Aadhaar Card Update: ಫ್ರೀ ರೇಷನ್ ಪಡೆಯುವವರಿಗೆ UIDAI ನೀಡಿದೆ ಗುಡ್ ನ್ಯೂಸ್

Aadhaar Card Update: ದೇಶದಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉಚಿತ ಮತ್ತು ಅಗ್ಗದ ಪಡಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದೀಗ ಯುಐಡಿಎಐ ದೇಶದ ಕೋಟ್ಯಂತರ ಜನರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ನೀವು ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಿದೆ.

Written by - Yashaswini V | Last Updated : Oct 25, 2022, 11:53 AM IST
  • ಈಗ ನೀವು ಆಧಾರ್ ಮೂಲಕ ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಪಡಿತರವನ್ನು ತೆಗೆದುಕೊಳ್ಳಬಹುದು.
  • ಆದರೆ ಇದಕ್ಕಾಗಿ ನಿಮ್ಮ ಆಧಾರ್ ಅನ್ನು ನವೀಕರಿಸುವುದು ಅವಶ್ಯಕ.
  • ಒನ್ ನೇಷನ್ ಒನ್ ಆಧಾರ್ ಕಾರ್ಯಕ್ರಮದ ಮೂಲಕ ನೀವು ದೇಶಾದ್ಯಂತ ಎಲ್ಲಿ ಬೇಕಾದರೂ ಆಧಾರ್ ಕಾರ್ಡ್‌ನಿಂದ ಪಡಿತರವನ್ನು ತೆಗೆದುಕೊಳ್ಳಬಹುದು
Aadhaar Card Update: ಫ್ರೀ ರೇಷನ್ ಪಡೆಯುವವರಿಗೆ UIDAI ನೀಡಿದೆ ಗುಡ್ ನ್ಯೂಸ್  title=
One Ration One Aadhaar

Free Ration Scheme: ದೇಶಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉಚಿತ ಮತ್ತು ಅಗ್ಗದ ಪಡಿತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಇದೀಗ ಯುಐಡಿಎಐ ದೇಶದ ಕೋಟ್ಯಂತರ ಜನರಿಗೆ ದೊಡ್ಡ ಕೊಡುಗೆ ನೀಡಿದೆ. ನೀವು ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಿದೆ. ದೇಶದಲ್ಲಿ ಆಧಾರ್ ನೀಡುವ ಸಂಸ್ಥೆಯಾದ ಯುಐಡಿಎಐ, ಇನ್ನು ಮುಂದೆ ನೀವು ಉಚಿತ ರೇಷನ್ ಪಡೆಯಲು ಚಿಂತಿಸಬೇಕಿಲ್ಲ. ಈಗ ನೀವು ದೇಶಾದ್ಯಂತ ಎಲ್ಲಿ ಬೇಕಾದರೂ ಆಧಾರ್ ಮೂಲಕ ಪಡಿತರವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದೆ. 

ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಯುಐಡಿಎಐ, ಈಗ ನೀವು ಆಧಾರ್ ಮೂಲಕ ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಪಡಿತರವನ್ನು ತೆಗೆದುಕೊಳ್ಳಬಹುದು. ಆದರೆ ಇದಕ್ಕಾಗಿ ನಿಮ್ಮ ಆಧಾರ್ ಅನ್ನು ನವೀಕರಿಸುವುದು ಅವಶ್ಯಕ. ಒನ್ ನೇಷನ್ ಒನ್ ಆಧಾರ್ ಕಾರ್ಯಕ್ರಮದ ಮೂಲಕ ನೀವು ದೇಶಾದ್ಯಂತ ಎಲ್ಲಿ ಬೇಕಾದರೂ ಆಧಾರ್ ಕಾರ್ಡ್‌ನಿಂದ ಪಡಿತರವನ್ನು ತೆಗೆದುಕೊಳ್ಳಬಹುದು ಎಂದು ಬರೆದಿದೆ. 

ಇದನ್ನೂ ಓದಿ- Electric Scooter: ಕೇವಲ ₹ 35,000 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಅಧಾರ್ ಮೂಲಕ ರೇಷನ್ ಪಡೆಯಲು ಏನು ಮಾಡಬೇಕು?
ಅಧಾರ್ ಮೂಲಕ ರೇಷನ್ ಪಡೆಯಲು ನೀವು ಮೊದಲು ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನು ಸಂಪರ್ಕಿಸಿ ನಿಮ್ಮ ಆಧಾರ್ ಕಾರ್ಡ್ ಆನ್ನು ಅಪ್ಡೇಟ್ ಮಾಡಬೇಕು. ಇದಕ್ಕಾಗಿ, ಅಧಿಕೃತ ವೆಬ್‌ಸೈಟ್ https://bhuvan.nrsc.gov.in/aadhaar/ ಮೂಲಕ ಆಧಾರ್ ಕೇಂದ್ರವನ್ನು ಸಹ ಹುಡುಕಬಹುದು. 

ಇದನ್ನೂ ಓದಿ- Airtel Payments Bank: ಹಳ್ಳಿಗಳಿಗೆ ಬರಲಿವೆ 1.5 ಲಕ್ಷ ಮೈಕ್ರೋ ಎಟಿಎಂಗಳು!

ನೀವು ಟೋಲ್ ಫ್ರೀ ಸಂಖ್ಯೆಗೂ ಸಂಪರ್ಕಿಸಬಹುದು:
ಆಧಾರ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ನೀವು ಟೋಲ್ ಫ್ರೀ ಸಂಖ್ಯೆ 1947 ಅನ್ನು ಸಹ ಸಂಪರ್ಕಿಸಬಹುದು. ಇಲ್ಲಿ ನೀವು ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯುತ್ತೀರಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

 

 

Trending News