ನವದೆಹಲಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಶ್ರೀ ರಾಮಾಯಣ ಯಾತ್ರೆಯ ವಿಶೇಷ ರೈಲುಗಳನ್ನು ನವೆಂಬರ್ 7ರಿಂದ ರಾಷ್ಟ್ರ ರಾಜಧಾನಿ ದೆಹಲಿಯಿಂದ ಪ್ರಾರಂಭಿಸಿದೆ. ಈ ಸ್ಥಳಗಳಲ್ಲಿ ತೀರ್ಥಯಾತ್ರೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ವಿಶೇಷ ರೈಲುಗಳು ಹಲವಾರು ಧಾರ್ಮಿಕ ನಗರಗಳಿಗೆ ಸಂಚರಿಸಲಿವೆ.


COMMERCIAL BREAK
SCROLL TO CONTINUE READING

ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲಿನ(Shri Ramayana Yatra Special Trains) ಮೊದಲ ಪ್ರವಾಸವು ಭಾನುವಾರ ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಯಿತು. ಭಗವಾನ್ ಶ್ರೀ ರಾಮನ ಜೀವನ ಮತ್ತು ಸಂಸ್ಕೃತ ಮಹಾಕಾವ್ಯ ರಾಮಾಯಣದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ತಲುಪಲು ಈ ರೈಲು ಸಿದ್ಧವಾಗಿದೆ. ಒಟ್ಟು 17 ದಿನಗಳಲ್ಲಿ ಈ ಪ್ರಯಾಣ ಪೂರ್ಣಗೊಳ್ಳಲಿದೆ.


ಇದನ್ನೂ ಓದಿ: SHOCKING: ಫ್ಲಿಪ್‌ಕಾರ್ಟ್ ನಲ್ಲಿ ಐಪೋನ್ ಬುಕ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?


IRCTC ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆ ಪ್ರಕಾರ, ಶ್ರೀ ರಾಮಾಯಣ ಯಾತ್ರೆ(Shri Ramayana Yatra)ಯ ಯಾತ್ರೆಗೆ ವಿವಿಧ ಪ್ಯಾಕೇಜ್‌ಗಳು ಲಭ್ಯವಿದೆ. ಮುಂದಿನ ಪ್ರವಾಸವು ನ.16 ರಿಂದ ಪ್ರಾರಂಭವಾಗಲಿದ್ದು, 3ನೇ ಪ್ರಯಾಣವು ನ.25ರಿಂದ ಪ್ರಾರಂಭವಾಗುತ್ತದೆ ಎಂದು IRCTC ತಿಳಿಸಿದೆ.


ಶ್ರೀ ರಾಮಾಯಣ ಯಾತ್ರಾ ವಿಶೇಷ ಪ್ಯಾಕೇಜ್


ಶ್ರೀ ರಾಮಾಯಣ ಯಾತ್ರಾ ಎಕ್ಸ್‌ ಪ್ರೆಸ್ ನಲ್ಲಿ ವಿವಿಧ ಪ್ಯಾಕೇಜ್ ಗಳಿದ್ದು, 12 ರಾತ್ರಿಗಳು/13 ದಿನಗಳ ಶ್ರೀ ರಾಮಾಯಣ ಯಾತ್ರಾ ಎಕ್ಸ್‌ ಪ್ರೆಸ್-ಮಧುರೈ, ಇದು ನ.16 ರಂದು ಹೊರಡಲಿದೆ. ಮತ್ತೊಂದು ರೈಲು ಶ್ರೀ ರಾಮಾಯಣ ಯಾತ್ರಾ ಎಕ್ಸ್‌ ಪ್ರೆಸ್-ಶ್ರೀ ಗಂಗಾನಗರದ 16 ರಾತ್ರಿ/17 ದಿನಗಳ ಪ್ಯಾಕೇಜ್ ಇದ್ದು, ರೈಲು ನ.25 ರಂದು ಹೊರಡಲಿದೆ ಎಂದು IRCTC ಹೇಳಿಕೆಯಲ್ಲಿ ತಿಳಿಸಿದೆ.


ಶ್ರೀರಾಮಾಯಣ ಯಾತ್ರೆ ವಿಶೇಷ ರೈಲುಗಳು: ವೇಳಾಪಟ್ಟಿ ಮತ್ತು ನಿಲುಗಡೆ


* ಅಯೋಧ್ಯೆ- ಶ್ರೀ ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ದೇವಸ್ಥಾನ, ನಂದಿಗ್ರಾಮ್‌ನಲ್ಲಿರುವ ಭಾರತ ಮಂದಿರ


* ಬಿಹಾರ-ಸೀತಾಮರ್ಹಿ, ರಾಮ-ಜಾಂಕಿ ದೇವಸ್ಥಾನ


* ವಾರಾಣಾಸಿ, ಪ್ರಯಾಗ, ಚಿತ್ರಕೂಟ ಮತ್ತು ಶೃಂಗವೇರಪುರದಲ್ಲಿರುವ ದೇವಾಲಯಗಳು


* ನಾಸಿಕ್- ತ್ರಯಂಬಕೇಶ್ವರ ದೇವಸ್ಥಾನ ಮತ್ತು ಪಂಚವಟಿ


* ಹಂಪಿ- ಕೃಷ್ಕಿಂಧಾ ನಗರ


* ರಾಮೇಶ್ವರಂ- ಪ್ರವಾಸದ ಕೊನೆಯ ತಾಣ


ಇದನ್ನೂ ಓದಿ: Good news...! ಕೇವಲ 634 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಲಭ್ಯ


ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲು ದರ


ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತ ಸರ್ಕಾರದ ಉಪಕ್ರಮ ‘ದೇಖೋ ಅಪ್ನಾ ದೇಶ್’(Dekho Apna Desh)ಗೆ ಅನುಗುಣವಾಗಿ IRCTC ಈ ವಿಶೇಷ ಪ್ರವಾಸಿ ರೈಲನ್ನು ಪ್ರಾರಂಭಿಸಿದೆ. 2AC ಗೆ ಪ್ರತಿ ವ್ಯಕ್ತಿಗೆ 82,950 ರೂ. ಮತ್ತು 1AC ವರ್ಗಕ್ಕೆ 1,02,095 ರೂ. ದರವನ್ನು ನಿಗದಿಪಡಿಸಲಾಗಿದೆ. ಈ ದರಗಳು AC ಕ್ಲಾಸ್ ರೈಲು ಪ್ರಯಾಣ, AC ಹೋಟೆಲ್‌ಗಳಲ್ಲಿ ವಸತಿ, ಊಟ (VEG ಮಾತ್ರ), ಎಲ್ಲಾ ವರ್ಗಾವಣೆ ಮತ್ತು AC ವಾಹನಗಳಲ್ಲಿ ವೀಕ್ಷಣೆ, ಪ್ರಯಾಣ ವಿಮೆ ಮತ್ತು IRCTC ಟೂರ್ ಮ್ಯಾನೇಜರ್‌ಗಳ ಸೇವೆ ಇತ್ಯಾದಿಗಳನ್ನು ಒಳಗೊಂಡಿದೆ. ಎಲ್ಲಾ ಅಗತ್ಯ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪ್ರವಾಸದ ಸಮಯದಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಪ್ರಯಾಣವನ್ನು ಒದಗಿಸುವ ಮೂಲಕ ಕಾಳಜಿ ವಹಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