ಮುಂಬೈ : ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಇಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಅಂಬಾನಿ ಕುಟುಂಬವು ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ.


COMMERCIAL BREAK
SCROLL TO CONTINUE READING

ಇಂದು ಇಶಾ ಮತ್ತು ಆನಂದ್ ಪಿರಮಾಲ್ ಅವರು ಒಂದು ಹೆಣ್ಣು ಮತ್ತು ಒಂದು ಗಂಡು ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ.


ಇದನ್ನೂ ಓದಿ : ಪ್ರಚಾರಕ್ಕಾಗಿ ಊರ್ವಶಿ ಪಂತ್‌ ಬಗ್ಗೆ ಮಾತನಾಡುತ್ತಾಳೆ ಎಂದ ಗಿಲ್‌: ವಿಡಿಯೋ ವೈರಲ್‌  


ಈ ಬಗ್ಗೆ ಮಾಹಿತಿ ನೀಡಿದ ಅಂಬಾನಿ ಕುಟುಂಬವು, "ನಮ್ಮ ಮಕ್ಕಳಾದ ಇಶಾ ಮತ್ತು ಆನಂದ್ ಅವರು 2022 ರ ನವೆಂಬರ್ 19 ರಂದು ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ ಎಂಬ ಸುದ್ದಿ ಹಂಚಿಕೊಳ್ಳಲು ನಮಗೆ ತುಂಬಾ ಸಂತೋಷವಾಗಿದೆ. ಇಶಾ ಮತ್ತು ಮಕ್ಕಳಾದ ಹೆಣ್ಣು ಮಗು ಆದಿಯಾ ಮತ್ತು ಗಂಡು ಮಗು ಕೃಷ್ಣ ಚೆನ್ನಾಗಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬಯಸುತ್ತೇವೆ. ಆದಿಯಾ, ಕೃಷ್ಣ, ಇಶಾ ಮತ್ತು ಆನಂದ್ ಅವರ ಜೀವನದ ಈ ಪ್ರಮುಖ ಘಟ್ಟದಲ್ಲಿ ಶುಭ ಹಾರೈಕೆಗಳು" ಎಂದು ತಿಳಿಸಿದ್ದಾರೆ.


ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಪಿರಮಲ್ ರಿಯಾಲ್ಟಿಯ ಸಂಸ್ಥಾಪಕ ಸ್ವಾತಿ ಮತ್ತು ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಪಿರಾಮಲ್ ಅವರು ಡಿಸೆಂಬರ್ 12, 2018 ರಂದು ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರ ಜೊತೆ ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸಪ್ತಪದಿ ತುಳದಿದ್ದರು. ಇವರ ಮದುವೆ ಸಮಾರಂಭಕ್ಕೆ ಬಾಲಿವುಡ್ ನಟ-ನಟಿಯರು, ರಾಜಕೀಯ ದೊಡ್ಡ ದೊಡ್ಡ ವ್ಯಕ್ತಿಗಳು ಮತ್ತು ದೇಶ, ವಿದೇಶದ ಬಿಸಿನೆಸ್ ಮೆನ್ ಗಳು ಭಾಗವಹಿಸಿದ್ದರು.


ಇದನ್ನೂ ಓದಿ : ಕನ್ನಡತಿ ಅನುಷಾ ಶೆಟ್ಟಿ ಕೈ ಹಿಡಿದ ತೆಲುಗು ನಟ ನಾಗಶೌರ್ಯ..!


ಡಿಸೆಂಬರ್ 2020 ರಲ್ಲಿ, ಮುಖೇಶ್ ಅಂಬಾನಿ ಅವರ ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಅಂಬಾನಿ ತಮ್ಮ ಗಂಡು ಮಗುವನ್ನು ಸ್ವಾಗತಿಸಿದ್ದಾರೆ.


ಮುಖೇಶ್ ಅಂಬಾನಿ ಇತ್ತೀಚೆಗೆ ತಮ್ಮ ಮಗಳು ಇಶಾ ಅಂಬಾನಿಯನ್ನು ತಮ್ಮ ಸಂಘಟಿತ ಕಂಪನಿಯ ಚಿಲ್ಲರೆ ವ್ಯಾಪಾರದ ಹೊಸ ಮುಖ್ಯಸ್ಥೆಯಾಗಿ ಪರಿಚಯಿಸಿದರು. ಈ ಸಂಸ್ಥೆಯು ದಾಖಲೆಯ 2 ಲಕ್ಷ ಕೋಟಿ ರೂ. ವಹಿವಾಟು ಸಾಧಿಸಿದೆ ಮತ್ತು ಏಷ್ಯಾದ ಟಾಪ್ 10 ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.