SHOCKING: ಫ್ಲಿಪ್‌ಕಾರ್ಟ್ ನಲ್ಲಿ ಐಪೋನ್ ಬುಕ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?

53 ಸಾವಿರ ರೂ. ತೆತ್ತು ಫ್ಲಿಪ್‌ಕಾರ್ಟ್ ಆರ್ಡರ್ ಸ್ವೀಕರಿಸಿದಾಗ ಬಾಕ್ಸ್ ನಲ್ಲಿ ಐಫೋನ್ 12 ಸ್ಮಾರ್ಟ್‌ಫೋನ್‌ ಬದಲು 5 ರೂ. ಮೌಲ್ಯದ ಸೋಪ್ ಬಾರ್ ಇರುವುದು ಕಂಡುಬಂದಿದೆ.  

Written by - Puttaraj K Alur | Last Updated : Oct 11, 2021, 06:28 PM IST
  • ಆನ್ಲೈನಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಆರ್ಡರ್ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು
  • 53 ಸಾವಿ ರೂ. ಬೆಲೆಯ ಐಫೋನ್ 12 ಆರ್ಡರ್ ಬದಲಿಗೆ ಗ್ರಾಹಕರಿಗೆ ಸಿಕ್ಕಿದ್ದು 5 ರೂ. ಬೆಲೆಯ ಸೋಪ್ ಬಾರ್
  • ಫ್ಲಿಪ್‌ಕಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್ ಸಿಗುತ್ತದೆ ಎಂದುಕೊಂಡು ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಘಾತ
SHOCKING: ಫ್ಲಿಪ್‌ಕಾರ್ಟ್ ನಲ್ಲಿ ಐಪೋನ್ ಬುಕ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ? title=
ಐಫೋನ್ ಬದಲು ಸೋಪು ಸ್ವೀಕರಿಸಿದ ಗ್ರಾಹಕ

ನವದೆಹಲಿ: ಬಿಗ್ ಬಿಲಿಯನ್ ಡೇಸ್ ಸೇಲ್(Flipkart Big Billion Days Sale) ಸಮಯದಲ್ಲಿ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ವೆಬ್‌ಸೈಟ್‌ನಿಂದ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ  ಗ್ರಾಹಕರೊಬ್ಬರಿಗೆ ಆಘಾತವಾಗಿದೆ. ಪ್ಯಾಕೇಜ್ ತನ್ನ ಮನೆಬಾಗಿಲಿಗೆ ಬಂದಾಗ ಅದನ್ನು ಬಿಚ್ಚಿನೋಡಿದ ಅವರು ಹೌಹಾರಿ ಹೋಗಿದ್ದಾರೆ.

ಭರ್ಜರಿ ಡಿಸ್ಕೌಂಟ್ ಸಿಗುತ್ತದೆ ಎಂದುಕೊಂಡು ಗ್ರಾಹಕರೊಬ್ಬರು ದುಬಾರಿ ಬೆಲೆಯ ಐಫೋನ್ 12(iPhone 12)ಅನ್ನು ಆರ್ಡರ್ ಮಾಡಿದ್ದರು. ಇದಕ್ಕೆ ಮಾರಾಟದ ಸಮಯದಲ್ಲಿ ಭಾರೀ ರಿಯಾಯಿತಿಯಲ್ಲಿ ಲಭ್ಯವಿತ್ತು. 53 ಸಾವಿರ ರೂ. ತೆತ್ತು ಫ್ಲಿಪ್‌ಕಾರ್ಟ್ ಆರ್ಡರ್(Flipkart Order) ಸ್ವೀಕರಿಸಿದಾಗ ಬಾಕ್ಸ್ ನಲ್ಲಿ ಐಫೋನ್ 12 ಸ್ಮಾರ್ಟ್‌ಫೋನ್‌ ಬದಲು 5 ರೂ. ಮೌಲ್ಯದ ಸೋಪ್ ಬಾರ್ ಇರುವುದು ಕಂಡುಬಂದಿದೆ.  

