಕೆದಾರರಿಗೆ ಮಾತ್ರ. ಯಾರಾದರೂ ಪೇಟಿಎಂ ಮೂಲಕ ಗ್ಯಾಸ್ ಬುಕ್ (Gas booking) ಮಾಡಿದರೆ ಮತ್ತು ಪಾವತಿಗೆ ಪೇಟಿಎಂ ಬಳಸಿದರೆ, ಆ ಗ್ರಾಹಕರಿಗೆ  ಈ ಆಫರ್ ಸಿಗಲಿದೆ. ಈ ಬುಕಿಂಗ್ ವೇಳೆ ಬಳಕೆದಾರರಿಗೆ ಪೇಟಿಎಂ ಫಸ್ಟ್ ಪಾಯಿಂಟ್ಸ್ ಸಿಗಲಿದೆ.  ಈ ಮೂಲಕ 900 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.  ಈ 900 ರೂಪಾಯಿ ಮೂರು ಸಿಲಿಂಡರ್ ಬುಕ್ಕಿಂಗ್ ವೇಳೆ ನಿಮಗೆ ಸಿಗಲಿದೆ. 

ಇದನ್ನೂ ಓದಿ : Government Scheme: ಕೇವಲ 7 ರೂ. ಉಳಿಸಿ ಮಾಸಿಕ 5,000 ರೂ. ಪಿಂಚಣಿ ಪಡೆಯಿರಿ

ಇಂಡೇನ್, ಹೆಚ್ ಪಿ, ಭಾರತ್ ಗ್ಯಾಸ್  ಸಿಲಿಂಡರ್ ಗಳಿಗೆ ಇದು ಅನ್ವಯವಾಗಲಿದೆ.  ಮೂರು ಸಿಲಿಂಡರ್ ಬುಕ್ಕಿಂಗ್ ವೇಳೆ, ಪ್ರತಿ ಸಿಲಿಂಡರ್ ಪೇಮೆಂಟ್ ಮೇಲೆ 300 ರೂಪಾಯಿ ಕ್ಯಾಶ್ ಬ್ಯಾಕ್  (Cash back) ಸಿಗಲಿದೆ. ಅಂದರೆ ಒಟ್ಟಾರೆ 900 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.

ಪೇಟಿಎಂ ನಲ್ಲಿ ಗ್ಯಾಸ್ ಬುಕ್ ಮಾಡುವುದು ಹೇಗೆ..?
1. ಪೇಟಿಎಂ ಆಪ್ ನಲ್ಲಿ (Paytm App) ಬುಕ್ ಗ್ಯಾಸ್ ಸಿಲಿಂಡರ್  ಕ್ಲಿಕ್ ಮಾಡಿ.
2. ಅಲ್ಲಿ ನಿಮ್ಮ ಗ್ಯಾಸ್ ಕಂಪನಿಯ ಹೆಸರು ಕ್ಲಿಕ್ ಮಾಡಿ
3. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಗ್ರಾಹಕರ ಸಂಖ್ಯೆ ನಮೂದಿಸಿ, ಪೇಟಿಎಂ ಆಪ್ ಮೂಲಕ ಪೇಮೆಂಟ್ ಮಾಡಿ
4. ಇಷ್ಟಾದ ನಂತರ ನಿಮ್ಮ ಗ್ಯಾಸ್ ಎಜೆನ್ಸಿಯಿಂದ ನಿಮಗೆ ಸಿಲಿಂಡರ್ ಡೆಲಿವೆರಿಯಾಗುತ್ತದೆ
5. ಕೆಲವು ನಿಮಿಷಗಳಲ್ಲಿ ಪೇಟಿಎಂ ಕ್ಯಾಶ್ ಬ್ಯಾಕ್ (Paytm Cashback) ನಿಮ್ಮ ಪೇಟಿಎಂ ಖಾತೆಗೆ ಬರುತ್ತದೆ
ಇನ್ನು ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ಟ್ರ್ಯಾಕ್ ಮಾಡುವ ಸೌಲಭ್ಯವನ್ನು ಕೂಡಾ ಪೇಟಿಎಂ ತನ್ನ ಗ್ರಾಹಕರಿಗೆ ನೀಡಲಿದೆ. 

ಇದನ್ನೂ ಓದಿ : Gold-Silver Price : ಚಿನ್ನದ ಬೆಲೆಯಲ್ಲಿ ಇಂದು ದೊಡ್ಡ ಬದಲಾವಣೆ : ನಿಮ್ಮ ನಗರಗಳಲ್ಲಿ ಪರಿಷ್ಕೃತ ದರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News