ನವದೆಹಲಿ: Tirupati Tour - ದೇಶದ ಅತ್ಯಂತ ಶ್ರೀಮಂತ ಹಾಗೂ ಪ್ರಸಿದ್ಧ ದೆವ್ಹಸ್ಥಾನಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನ ಕೂಡ ಒಂದು. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ ಮತ್ತು ವೆಂಕಟೇಶ್ವರನ ದರ್ಶನವನ್ನು ಪಡೆಯುತ್ತಾರೆ. ಈ ದೇವಸ್ಥಾನದಲ್ಲಿ ದರ್ಶನ ಪಡೆಯಲು ಭಕ್ತಾದಿಗಳು ಹಲವು ತಿಂಗಳು ಮುಂಚಿತವಾಗಿ ಬುಕಿಂಗ್ ಮಾಡಬೇಕಾಗುತ್ತದೆ. ಹೀಗಿರುವಾಗ, ಒಂದು ವೇಳೆ ಬೇಸಿಗೆ ರಜೆಯಲ್ಲಿ ನೀವೂ ಕೂಡ ತಿಮ್ಮಪ್ಪನ ದರ್ಶನ ಪಡೆಯುವ ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ರೇಲ್ವೆ ಇಲಾಖೆ ನಿಮಗೊಂದು ಅದ್ಭುತ ಟೂರ್ ಪ್ಯಾಕೇಜ್ ಸೌಕರ್ಯ ನೀಡುತ್ತಿದೆ. ಈ ಪ್ಯಾಕೇಜ್ ಹೆಸರು ತಿರುಪತಿ ದೇವಸ್ಥಾನಮ್ ಎಕ್ಸ್ ದೆಹಲಿ ಆಗಿದೆ. 

COMMERCIAL BREAK
SCROLL TO CONTINUE READING

ತಿರುಪತಿ ದೇವಸ್ಥಾನಮ್ ಎಕ್ಸ್ ದೆಹಲಿ ಟೂರ್ ಪ್ಯಾಕೇಜ್ ವೇಳಾಪಟ್ಟಿ
ತಿರುಪತಿ ದೇವಸ್ಥಾನಮ್ ಯಾತ್ರೆ ಒಟ್ಟು 1 ರಾತ್ರಿ ಎರಡು ದಿನಗಳನ್ನು ಒಳಗೊಂಡಿರಲಿದೆ. ಈ ಯಾತ್ರೆ ದೆಹಲಿಯಿಂದ ಯಾತ್ರೆ ಆರಂಭಗೊಳ್ಳಲಿದ್ದು, ಕೊನೆಯಲ್ಲಿ ಯಾತ್ರಿಗಳು ಚೆನ್ನೈನಿಂದ ದೆಹಲಿಗೆ ವಿಮಾನದ ಮೂಲಕ ವಾಪಸ್ಸಾಗಲಿದ್ದಾರೆ. ಈ ಯಾತ್ರೆ ಮೇ 15 ರಂದು ದೆಹಲಿಯಿಂದ ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳಲಿದೆ. ಈ ಯಾತ್ರೆಯ ವೇಳೆ ಯಾತ್ರಿಗಳಿಗೆ ಆಂಧ್ರ ಪ್ರದೇಶದ ಶ್ರೀ ಕಾಳಹಸ್ತಿ ದೇವಸ್ಥಾನ ಹಾಗೂ ತಿರುಚನೂರ್ ಪದ್ಮಾವತಿ ದೇವಸ್ಥಾನಕ್ಕೂ ಭೇಟಿ ನೀಡುವ ಅವಕಾಶ ಸಿಗಲಿದೆ. ನಂತರ ಅಲ್ಲಿಯೇ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ವ್ಯವಸ್ಥೆ ಇರಲಿದೆ. ಮಾರನೆ ದಿನ ಯಾತ್ರಿಗಳಿಗೆ ಬೆಳಗಿನ ಉಪಹಾರ ನೀಡಲಾಗುವುದು. ನಂತರ ಹೋಟೆಲ್ ನಿಂದ ಯಾತ್ರಿಗಳು ಬಾಲಾಜಿ ದರ್ಶನಕ್ಕೆ ತೆರಳಲಿದ್ದಾರೆ. ತಿಮ್ಮಪ್ಪನ ದರ್ಶನದ ಬಳಿಕ ಯಾತ್ರಿಗಳು ಚೆನ್ನೈ ವಿಮಾನನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸ್ಸಾಗಲಿದ್ದಾರೆ. 


