ನವದೆಹಲಿ: ನಿಮ್ಮ ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ? ಈ ಪ್ರಶ್ನೆಗೆ ಬಹುಶಃ ಅನೇಕರಿಗೆ ಉತ್ತರ ತಿಳಿದಿರಬಹುದು, ಆದರೆ, ನಿಮ್ಮ ಆಧಾರ್‌ಗೆ ಯಾವುದೇ ನಕಲಿ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ? ಎಂಬ ಪ್ರಶ್ನೆ ಹಲವರಿಗೆ ಶಾಕ್ ಉಂಟು ಮಾಡಬಹುದು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಅವಶ್ಯಕ. ಆಧಾರ್ ಕಾರ್ಡ್ (Aadhaar Card) ಮತ್ತು ಬ್ಯಾಂಕ್ ಖಾತೆಯ  (Bank account) ಹೊಸ ನವೀಕರಣಗಳು ಕಾಲಕಾಲಕ್ಕೆ ಬರುತ್ತವೆ. ಯಾವುದೇ ರೀತಿಯ ಬ್ಯಾಂಕ್ ವಂಚನೆಯನ್ನು ತಪ್ಪಿಸಲು ಕೆವೈಸಿ ನವೀಕರಿಸುವುದು ಕಡ್ಡಾಯವಾಗಿದೆ.


COMMERCIAL BREAK
SCROLL TO CONTINUE READING

ಒಂದು ವೇಳೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡದಿದ್ದರೆ, ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಇದರ ನಂತರ ನೀವು ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಮುಖ್ಯ. ಒಂದೊಮ್ಮೆ ನೀವು ಈ ಮೊದಲೇ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ (Aadhaar Card) ಜೊತೆಗೆ ಲಿಂಕ್ ಮಾಡಿದ್ದರೆ, ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲಾಗಿದೆಯೆ ಅಥವಾ ಇಲ್ಲವೇ ಎಂದು ತಿಳಿಯಿರಿ. 


ಇದನ್ನೂ ಓದಿ- EPFO Alerts: ಪಿಎಫ್ಗೆ ಸಂಬಂಧಿಸಿದ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನಿಮ್ಮ ಹಣ ಸಿಲುಕಬಹುದು


ನಮ್ಮಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ (Bank account) ಇದ್ದರೆ, ಎಲ್ಲಾ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ (Aadhaar Bank Account Link) ಮಾಡಬಹುದು. ನಿಮ್ಮ ಆಧಾರ್‌ನೊಂದಿಗೆ ಎಷ್ಟು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ತಿಳಿಯಲು ನೀವು ಬಯಸಿದರೆ, ಇದು ಯಾವುದೇ ಹಣಕಾಸಿನ ವಹಿವಾಟು ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ಇದಲ್ಲದೆ ನಕಲಿ ಬ್ಯಾಂಕ್ ಖಾತೆಯ ಬಗ್ಗೆಯೂ ನೀವು ಎಚ್ಚರಿಕೆಯಿಂದ ಇರಬಹುದು.


ಒಂದು ಆಧಾರ್‌ನಲ್ಲಿ ಅನೇಕ ನಕಲಿ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿರುವ ಬಗ್ಗೆ ನಾವು ಹಲವು ಬಾರಿ ಕೇಳಿರಬಹುದು. ಅದಕ್ಕಾಗಿಯೇ ನಿಮ್ಮ ಆಧಾರ್‌ಗೆ ಯಾವುದೇ ನಕಲಿ ಖಾತೆಯನ್ನು ಲಿಂಕ್ ಮಾಡುವುದನ್ನು ತಪ್ಪಿಸಲು ನೀವು ಕಾಲಕಾಲಕ್ಕೆ ಪರಿಶೀಲಿಸುತ್ತಿರುವುದು ಬಹಳ ಮುಖ್ಯ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾದ (ಯುಐಡಿಎಐ ವೆಬ್‌ಸೈಟ್) ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಈ ಮಾಹಿತಿಯನ್ನು ಪಡೆಯುತ್ತೀರಿ.


ಇದನ್ನೂ ಓದಿ- SBI Alert! ಬದಲಾಗಿದೆ ನಿಯಮ : ಈಗ ದಿನಕ್ಕೆ ಇಷ್ಟು ಹಣ ಮಾತ್ರ withdraw ಮಾಡಬಹುದು


ಆಧಾರ್-ಬ್ಯಾಂಕ್ ಖಾತೆ ಲಿಂಕ್ ಸ್ಥಿತಿಯನ್ನು ಹೇಗೆ ತಿಳಿಯುವುದು?
1. ಯುಐಡಿಎಐ ಅಧಿಕೃತ ವೆಬ್‌ಸೈಟ್ www.uidai.gov.in ಗೆ ಹೋಗಿ.
2. ಈಗ ಮುಖ್ಯ ಪುಟಕ್ಕೆ ಬಂದ ನಂತರ, ನೀವು ಎಂವೈ ಆಧಾರ್ (MY Aadhaar) ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
3. ಈಗ ಹೊಸ ಪುಟದಲ್ಲಿ, ನೀವು ಆಧಾರ್ ಸೇವೆಗೆ ಹೋಗಬೇಕಾಗಿದೆ.
4. ಈಗ ನೀವು ಚೆಕ್ ಆಧಾರ್ / ಬ್ಯಾಂಕ್ ಲಿಂಕ್ ಮಾಡುವ ಆಯ್ಕೆಗೆ ಹೋಗಬೇಕಾಗುತ್ತದೆ.
5- ಚೆಕ್ ಆಧಾರ್ / ಬ್ಯಾಂಕ್ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಹೊಸ ಪುಟ ತೆರೆಯುತ್ತದೆ.
6- ನೀವು ಹೊಸ ಪುಟಕ್ಕೆ ಬಂದ ತಕ್ಷಣ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಕ್ಯಾಪ್ಚಾವನ್ನು ಸಹ ಭರ್ತಿ ಮಾಡಬೇಕು.
6 ಬಳಿಕ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿದ ನಂತರ, ಈಗ ನೀವು ಲಾಗಿನ್ ಬಟನ್ ಕ್ಲಿಕ್ ಮಾಡಬೇಕು.
7. ಈಗ ನೀವು ಹೊಸ ಪುಟಕ್ಕೆ ಬರುತ್ತೀರಿ ಮತ್ತು ನಿಮ್ಮ ಆಧಾರ್‌ಗೆ ಯಾವ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿಯುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.