ನವದೆಹಲಿ : ರೈಲ್ವೆಯಲ್ಲಿ ಸಿಗುವ ಹಾರದ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಿರುತ್ತವೆ. ಈ ಬಗ್ಗೆ ಲೋಕಸಭೆಯಕಲ್ಲೂ ಚರ್ಚೆ ನಡೆಯಿತು. ಪ್ರತಿ ರೈಲಿನ (Railway) ಪ್ಯಾಂಟ್ರಿ ಕಾರಿನಲ್ಲಿ ಆಹಾರದ ಗುಣಮಟ್ಟವನ್ನು (Food quality) ಮೇಲ್ವಿಚಾರಣೆ ನಡೆಸಲು ಐಆರ್‌ಸಿಟಿಸಿ ಆಹಾರ ನಿರೀಕ್ಷಕರನ್ನು ನೇಮಿಸಲಾಗಿದೆಯೇ ಎಂದು ಸರ್ಕಾರವನ್ನು ಕೇಳಲಾಯಿತು. ಈ ಕುರಿತು ರೈಲ್ವೆ ಸಚಿವ ಪಿಯೂಷ್ ಗೋಯಲ್ (Piyush Goyal) ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭೆಯಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ (Piyush Goyal), ಪ್ರತೀ ಬೋಗಿಯಲ್ಲೂ ಐಆರ್‌ಸಿಟಿಸಿ (IRCTC) ಮೇಲ್ವಿಚಾರಕರನ್ನು ನೇಮಿಸಿದೆ ಎಂದು ತಿಳಿಸಿದ್ದಾರೆ. ವಿಶೇಷ ರಾಜಧಾನಿ, ಶತಾಬ್ದಿ, ಡುರೊಂಟೊ, ತೇಜಸ್ ಮತ್ತು ವಂದೇ ಭಾರತ್ ರೈಲುಗಳಲ್ಲಿ ಈ ನೇಮಕಾತಿಗಳನ್ನು ಮಾಡಲಾಗಿದೆ. ಇದಲ್ಲದೆ ವಿಭಾಗೀಯ ಆಧಾರದ ಮೇಲೆ ಮೇಲ್ / ಎಕ್ಸ್‌ಪ್ರೆಸ್ ರೈಲುಗಳಲ್ಲಿಯೂ ಮೇಲ್ವಿಚಾರಕರನ್ನು (Food inspector) ನೇಮಿಸಲಾಗಿದೆ ಎಂದು ಲೋಕಸಭೆಯಲ್ಲಿ ತಿಳಿಸಲಾಯಿತು. 


ಇದನ್ನೂ ಓದಿ : Mobile App: ರೈಲ್ವೆ ಪ್ರಯಾಣಿಕರಿಗೆ ಬಿಗ್ ರಿಲೀಫ್, ಈಗ ಮತ್ತೆ ಸಿಗುತ್ತಿದೆ ಈ ಸೌಲಭ್ಯ


ಕಳಪೆ ಗುಣಮಟ್ಟದ ಆಹಾರದ ಬಗ್ಗೆ ದೂರು ಸಲ್ಲಿಸುವುದು ಹೇಗೆ ?
ಬೋಗಿಯಲ್ಲಿ ಫುಡ್ ಇನ್ಸ್ ಪೆಕ್ಟರ್ ಇರುವ ಬಗ್ಗೆ ಪ್ರಯಾಣಿಕರಿಗೆ (Passengers) ಮಾಹಿತಿ ನೀಡಲಾಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಲಾಯಿತು. ಅಲ್ಲದೆ ಕಳಪೆ ಗುಣಮಟ್ಟದ ಆಹಾರ (food) ಪೂರೈಕೆಯಾದಲ್ಲಿ ಪ್ರಯಾಣಿಕರು ಹೇಗೆ ದೂರು ಸಲ್ಲಿಸುವುದು ಎಂಬ ಬಗ್ಗೆಯೂ ಕೇಳಲಾಯಿತು. ಈ ಬಗ್ಗೆ ಉತ್ತರಿಸಿದ ಸರ್ಕಾರ, ರೈಲ್ವೆಯ ಐಟಿ ವ್ಯವಸ್ಥೆಯ ಮೂಲಕ ದೂರುಗಳನ್ನು ದಾಖಲಿಸಲು ಮೆಕ್ಯಾನಿಸಮ್ ತಯಾರು ಮಾಡಲಾಗಿದೆ. ಈ ಕಾರ್ಯವಿಧಾನವು ರೈಲ್ವೆ  ಸಹಾಯವಾಣಿ ಸಂಖ್ಯೆ 139, ಟ್ವಿಟರ್ ಹ್ಯಾಂಡಲ್, CPGRAMS, E-Mail ಮತ್ತು SMSಗಳನ್ನು ಒಳಗೊಂಡಿದೆ ದು ತಿಳಿಸಿದೆ . ಈ ಪ್ರಕ್ರಿಯೆಯ ಬಗ್ಗೆ ಇ-ಟಿಕೆಟ್ ಮತ್ತು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಮಾಹಿತಿ ನೀಡಲಾಗಿದೆ. ಪ್ರಯಾಣದ ಸಮಯದಲ್ಲಿ ಅಡುಗೆ ಸೇವೆಗಳ ಮೇಲ್ವಿಚಾರಣೆಗೆ ಐಆರ್‌ಸಿಟಿಸಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಸರ್ಕಾರ ಹೇಳಿದೆ.


ಇಲ್ಲಿಯವರೆಗೆ ಎಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ :
ಲೋಕಸಭೆಯಲ್ಲಿ, ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್‌ಗೆ ಬಂದಿರುವ ದೂರುಗಳ ಬಗ್ಗೆ, ಇಲ್ಲಿಯವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೇಳಲಾಯಿತು. ಈ ಕುರಿತು ಮಾಹಿತಿ ನೀಡಿದ ಸರ್ಕಾರ, ಏಪ್ರಿಲ್ ಒಂದು 2019ರಿಂದ  ಇಲ್ಲಿವರೆಗೆ ಐಆರ್‌ಸಿಟಿಸಿ ಮೇಲ್ವಿಚಾರಕರಿಗೆ ದೂರುಗಳು ಬಂದಿವೆ ಎಂದು ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಆಹಾರದ ಗುಣಮಟ್ಟ(food quality) , ಪ್ಯಾಂಟ್ರಿ ಕಾರು ಮತ್ತು ಅಡಿಗೆ ಘಟಕದಲ್ಲಿ ಸ್ವಚ್ಛತೆ ಬಗ್ಗೆ ಕೆಳಿ ಬಂದಿರುವ ದೂರುಗಳ ವಿರುದ್ದ ಯಾವ ರೀತಿ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆಯೂ ಪ್ರಶ್ನೆಗಳು ಕೇಳಿ ಬಂತು. 


ಇದನ್ನೂ ಓದಿ : IRCTC : ಟಿಕೆಟ್ ರದ್ದಾದ ಕೂಡಲೇ ನಿಮ್ಮ ಖಾತೆ ಸೇರಲಿದೆ ರೀಫಂಡ್ ಹಣ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.