ಕೇರಳದ ನಂತರ ಇದೀಗ ಈ ರಾಜ್ಯದಲ್ಲೂ Zika Virus ಪತ್ತೆ, 50 ವರ್ಷದ ಮಹಿಳೆಗೆ ಸೋಂಕು

ರಾಜ್ಯದಲ್ಲಿ ಜಿಕಾ ವೈರಸ್ ನ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ, ಸರ್ಕಾರಿ ವೈದ್ಯಕೀಯ ತಂಡವು ಶನಿವಾರ ಬೆಲ್ಸರ್ ಗ್ರಾಮಕ್ಕೆ ಭೇಟಿ ನೀಡಿತು.  ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿರುವ ತಂಡ ವೈರಸ್ (Virus) ಹರಡದಂತೆ ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆ ನೀಡಿದೆ

Written by - Ranjitha R K | Last Updated : Aug 1, 2021, 08:30 AM IST
  • ಪುಣೆಯಲ್ಲಿ ಕಂಡುಬಂದ Zika Virus ಪ್ರಕರಣ
  • ತಿರುವನಂತಪುರಂನಲ್ಲಿ ವೈರಸ್ ನ 2 ಹೊಸ ಪ್ರಕರಣಗಳು ವರದಿ
  • ಆತಂಕ ಹೆಚ್ಚಿಸುಟ್ಟಿದೆ Zika Virus
ಕೇರಳದ ನಂತರ ಇದೀಗ ಈ ರಾಜ್ಯದಲ್ಲೂ Zika Virus ಪತ್ತೆ,  50 ವರ್ಷದ ಮಹಿಳೆಗೆ ಸೋಂಕು  title=
ಪುಣೆಯಲ್ಲಿ ಕಂಡುಬಂದ Zika Virus ಪ್ರಕರಣ (photo zee news)

ಮುಂಬೈ: ಮಹಾರಾಷ್ಟ್ರದಲ್ಲೂ Zika Virus  ಆತಂಕ ಎದುರಾಗಿದೆ. ಜಿಕಾ ವೈರಸ್  ಸೋಂಕಿನ ಮೊದಲ ಪ್ರಕರಣ ಪುಣೆಯಲ್ಲಿ ಪತ್ತೆಯಾಗಿದೆ. ಪುರಂದರ ತಹಸಿಲ್‌ನ ಬೆಲ್ಸರ್ ಗ್ರಾಮದ ನಿವಾಸಿ  50 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.  ವರದಿಯ ಪ್ರಕಾರ, ಜಿಕಾ ವೈರಸ್ ಸೋಂಕಿನ ಹೊರತಾಗಿ, ಮಹಿಳೆ ಚಿಕೂನ್ ಗುನ್ಯಾದಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ. 

ಆರೋಗ್ಯ ಇಲಾಖೆ ಅಲರ್ಟ್ : 
ರಾಜ್ಯದಲ್ಲಿ ಜಿಕಾ ವೈರಸ್ ನ (Zika Virus) ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ, ಸರ್ಕಾರಿ ವೈದ್ಯಕೀಯ ತಂಡವು ಶನಿವಾರ ಬೆಲ್ಸರ್ ಗ್ರಾಮಕ್ಕೆ ಭೇಟಿ ನೀಡಿತು.  ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿರುವ ತಂಡ ವೈರಸ್ (Virus) ಹರಡದಂತೆ ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆ ನೀಡಿದೆ. ಈ ನಡುವೆ, ಜನ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಂಕಿತ ಮಹಿಳೆ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮಹಿಳೆಯ ಕುಟುಂಬ ಸದಸ್ಯರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. 

ಇದನ್ನೂ ಓದಿ : PM Kisan : 9ನೇ ಕಂತಿನ ₹2,000 ಈ ದಿನ ರೈತರ ಖಾತೆಗೆ : ಈ ಡಾಕ್ಯುಮೆಂಟ್ ತಕ್ಷಣವೇ ಅಪ್‌ಡೇಟ್ ಮಾಡಿ; ಇಲ್ಲದಿದ್ದರೆ ಹಣ ಸಿಕ್ಕಿಹಾಕಿಕೊಳ್ಳುತ್ತೆ!

ಕೇರಳದಲ್ಲಿ ಜಿಕಾ ವೈರಸ್ ನ 63 ಪ್ರಕರಣ : 
ಕೇರಳದಲ್ಲಿ (Kerala) ಇದುವರೆಗೆ ಒಟ್ಟು 63 ಜಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ. ಇದೀಗ ಮತ್ತೆ ಎರಡು ಹೊಸ ಪ್ರಕರಣಗಳು ವರದಿಯಾಗಿವೆ. . ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಕಿ ಸೇರಿದಂತೆ ಮತ್ತೊಬ್ಬ ಮಹಿಳೆಯಲ್ಲಿ ಸೋಂಕು ಕಂಡು ಬಂದಿರುವುದನ್ನು  ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ (Zika Virus Case) ಸಂಖ್ಯೆ 63 ಕ್ಕೆ ಏರಿಕೆಯಾಗಿದೆ.

ಸೋಂಕಿತ 14 ವರ್ಷದ ಬಾಲಕಿ ಮತ್ತು 24 ವರ್ಷದ ಮಹಿಳೆ ಇಬ್ಬರೂ ತಿರುವನಂತಪುರಂ ನಿವಾಸಿಗಳಾಗಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ತಿರುವನಂತಪುರಂ ವೈದ್ಯಕೀಯ ಕಾಲೇಜು ವೈರಾಲಜಿ ಲ್ಯಾಬ್ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಮಾಡಿದ ಪರೀಕ್ಷೆಗಳಿಂದ ಸೋಂಕು ದೃಢಪಟ್ಟಿದೆ. 

ಇದನ್ನೂ ಓದಿ : Babul Supriyo : ರಾಜಕೀಯಕ್ಕೆ ಗುಡ್ ಬೈ ಹೇಳಿ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬಿಜೆಪಿ MP 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News