ಇದನ್ನೂ ಓದಿ: Hero Dhamaka festive offer: ಬೈಕ್ ಖರೀದಿಸುವವರಿಗೆ ಸಿಗಲಿದೆ 12,500 ರೂ. ಲಾಭ

ಸ್ಮಾರ್ಟ್‌ಫೋನ್‌ಗಳಂತಹ ದುಬಾರಿ ಸರಕುಗಳನ್ನು ಆರ್ಡರ್ ಮಾಡುವಾಗ ಫ್ಲಿಪ್‌ಕಾರ್ಟ್ ಸಾಕಷ್ಟು ವಿಶ್ವಾಸಾರ್ಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್(Flipkart Fraud) ಆಗಿದ್ದರೂ ಈ ಘಟನೆ ಈಗ ಅನೇಕರನ್ನು ಬೆಚ್ಚಿಬೀಳಿಸಿದೆ. ಸಿಮ್ರನ್ ಪಾಲ್ ಸಿಂಗ್ ಎಂಬ ಬಳಕೆದಾರರು ಇತ್ತೀಚೆಗೆ ತಮಗೂ ಈ ರೀತಿಯ ಅನುಭವವಾಗಿದ್ದು, ಆರ್ಡರ್ ಸ್ವೀಕರಿಸಿದಾಗ ನನಗೂ ಒಂದು ಸಾಬೂನು ಬಂದಿತ್ತು ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದಲ್ಲದೇ ಗ್ರಾಹಕರು ಸ್ಮಾರ್ಟ್‌ಫೋನ್‌(SmartPhone)ಗೆ ಬದಲಾಗಿ ಎರಡು ತುಂಡು ನಿರ್ಮಾ ಸೋಪನ್ನು ಪಡೆದಿದ್ದಾರೆ ಎಂದು ವರದಿಯು ವಿವರಿಸಿದೆ. ಇದಲ್ಲದೆ, GoAndroid ಹೆಸರಿನ ಪುಟವು ಡೆಲಿವರಿ ಬಾಯ್ ಜೊತೆಗೆ OTP ಹಂಚಿಕೊಳ್ಳಲು ನಿರಾಕರಿಸಿದ ಗ್ರಾಹಕರು ಪೋಸ್ಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದೆ.

ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ ತಿಳಿಯಿರಿ

ಒಂದು ವೇಳೆ ಒಟಿಪಿ(OTP)ಯನ್ನು ಹಂಚಿಕೊಂಡಿದ್ದರೆ, ಆ ಗ್ರಾಹಕರು ಆರ್ಡರ್ ಸ್ವೀಕರಿಸಿದ್ದಾರೆ ಎಂದರ್ಥ. ಇ-ಕಾಮರ್ಸ್ ಕಸ್ಟಮರ್ ಕೇರ್ ಬಗ್ಗೆಯೂ ಅವರು ದೂರು ನೀಡಿದ್ದಾರೆ. ಕೆಲವು ದಿನಗಳ ಸತತ ಪ್ರಯತ್ನ ಮತ್ತು ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಜೊತೆ ಮಾನಾಡಿದ ಬಳಿಕ ಫ್ಲಿಪ್‌ಕಾರ್ಟ್ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಫ್ಲಿಪ್‌ಕಾರ್ಟ್(Flipkart) ಸದ್ಯ ಗ್ರಾಹಕರ ಈ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದ್ದು, ಶೀಘ್ರವೇ ಹಣವನ್ನು ಮರುಪಾವತಿಸಲಾಗುವುದು ಎಂದು ತಿಳಿಸಿತ್ತು. ಗ್ರಾಹಕರಿಗೆ ಈ ರೀತಿಯಾಗಿರುವುದಕ್ಕೆ ಇ-ಕಾಮರ್ಸ್ ಕಂಪನಿ ಕ್ಷಮೆಯಾಚಿಸಿದೆ. ಐಫೋನ್ ಬದಲು ಸೋಪು ಪಡೆದುಕೊಂಡಿದ್ದ ಗ್ರಾಹಕರು ಇತ್ತೀಚೆಗಷ್ಟೇ ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ವಾಪಸ್ ಜಮಾ ಆಗಿರುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ಆನ್ಲೈನಲ್ಲಿ ದುಬಾರಿ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News