Google Latest Updates - Google ನ ಈ ಅದ್ಭುತ ವೈಶಿಷ್ಟ್ಯಗಳಿಂದ ನಿಮ್ಮ ಫೋನ್ ಇನ್ನಷ್ಟು ಸ್ಮಾರ್ಟ್ ಆಗಲಿದೆ

Google Latest Updates - ಆಂಡ್ರಾಯ್ಡ್ (Android) ಫೋನ್‌ಗಳಲ್ಲಿ Google ಮತ್ತೊಂದು ದೊಡ್ಡ ಬದಲಾವಣೆ ಮಾಡಿದೆ. ಈಗ ನಿಮ್ಮ ಲಾಕ್ ಮಾಡಿದ ಆಂಡ್ರಾಯ್ಡ್ ಫೋನ್‌ನಲ್ಲಿಯೂ ಕೂಡ ನೀವು Google Assistant ಬಳಸಲು ಸಾಧ್ಯವಾಗಲಿದೆ. ಅಂದರೆ, ಕೆಲವು ಕೆಲಸಗಳಿಗಾಗಿ ನೀವು ಮತ್ತೆ ಮತ್ತೆ ಫೋನ್ ತೆರೆಯುವ ಅಗತ್ಯವಿಲ್ಲ. ಲಾಕ್ ಮಾಡಿದ ಫೋನ್‌ನಲ್ಲಿ ನೀವು Google Assistant ಸಹಾಯದಿಂದ ಹಲವು ಕೆಲಸಗಳನ್ನು ಮಾಡಬಹುದಾಗಿದೆ.

Written by - Nitin Tabib | Last Updated : Feb 24, 2021, 11:23 AM IST
  • ತನ್ನ ಅಂಡ್ರಾಯಿಡ್ ಫೋನ್ ಬಳಕೆದಾರರಿಗೆ ಎರಡು ನೂತನ ವೈಶಿಷ್ಟ್ಯ ನೀಡಲು ಮುಂದಾದ ಗೂಗಲ್.
  • ಈ ವೈಶಿಷ್ಟ್ಯಗಳ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡ ಗೂಗಲ್,
  • ಈ ಎರಡೂ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.
Google Latest Updates - Google ನ ಈ ಅದ್ಭುತ ವೈಶಿಷ್ಟ್ಯಗಳಿಂದ ನಿಮ್ಮ ಫೋನ್ ಇನ್ನಷ್ಟು ಸ್ಮಾರ್ಟ್ ಆಗಲಿದೆ title=
Google Latest Update (File Photo)

ನವದೆಹಲಿ: Google Latest Updates - ಇನ್ಮುಂದೆ ನಿಮ್ಮ ಸ್ಮಾರ್ಟ್ ಫೋನ್ ಮತ್ತಷ್ಟು ಸ್ಮಾರ್ಟ್ ಆಗಲಿದೆ. ಏಕೆಂದರೆ ಅಂಡ್ರಾಯ್ದಿಗಾಗಿ ಗೂಗಲ್ ಮತ್ತೆರಡು ಅದ್ಭುತ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಮೊದಲನೆಯದಾಗಿ ಶೀಘ್ರವೇ ನೀವು ನಿಮ್ಮ SMS ಗಳನ್ನು ಶೆಡ್ಯೂಲ್ ಮಾಡಬಹುದು. ಇದಲ್ಲದೆ ಗೂಗಲ್ ಅಸಿಸ್ಟೆಂಟ್ ಬಳಕೆಯ ಮತ್ತೊಂದು ವಿಧಾನ ಕೂಡ ನಿಮಗೆ ಸಿಗಲಿದೆ. ಹಾಗಾದರೆ ಬನ್ನಿ ಈ ಎರಡೂ ವೈಶಿಷ್ಟ್ಯಗಳ ಕುರಿತು ವಿವರವಾಗಿ ತಿಳಿದುಕೊಳ್ಳೋಣ.

