ನವದೆಹಲಿ :  IRCTC Rann Utsav: ಕರೋನಾ ನಂತರ, ಮತ್ತೆ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಎಲ್ಲಾ ಹಬ್ಬಗಳನ್ನು ಕೋವಿಡ್ ಮಾರ್ಗಸೂಚಿಗಳೊಂದಿಗೆ (COVID Guidelines) ಆಚರಿಸಲಾಗುತ್ತಿದೆ.  ಇದೀಗ ಗುಜರಾತ್‌  ಪ್ರಸಿದ್ಧ ರಣ್ ಉತ್ಸವವನ್ನು (Rann Utsav) ಆಯೋಜಿಸುತ್ತಿದೆ. 


COMMERCIAL BREAK
SCROLL TO CONTINUE READING

ಭಾರತೀಯ ರೈಲ್ವೆ ಇದೀಗ ಉತ್ತಮ ಪ್ಯಾಕೇಜ್ ಅನ್ನು ತಂದಿದೆ. IRCTC ನಿಮ್ಮ ಬಜೆಟ್‌ನಲ್ಲಿ ರಣ್‌ ಉತ್ಸವಕ್ಕೆ (Rann Utsav) ಭೇಟಿ ನೀಡುವ ಅವಕಾಶವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ಅತ್ಯಂತ ಕಡಿಮೆ ಹಣದಲ್ಲಿ ಈ ವಿಶೇಷ ಹಬ್ಬವನ್ನು ವೀಕ್ಷಿಸಬಹುದು. 


ಇದನ್ನೂಓದಿ : Movie Tickets Offers: ಅಗ್ಗದ ದರದಲ್ಲಿ ಸಿನಿಮಾ ನೋಡುವ ಅವಕಾಶ! ಈ ಬ್ಯಾಂಕ್ ನೀಡುತ್ತಿದೆ 50% ರಿಯಾಯಿತಿ


ಏನಿದು ಪ್ಯಾಕೇಜ್ ?
IRCTCಯ ಈ ವಿಶೇಷ ಪ್ಯಾಕೇಜ್‌ನಲ್ಲಿ,  4 ರಾತ್ರಿ ಮತ್ತು 5 ಹಗಲುಪ್ರವಾಸದ ಅವಕಾಶ ಪಡೆಯಬಹುದು. 5 ದಿನಗಳ ಪ್ರವಾಸದಲ್ಲಿ,  ಗುಜರಾತ್‌ನ ಪ್ರಸಿದ್ಧ ರಣ್‌ ಉತ್ಸವಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ.  ಇದರಲ್ಲಿ, ಪ್ರವಾಸಿಗರು ಗುಜರಾತ್‌ನ ಪ್ರಸಿದ್ಧ ಕಚ್ ಉತ್ಸವ ಅಥವಾ ರಣ್‌ ಉತ್ಸವಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಇಲ್ಲಿ ಗುಜರಾತ್‌ನ ವಿವಿಧ ಸಾಂಸ್ಕೃತಿಕ ವಿಶಿಷ್ಟ ಅಭಿವ್ಯಕ್ತಿಗೊಳ್ಳಲಿದೆ.  


ಎಲ್ಲಿ ಪ್ರಯಾಣಿಸಲು ಅವಕಾಶ ಸಿಗುತ್ತದೆ ? :
ಗುಜರಾತಿನ (Gujrat) ರಣ್‌ ಉತ್ಸವದಲ್ಲಿ ಕುಶಲಕರ್ಮಿಗಳ ಸೃಜನಶೀಲತೆ, ಜಾನಪದ ಸಂಗೀತ ಮತ್ತು ಪ್ರದರ್ಶನ ಮತ್ತು ವಿವಿಧ ಸಾಂಸ್ಕೃತಿಕ ವೈವಿಧ್ಯತೆಯನ್ನು ನೋಡಬಹುದು. ಇದಕ್ಕಾಗಿ, ಪ್ರವಾಸಿಗರು ಮಹಾರಾಷ್ಟ್ರದ (Maharastra) ಮುಂಬೈನಿಂದ ರೈಲು ಪ್ರಯಾಣ ಆರಂಭಿಸಬೇಕಾಗುತ್ತದೆ. ಅವರು ಭುಜ್, ರಣ್‌ ಉತ್ಸವ್ ಟೆಂಟ್ ಸಿಟಿ, ವೈಟ್ ರಾನ್ ಆಫ್ ಕಚ್‌ನಲ್ಲಿ ಸೂರ್ಯೋದಯ ಇತ್ಯಾದಿಗಳನ್ನು ವೀಕ್ಷಿಸುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : Maruti Suzuki S-Cross: ಈ SUV ಯ ಹೊಸ ಮಾದರಿಯನ್ನು ನೋಡಿ, ನೀವು ಹಳೆಯದನ್ನು ಮರೆತೇ ಬಿಡುತ್ತೀರಿ


ಪ್ಯಾಕೇಜ್‌ನಲ್ಲಿ ಏನೆಲ್ಲಾ ಸಿಗಲಿದೆ? 
IRCTC ಯ ರಣ್‌ ಉತ್ಸವ್ ಪ್ಯಾಕೇಜ್‌ನಲ್ಲಿ, ಪ್ರವಾಸಿಗರು ಪ್ರಯಾಣದ ಸಮಯದಲ್ಲಿ ಡಿಲಕ್ಸ್ ಟೆಂಟ್‌ಗಳಲ್ಲಿ ಎಸಿ ಸ್ಟೇ (AC Stay), ಮತ್ತು ಆಹಾರವನ್ನು ಪಡೆಯಲಿದ್ದಾರೆ. ಅಂದರೆ, ಒಮ್ಮೆ ಈ ಪ್ಯಾಕೇಜ್‌ನಲ್ಲಿ ಹಣವನ್ನು ಠೇವಣಿ ಮಾಡಿದರೆ, ಆಹಾರ ಮತ್ತು ವಸತಿ ಉಚಿತವಾಗಿ ಸಿಗಲಿದೆ. 


ರದ್ದತಿ ನೀತಿ :
IRCTCಯ ರಣ್ ಉತ್ಸವ್ ಪ್ಯಾಕೇಜ್‌ನ ವಿಶೇಷತೆಯೆಂದರೆ, ಬುಕಿಂಗ್ ಪ್ರಾರಂಭವಾಗುವ 30 ದಿನಗಳ ಮೊದಲು ಅದನ್ನು ರದ್ದುಗೊಳಿಸಿದರೆ, ಪ್ರವಾಸಿಗರಿಂದ ಶೇಕಡಾ 5 ರಷ್ಟು ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಇದಲ್ಲದೇ, 29 ರಿಂದ 11 ದಿನಗಳ ನಡುವಿನ ಬುಕಿಂಗ್ ಅನ್ನು ರದ್ದುಗೊಳಿಸಿದರೆ 25% ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ. ಬುಕಿಂಗ್ ಅನ್ನು 11 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ರದ್ದುಗೊಳಿಸಿದರೆ, ಹಣ ವಾಪಸ್‌ ನೀಡಲಾಗುವುದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