SBI Alert! ಬದಲಾಗಿದೆ ನಿಯಮ : ಈಗ ದಿನಕ್ಕೆ ಇಷ್ಟು ಹಣ ಮಾತ್ರ withdraw ಮಾಡಬಹುದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಹಣ ವಿತ್ ಡ್ರಾ ಮಾಡುವ ಹೊಸ ನಿಯಮಗಳ ಬಗ್ಗೆ ಹೇಳಲಾಗಿದೆ.

Written by - Ranjitha R K | Last Updated : May 30, 2021, 09:31 AM IST
  • ಹೊಸ ಅಧಿಸೂಚನೆ ಹೊರಡಿಸಿದ ಎಸ್ ಬಿಐ
  • ದಿನಕ್ಕೆ ವಿತ್ ಡ್ರಾ ಮಾಡಬಹುದಾದ ಹಣದ ಮಿತಿ ಹೆಚ್ಚಿಸಿದ ಬ್ಯಾಂಕ್
  • ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡ ಎಸ್ ಬಿಐ
SBI Alert! ಬದಲಾಗಿದೆ ನಿಯಮ : ಈಗ ದಿನಕ್ಕೆ ಇಷ್ಟು ಹಣ ಮಾತ್ರ withdraw ಮಾಡಬಹುದು title=
ಹೊಸ ಅಧಿಸೂಚನೆ ಹೊರಡಿಸಿದ ಎಸ್ ಬಿಐ ( File photo zee news)

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)  ಇತ್ತೀಚೆಗೆ ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ (Notification) ಹೊರಡಿಸಿದೆ. ಇದರಲ್ಲಿ ಹಣ ವಿತ್ ಡ್ರಾ ಮಾಡುವ ಹೊಸ ನಿಯಮಗಳ ಬಗ್ಗೆ ಹೇಳಲಾಗಿದೆ. ಇದರ ಪ್ರಕಾರ, ಈಗ ಹೋಂ ಬ್ರಾಂಚ್ ಬಿಟ್ಟು ಬೇರೆ ಬ್ರಾಂಚ್ ಗಳಲ್ಲಿ ಹಣ ವಿತ್ ಡ್ರಾ (Cash Withdrawal) ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ. ಈಗ  ಬೇರೆ ಬ್ರಾಂಚ್ ಗಳಲ್ಲಿ ಒಂದು ದಿನಕ್ಕೆ 25000 ರೂಪಾಯಿಗಳನ್ನು ವಿತ್ ಡ್ರಾ ಮಾಡಬಹುದು.

ಒಂದು ದಿನಕ್ಕೆ ಎಷ್ಟು ನಗದು ಪಡೆಯಬಹುದು : 
ಈ ಬಗ್ಗೆ SBI ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ. 'ಕರೋನಾ ಸಾಂಕ್ರಾಮಿಕ ರೋಗದಲ್ಲಿ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಎಸ್‌ಬಿಐ ಚೆಕ್ (Cheque) ಅಥವಾ ಸ್ಲಿಪ್ ಮೂಲಕ ಬೇರೆ ಬ್ರಾಂಚ್ ಗಳಲ್ಲಿ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ.  ಈಗ ಗ್ರಾಹಕರು ಯಾವುದೇ ಬ್ರಾಂಚ್ ನಲ್ಲಿ ಒಂದು ದಿನಕ್ಕೆ ಉಳಿತಾಯ ಖಾತೆಯಿಂದ (Saving Account) 25,000 ರೂಪಾಯಿಗಳನ್ನು ವಿತ್ ಡ್ರಾ ಮಾಡಬಹುದು. 

ಇದನ್ನೂ ಓದಿ : Extremely Rare Notes: 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು

ಚೆಕ್‌ನಿಂದ 1 ಲಕ್ಷ ರೂಪಾಯಿಗಳನ್ನು ತೆಗೆಯಬಹುದು : 
ಆದರೆ, ಚೆಕ್ ಮೂಲಕ ಹಣ ವಿತ್ ಡ್ರಾ ಮಾಡುವ ಮಿತಿ 1 ಲಕ್ಷ ರೂಪಾಯಿ ವರೆಗೆ ಇರುತ್ತದೆ.  ಇನ್ನು ಥರ್ಡ್ ಪಾರ್ಟಿಗೆ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡುವ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State bank of India) ಅಧಿಸೂಚನೆಯ ಪ್ರಕಾರ, ಹೊಸ ನಿಯಮಗಳು ತಕ್ಷಣದಿಂದ ಜಾರಿಗೆ ತರಲಾಗಿದೆ. ಈ ನಿಯಮಗಳು ಸೆಪ್ಟೆಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತವೆ.  

ಇದನ್ನೂ ಓದಿ : Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News