PM Kisan Samman Nidhi Update:  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ ರೂ 6000 ಅಂದರೆ 2000 ರೂಪಾಯಿಗಳ ಮೂರು ಕಂತುಗಳನ್ನು ಕಳುಹಿಸುತ್ತದೆ. ಆದರೆ, ಇಲ್ಲಿಯವರೆಗೆ ಈ ಯೋಜನೆ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಕೆಲವೊಮ್ಮೆ ಅರ್ಜಿಗೆ ಸಂಬಂಧಿಸಿದಂತೆ ಮತ್ತು ಕೆಲವೊಮ್ಮೆ ಅರ್ಹತೆಯ ಬಗ್ಗೆ ಅನೇಕ ಹೊಸ ನಿಯಮಗಳನ್ನು ಮಾಡಲಾಗಿದೆ. ಈಗ ಈ ಯೋಜನೆಯಲ್ಲಿ, ಪತಿ ಮತ್ತು ಪತ್ನಿ ಇಬ್ಬರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುವ ಬಗ್ಗೆ ನಿಯಮ ಏನು ಹೇಳುತ್ತದೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್ ಯೋಜನೆಯ ನಿಯಮಗಳ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ  ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಯಾರಾದರೂ, ಈ ರೀತಿಯಾಗಿ ಸರ್ಕಾರದ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡರೆ ಸರ್ಕಾರವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದಲ್ಲದೆ, ಅಂತಹ ರೈತರನ್ನು ಅನರ್ಹರ ಪಟ್ಟಿಗೆ ಸೇರಿಸಬಹುದು. 
ಅನರ್ಹ ರೈತರು ಈ ಯೋಜನೆಯ ಲಾಭ ಪಡೆದರೆ, ಅವರು ಎಲ್ಲಾ ಕಂತುಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು. ಈ ಯೋಜನೆಯ ನಿಯಮಗಳ ಪ್ರಕಾರ, ರೈತರ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸಿದರೆ, ಈ ಯೋಜನೆಯ ಪ್ರಯೋಜನವು ಲಭ್ಯವಿರುವುದಿಲ್ಲ. ಅಂದರೆ, ಕಳೆದ ಆರ್ಥಿಕ ವರ್ಷದಲ್ಲಿ ತೆರಿಗೆ ಪಾವತಿಸಿದ್ದರೆ ಅಂತಹವರು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.


ಇದನ್ನೂ ಓದಿ- Aadhaar Card Update: ಫ್ರೀ ರೇಷನ್ ಪಡೆಯುವವರಿಗೆ UIDAI ನೀಡಿದೆ ಗುಡ್ ನ್ಯೂಸ್


ಯಾರಿಗೆ ಪಿಎಂ ಕಿಸಾನ್ ಯೋಜನೆಯ ಲಾಭ ದೊರೆಯುವುದಿಲ್ಲ?
* ನಿಯಮದ ಪ್ರಕಾರ, ಒಬ್ಬ ರೈತ ತನ್ನ ಕೃಷಿ ಭೂಮಿಯನ್ನು ಕೃಷಿ ಕೆಲಸಕ್ಕೆ ಬಳಸದೆ ಬೇರೆ ಕೆಲಸಗಳಿಗೆ ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಮತ್ತು ಕೃಷಿ ಭೂಮಿಯು ಆತನ ಹೆಸರಿನಲ್ಲಿ ಇರದಿದ್ದರೆ ಅವರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ. 
* ಒಬ್ಬ ರೈತ ವ್ಯವಸಾಯ ಮಾಡುತ್ತಿದ್ದು, ಹೊಲವು ಅವನ ಹೆಸರಿನಲ್ಲಿಲ್ಲ, ಅವನ ತಂದೆ ಅಥವಾ ಅಜ್ಜನ ಹೆಸರಿನಲ್ಲಿದ್ದರೆ, ಅವನಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.


ಇದನ್ನೂ ಓದಿ- PM Kisan: ದೀಪಾವಳಿ ನಂತರ ರೈತರಿಗೆ ಸಿಹಿಸುದ್ದಿ! ನವೆಂಬರ್ 30ರೊಳಗೆ ಇಷ್ಟು ಹಣ ಖಾತೆಗೆ ಬರಲಿದೆ


* ಯಾರಾದರೂ ಕೃಷಿ ಭೂಮಿಯ ಮಾಲೀಕರಾಗಿದ್ದರೆ, ಅವರು ಸರ್ಕಾರಿ ನೌಕರನಾಗಿದ್ದರೆ ಅಥವಾ ನಿವೃತ್ತ, ಹಾಲಿ ಅಥವಾ ಮಾಜಿ ಸಂಸದ, ಶಾಸಕ, ಸಚಿವರಾಗಿದ್ದರೆ ಅಂತಹವರೂ ಕಿಸಾನ್ ಯೋಜನೆಯ ಪ್ರಯೋಜನಕ್ಕೆ ಅನರ್ಹರು. 
* ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬ ಸದಸ್ಯರು ಸಹ ಅನರ್ಹರ ಪಟ್ಟಿಯಲ್ಲಿ ಬರುತ್ತಾರೆ. 
* ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.