ನವದೆಹಲಿ:  ಆನ್‌ಲೈನ್ ಬ್ಯಾಂಕಿಂಗ್ (Online banking) ವಂಚನೆಯ ವಿಷಯ ಇಂದು ಲೋಕಸಭೆಯಲ್ಲಿ ಪ್ರಸ್ತಾಪವಾಗಿದೆ. ಎಸ್‌ಬಿಐ (SBI) , ಐಸಿಐಸಿಐ, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಪಿಎನ್‌ಬಿಯಂತಹ ದೊಡ್ಡ ಬ್ಯಾಂಕುಗಳ ಮೇಲೆ ಆನ್‌ಲೈನ್ ಕಳ್ಳರು ಕಣ್ಣಿಟ್ಟಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ, ಕೇಳಿ ಬಂದಿತ್ತು. ಕಾಲಕಾಲಕ್ಕೆ, ರಿಸರ್ವ್ ಬ್ಯಾಂಕ್ (RBI) ಕೂಡಾ ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆಯ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಲೇ ಇದೆ.


COMMERCIAL BREAK
SCROLL TO CONTINUE READING

ಕ್ರೆಡಿಟ್-ಡೆಬಿಟ್ ಕಾರ್ಡ್ ಡೇಟಾವನ್ನು ಮಾರಾಟ ಮಾಡಲಾಗಿದೆಯೇ?
ಇಂದು, ಲೋಕಸಭೆಯಲ್ಲಿ ಕ್ರೆಡಿಟ್ ಕಾರ್ಡ್ (Credit card) ಮತ್ತು ಡೆಬಿಟ್ ಕಾರ್ಡ್ ಡೇಟಾ ಕಳ್ಳತನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. 12 ಲಕ್ಷಕ್ಕೂ ಹೆಚ್ಚು ಜನರ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ನ (Debit card) ಡೇಟಾವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಅಥವಾ ಹ್ಯಾಕಿಂಗ್ ಮಾಡುವ ಬಗ್ಗೆ ಸರ್ಕಾರಕ್ಕೆ ದೂರು ಬಂದಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಲಾಯಿತು. ಒಂದು ವೇಳೆ ಹೌದು ಎಂದಾದರೆ,  ಈ ವಿಷಯದಲ್ಲಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಲಾಯಿತು.


ಇದನ್ನೂ ಓದಿ : Gold-Silver Rate: ಚಿನ್ನದ ಬೆಲೆಯಲ್ಲಿ ಶೇ.20ರಷ್ಟು ಇಳಿಕೆ; ಬೆಳ್ಳಿ ಬೆಲೆಯಲ್ಲೂ ಇಳಿಕೆ! 


ಡಾರ್ಕ್ ನೆಟ್ನಲ್ಲಿ  13 ಲಕ್ಷ ಡೆಬಿಟ್, ಕ್ರೆಡಿಟ್ ಕಾರ್ಡ್ ಡೇಟಾ: 
2019 ರ ಅಕ್ಟೋಬರ್‌ನಲ್ಲಿ 1.3 ಮಿಲಿಯನ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹೊಂದಿರುವವರ ಮಾಹಿತಿ ಡಾರ್ಕ್ ನೆಟ್ ನಲ್ಲಿ ಲಭ್ಯವಿರುವುದಾಗಿ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT-In) ಮಾಹಿತಿ ನೀಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.   ಈ ಕುರಿತಂತೆ ವರದಿಗಳನ್ನು ಪರಿಶೀಲಿಸಲು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಎಲ್ಲಾ ಬ್ಯಾಂಕುಗಳನ್ನು ಎಚ್ಚರಿಸಲಾಗಿದೆ  ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ ಎಂದು ಹೇಳಿದ್ದಾರೆ. 


ಸರ್ಕಾರದಿಂದ ಅಗತ್ಯ ಕ್ರಮ : 
ಇದಲ್ಲದೆ, ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಸೈಬರ್ (Cyber) ಸುರಕ್ಷತೆಯನ್ನು ಬಲಪಡಿಸಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. 
- CERT-In : ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕುಗಳೊಂದಿಗೆ ಫಿಶಿಂಗ್ ವೆಬ್‌ಸೈಟ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಮತ್ತು ಅವುಗಳನ್ನು  ನಿಷ್ಕ್ರಿಯಗೊಳಿಸುತ್ತಿದೆ.
- ಇತ್ತೀಚಿನ ಸೈಬರ್ ಅಟ್ಯಾಕ್ ಮತ್ತು ಅದರ ಪರಿಹಾರದ ಬಗ್ಗೆ  CERT-In  ಎಚ್ಚರಿಕೆ  ನೀಡುತ್ತಲೇ ಇದೆ.
- ಸರ್ಕಾರದ ಸೈಬರ್ ಕ್ಲೀನ್ ಸೆಂಟರ್ (Botnet Cleaning and Malware Analysis Centre) ಇಂತಹ ಮಾಲ್ವೇರ್ ಪ್ರೋಗ್ರಾಂ ಗಳನ್ನ ಎದುರಿಸಲು  ಉಚಿತ ಟೂಲ್ಸ್ ಗಳನ್ನು ಒದಗಿಸುತ್ತದೆ.
- .ನ್ಯಾಷನಲ್ ಸೈಬರ್ ಕೋ ಒರ್ಡಿನೇಶನ್ ಸೆಂಟರ್ ನ್ನು ತೆರೆದಿದ್ದು, ಆನ್ಲೈನ್  ಮೋಸದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. 