Flipkart Sale: ಕೇವಲ ರೂ.266ಕ್ಕೆ ಖರೀದಿಸಿ ರಿಯಲ್ ಮೀ ಕಂಪನಿಯ ಈ ಜಬರ್ದಸ್ತ್ ಸ್ಮಾರ್ಟ್ ಫೋನ್

ಈ ಪ್ಯಾಕೇಜ್ ನಲ್ಲಿ ಸಿಗುವ ಸೌಲಭ್ಯಗಳೇನು?
>> ಸಂಪೂರ್ಣ ಪ್ಯಾಕೇಜ್ ನಲ್ಲಿ ಯಾತ್ರಿಗಳಿಗೆ ವಿಮಾನ ಯಾತ್ರೆಯ ಅವಕಾಶ ಇರಲಿದೆ.
>> ರಾತ್ರಿಯ ವೇಳೆ ಹೋಟೆಲ್ ನಲ್ಲಿ ತಂಗುವ ಸೌಲಭ್ಯ ಕಲ್ಪಿಸಲಾಗುವುದು.
>> ಸಂಪೂರ್ಣ ಯಾತ್ರೆಯ ಅವಧಿಯಲ್ಲಿ ಲಂಚ್, ಡಿನ್ನರ್ ಹಾಗೂ ಬ್ರೇಕ್ ಫಾಸ್ಟ್ ಸೌಲಭ್ಯ ಇರಲಿದೆ.
>> ಬಸ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುವುದು
>> ಇನ್ನೊಂದೆಡೆ ತಿರುಪತಿಯಲ್ಲಿ ದರ್ಶನ ಟಿಕೆಟ್ ಕೂಡ ಸಿಗಲಿದೆ.


ಇದನ್ನೂ ಓದಿ-Surya Grahan 2022: ಸೂರ್ಯ ಗ್ರಹಣದ ದಿನ ಗರ್ಭಿಣಿ ಮಹಿಳೆಯರು ಈ ಕೆಲಸ ಮಾಡಬಾರದು, ಮಗುವಿನ ಮೇಲೆ ಪ್ರಭಾವ ಉಂಟಾಗುತ್ತದೆ

>> ಸಂಪೂರ್ಣ ಯಾತ್ರೆಯ ವೇಳೆ ಟೂರ್ ಗೈಡ್ ಕೂಡ ಇರಲಿದ್ದಾರೆ. 
>> ಟ್ರಾವೆಲ್ ಇನ್ಸೂರೆನ್ಸ್ ಲಾಭ ಕೂಡ ಸಿಗಲಿದೆ
>> ಪ್ಯಾಕೇಜ್ ಗೆ ಎಷ್ಟು ಹಣ ನೀಡಬೇಕು
>> ಒಂದು ವೇಳೆ ನೀವು ಒಂಟಿಯಾಗಿ ಯಾತ್ರೆ ಕೈಗೊಳ್ಳಬೇಕು ಎಂದರೆ ನೀವು ರೂ.20, 750 ಹಣ ಪಾವತಿಸಬೇಕು.
>> ಇಬ್ಬರು ವ್ಯಕ್ತಿಗಳು ಯಾತ್ರೆ ಕೈಗೊಳ್ಳಬೇಕು ಎಂದರೆ, ಪ್ರತಿಯೊಬ್ಬರೂ 18, 890 ರೂ. ನೀಡಬೇಕು.
>> ಮೂವರು ವ್ಯಕ್ತಿಗಳು ಪ್ರಯಾಣಿಸಬೇಕು ಎಂದರೆ ಪ್ರತಿಯೊಬ್ಬ ವ್ಯಕ್ತಿ ರೂ.18,780 ಪಾವತಿಸಬೇಕು.
>> ಮಕ್ಕಳಿಗಾಗಿ ನೀವು ಪ್ರತ್ಯೇಕ ಶುಲ್ಕ ಪಾವತಿಸಬೇಕು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