ಇನ್ಮುಂದೆ ನೀವು ಕಿರುಸಂದೇಶಗಳನ್ನು ಶೆಡ್ಯೂಲ್ ಮಾಡಬಹುದು
Google ನೀವು ನಿಮ್ಮ ಮೊಬೈಲ್ ಫೋನ್ ನಿಂದ ಮಾಡುವ ಕಿರುಸಂದೇಶಗಳ ವಿಧಾನ ಬದಲಾಯಿಸಲಿದೆ. ಈ ಕುರಿತು ತಮ್ಮ ಅಧಿಕೃತ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಗೂಗಲ್ ಬಳಕೆದಾರರು ಇನ್ಮುಂದೆ ತಮ್ಮ ಯಾವುದೇ ಸಂದೇಶಗಳನ್ನು ಶೆಡ್ಯೂಲ್ ಮಾಡಬಹುದು ಎಂದಿದೆ. ಅಂದರೆ, ನೀವು ನಿಮ್ಮ ಅನೂಕೂಲಕ್ಕೆ ತಕ್ಕಂತೆ ಯಾರಿಗಾದರೂ ಕೂಡ ಸಂದೇಶ ಕಳುಹಿಸುವ ಟೈಮ್ ಸೆಟ್ ಮಾಡಬಹುದು. ಪ್ರಸ್ತುತ ನೀವು ಸಂದೇಶ ಟೈಪ್ ಮಾಡಿದ ತಕ್ಷಣ ನಿಮ್ಮ ಕಿರುಸಂದೇಶ ತಲುಪಬೇಕೆನ್ನುವವರಿಗೆ ತಲುಪುತ್ತದೆ. ಆದರೆ ವಿವಿಧ ಟೈಮ್ ಝೋನ್ ನಲ್ಲಿರುವ ನಿಮ್ಮ ಬಂಧುಮಿತ್ರರಿಗೆ ಕಿರು ಸಂದೇಶ ತಲುಪಿಸಲು ಈ ನೂತನ ವೈಶಿಷ್ಟ್ಯ ನಿಮಗೆ ಸಹಾಯ ಮಾಡಲಿದೆ. ಇದಲ್ಲದೆ ಪ್ರೊಫೆಷನಲ್ ಸಂದೇಶಗಳನ್ನು ಕಳುಹಿಸಲು ಕೂಡ ಇದು ಅನುಕೂಲ ಮಾಡಲಿದೆ.

ಇದನ್ನೂ ಓದಿ- ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ ಈ Google Service, ಇಂದೇ ನಿಮ್ಮ Data Backup ತೆಗೆದುಕೊಳ್ಳಿ

ಲಾಕ್ ಆಗಿರುವ ಸ್ಮಾರ್ಟ್ ಫೋನ್ ನಲ್ಲಿಯೂ ಕೂಡ Google Assistant ಬಳಸಬಹುದು
ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಮತ್ತೊಂದು ದೊಡ್ಡ ಬದಲಾವಣೆಯನ್ನು ಮಾಡಿದೆ. ಈಗ ನಿಮ್ಮ ಲಾಕ್ ಮಾಡಿದ ಆಂಡ್ರಾಯ್ಡ್ ಫೋನ್‌ನಲ್ಲಿಯೂ ಸಹ ನೀವು Google Assistant ಬಳಸಲು ಸಾಧ್ಯವಾಗಲಿದೆ. ಅಂದರೆ, ಕೆಲವು ಕೆಲಸಗಳಿಗಾಗಿ ನೀವು ಪದೇ ಪದೇ ಫೋನ್ ತೆರೆಯುವ ಅವಶ್ಯಕತೆ ಇಲ್ಲ. ಲಾಕ್ ಮಾಡಿದ ಫೋನ್‌ ನಿಂದಲೇ  ನೀವು Google Assistant ಸಹಾಯದಿಂದ ಅನೇಕ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ. ಉದಾಹರಣೆಗೆ, ನೀವು ಲಾಕ್ ಮಾಡಿದ ಸ್ಮಾರ್ಟ್‌ಫೋನ್‌ನಲ್ಲಿ ಅಲಾರಂ ಹೊಂದಿಸಲು ಸಾಧ್ಯವಾಗುತ್ತದೆ, ನೆಚ್ಚಿನ ಹಾಡುಗಳನ್ನು ಆನಂದಿಸಲು ಸಾಧ್ಯವಾಗುತ್ತದೆ ಮತ್ತುVoice Command ಮೂಲಕ ಯಾರಿಗಾದರೂ ಕೂಡ ಕರೆ ಮಾಡಬಹುದು.

ಇದನ್ನೂ ಓದಿ-ಶೀಘ್ರದಲ್ಲೇ ಬದಲಾಗಲಿದೆ Google ಸರ್ಚ್ ಮಾಡುವ ವಿಧಾನ

ಈ ಸ್ಮಾರ್ಟ್ ಫೋನ್ ಗಳಲ್ಲಿ ಈ ವೈಶಿಷ್ಟ್ಯಗಳು ಕಾರ್ಯನಿರ್ವಹಿಸಲಿವೆ
Google ಹೇಳಿಕೆಯ ಪ್ರಕಾರ Android 7 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಎಲ್ಲ ಆಪರೇಟಿಂಗ್ ಸಿಸ್ಟಂಗಳಲ್ಲಿ ಈ ಎರಡೂ ವೈಶಿಷ್ಟ್ಯಗಳ ಅಪ್ಡೇಟ್ ಶೀಘ್ರವೇ ಬಿಡುಗಡೆಯಾಗಲಿದೆ. ಇದಕ್ಕಾಗಿ ಕಂಪನಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ಈ ಅಪ್ಡೇಟ್ ಗಳು ಅಂಡ್ರಾಯಿಡ್ ಫೋನ್ ಬಳಕೆದಾರರಿಗೆ ಸಿಗಲಿವೆ.

ಇದನ್ನೂ ಓದಿ-Googleನ ನೂತನ ವೈಶಿಷ್ಟ್ಯ, ಶೀಘ್ರವೇ ಸ್ಮಾರ್ಟ್ ಫೋನ್ ಮೂಲಕ Heart Rate ಪರೀಕ್ಷೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News