ಇದನ್ನೂ ಓದಿ :  Pension : ನಿಯಮಗಳಲ್ಲಿ ಸಡಿಲಿಕೆ, ಈಗ ಪಿಂಚಣಿ ಪಡೆಯುವಲ್ಲಿ ಎದುರಾಗುವುದಿಲ್ಲ ಯಾವುದೇ ತೊಡುಕು


ತಪ್ಪು ವಹಿವಾಟುಗಳಿಗೆ ಸರ್ಕಾರ ಅಥವಾ ಬ್ಯಾಂಕ್ ಪರಿಹಾರ ನೀಡುತ್ತದೆಯೇ?


ಗ್ರಾಹಕರು ತಪ್ಪಿಲ್ಲದಿದ್ದರೆ, ಬ್ಯಾಂಕ್ ಪರಿಹಾರವನ್ನು ನೀಡುತ್ತದೆ :
ಡಿಜಿಟಲ್ ವ್ಯವಹಾರದಲ್ಲಿ ಗ್ರಾಹಕರ  ಜವಾಬ್ದಾರಿಗಳ ಕುರಿತು  ಆರ್‌ಬಿಐ 6 ಜುಲೈ 2017 ರಂದು ಒಂದು ಫ್ರೇಮ್ ವರ್ಕ್ ಅನ್ನು   ಬಿಡುಗಡೆ ಮಾಡಿತು. ಅದರ ಪ್ರಕಾರ ಗ್ರಾಹಕರ ಜವಾಬ್ದಾರಿಯನ್ನು ನಿರ್ಧರಿಸಲಾಗುತ್ತದೆ.


1. ಶೂನ್ಯ ಜವಾಬ್ದಾರಿ - ಬ್ಯಾಂಕ್ ನಿಂದ (Bank) ಸಂಭವಿಸಿದ್ದರೆ ಗ್ರಾಹಕರಿಗೆ ಯಾವುದೇ ನಷ್ಟವಾಗುವುದಿಲ್ಲ. ಒಂದು ವೇಳೆ  ಬ್ಯಾಂಕಿನದ್ದಾಗಲೀ ಅಥವಾ ಗ್ರಾಹಕರದ್ದಾಗಲೀ ತಪ್ಪಿಲ್ಲದೆ  ಸಿಸ್ಟಮ್ ನ (system) ತಪ್ಪಿನಿಂದ ನಷ್ಟವಾಗಿದ್ದರೆ,  ಮೂರು ಕೆಲಸದ ದಿನಗಳಲ್ಲಿ ಬ್ಯಾಂಕ್‌ಗೆ ವಿಷಯ ತಿಳಿಸಬೇಕಾಗುತ್ತದೆ. 


ಇದನ್ನೂ ಓದಿ :  mAadhaar: ಮನೆಯಲ್ಲಿಯೇ ಕುಳಿತು ಈ 35 ಸೇವೆಗಳ ಲಾಭ ಪಡೆಯಿರಿ


2. ಸೀಮಿತ ಜವಾಬ್ದಾರಿ -
(ಎ) ಗ್ರಾಹಕರ ದೋಷದಿಂದಾಗಿ ನಷ್ಟವುಂಟಾಗಿದ್ದರೆ, ಎಲ್ಲಾ ನಷ್ಟವನ್ನು ಗ್ರಾಹಕರೇ ಸ್ವತಃ ಭರಿಸಬೇಕಾಗುತ್ತದೆ.
(ಬಿ)ಸಿಸ್ಟಮ್ ನ ದೋಷದಿಂದ ನಷ್ಟ ಸಂಭವಿಸಿದ್ದರೆ  4 ರಿಂದ 7 ಕೆಲಸದ ದಿನಗಳಲ್ಲಿ ಗ್ರಾಹಕರು (Customer) ಬ್ಯಾಂಕ್‌ಗೆ ತಿಳಿಸಬೇಕಾಗುತ್ತದೆ. 
(ಸಿ) ಬೋರ್ಡ್ ನಿಂದ  ಅನುಮೋದನೆ - ಯಾವುದೇ ಕೆಲಸದ ವಹಿವಾಟಿನ ಬಗ್ಗೆ ಮಾಹಿತಿಯನ್ನು 7 ಕೆಲಸದ ದಿನಗಳ ನಂತರ ದೂರು ನೀಡಿದರೆ, ಆಗ ತೀರ್ಮಾನವನ್ನು ಬ್ಯಾಂಕಿನ ಮಂಡಳಿಯ ನೀತಿಯಿಂದ ನಿರ್ಧರಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.