ಪ್ರಚಾರಕ್ಕಾಗಿ ಊರ್ವಶಿ ಪಂತ್‌ ಬಗ್ಗೆ ಮಾತನಾಡುತ್ತಾಳೆ ಎಂದ ಗಿಲ್‌: ವಿಡಿಯೋ ವೈರಲ್‌  

ಟೀಂ ಇಂಡಿಯಾ ಆಟಗಾರ ರಿಷಭ್‌ ಪಂತ್‌ ಹಾಗೂ ನಟಿ ಊರ್ವಶಿ ರೌಟೇಲಾ ನಡುವಿನ ಫೈಟ್‌ ಬಗ್ಗೆ ಎಲ್ಲರಿಗೂ ಗೊತ್ತು. ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾರೆ. ಮೊದಲಿಗೆ ಇವರಿಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅದೇನ್‌ ಆಯ್ತೋ ಗೊತ್ತಿಲ್ಲ. ಇಬ್ಬರೂ ಹಾವು ಮುಂಗುಸಿಯಂತಾಗಿಬಿಟ್ಟರು. ಸದ್ಯ ನಾವು ಇವರಿಬ್ಬರ ಬಗ್ಗೆ ಯಾಕೆ ಬರೆಯೋದಕ್ಕೆ ಕಾರಣವಿದೆ.

Written by - Krishna N K | Last Updated : Nov 20, 2022, 03:59 PM IST
  • ಪ್ರಚಾರಕ್ಕಾಗಿ ಊರ್ವಶಿ ಪಂತ್‌ ಬಗ್ಗೆ ಮಾತನಾಡುತ್ತಾಳೆ ಎಂದ ಗಿಲ್‌
  • ಟೀಂ ಇಂಡಿಯಾ ಆಟಗಾರ ರಿಷಭ್‌ ಪಂತ್‌ ಹಾಗೂ ನಟಿ ಊರ್ವಶಿ ರೌಟೇಲಾ ನಡುವಿನ ಫೈಟ್‌
  • ಪಂತ್‌ ಪರ ಬ್ಯಾಟಿಂಗ್‌ ಮಾಡಿ ಅದೆಲ್ಲ ಆ ಹೀರೋಯಿನ್‌ ಗಿಮಿಕ್‌ ಎಂದ ಗಿಲ್‌
ಪ್ರಚಾರಕ್ಕಾಗಿ ಊರ್ವಶಿ ಪಂತ್‌ ಬಗ್ಗೆ ಮಾತನಾಡುತ್ತಾಳೆ ಎಂದ ಗಿಲ್‌: ವಿಡಿಯೋ ವೈರಲ್‌   title=

Shubman Gill : ಟೀಂ ಇಂಡಿಯಾ ಆಟಗಾರ ರಿಷಭ್‌ ಪಂತ್‌ ಹಾಗೂ ನಟಿ ಊರ್ವಶಿ ರೌಟೇಲಾ ನಡುವಿನ ಫೈಟ್‌ ಬಗ್ಗೆ ಎಲ್ಲರಿಗೂ ಗೊತ್ತು. ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾರೆ. ಮೊದಲಿಗೆ ಇವರಿಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅದೇನ್‌ ಆಯ್ತೋ ಗೊತ್ತಿಲ್ಲ. ಇಬ್ಬರೂ ಹಾವು ಮುಂಗುಸಿಯಂತಾಗಿಬಿಟ್ಟರು. ಸದ್ಯ ನಾವು ಇವರಿಬ್ಬರ ಬಗ್ಗೆ ಯಾಕೆ ಬರೆಯೋದಕ್ಕೆ ಕಾರಣವಿದೆ.

ಟೀಂ ಇಂಡಿಯಾದ ಮತ್ತೊಬ್ಬ ಯಂಗ್‌ ಆಟಗಾರ ಶುಭ್ಮಾನ್‌ ಗಿಲ್‌ ಕೆಲ ತಿಂಗಳ ಹಿಂದೆ ಸಂದರ್ಶನ ಒಂದರಲ್ಲಿ ನೀಡಿರುವ ಹೇಳಿಕೆ ಸದ್ಯ ಈಗ ಸಾಕಷ್ಟು ವೈರಲ್‌ ಆಗುತ್ತಿದೆ. ನಿರೂಪಕಿಯೊಬ್ಬರು ರಿಷಭ್‌ ಪಂತ್‌ರನ್ನು ಒಬ್ಬ ನಟಿ ಸಾಕಷ್ಟು ರೇಗಿಸುತ್ತಿದ್ದಾರೆ. ನೀವು ಸಹ ಡ್ರೆಸ್ಸಿಂಗ್‌ ರೂಮಲ್ಲಿ ಇದೇ ತರ ಅವರನ್ನು ರೇಗಿಸುತ್ತಿರಾ ಎಂದು ಗಿಲ್‌ಗೆ ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: ಕನ್ನಡತಿ ಅನುಷಾ ಶೆಟ್ಟಿ ಕೈ ಹಿಡಿದ ತೆಲುಗು ನಟ ನಾಗಶೌರ್ಯ..!

ಇದಕ್ಕೆ ನಗುತ್ತಲೇ ಉತ್ತರಿಸಿರುವ ಗಿಲ್‌ ಗೆಳೆಯನ ಪರ ಬ್ಯಾಟಿಂಗ್‌ ಮಾಡಿದ್ದಾರೆ.ಹಾಗೇನಿಲ್ಲ, ಅದೆಲ್ಲ ಆ ಹೀರೋಯಿನ್‌ ಗಿಮಿಕ್‌. ಆಕೆ ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇದರಿಂದ ರಿಷಭ್‌ ಏನೂ ವಿಚಲಿತರಾಗುವುದಿಲ್ಲ ಎಂದು ನೇರವಾಗಿ ಊರ್ವಶಿ ರೌಟೇಲಾಗೆ ಟಾಂಗ್‌ ಕೊಟ್ಟಿದ್ದಾರೆ. ಸದ್ಯ ಗಿಲ್‌ ನೀಡಿರುವ ಹೇಳಿಕೆ ಸಾಕಷ್ಟು ವೈರಲ್‌ ಆಗುತ್ತಿದೆ. ಇದಕ್ಕೆ ಊರ್ವಶಿ ಏನ್‌ ರಿಯಾಕ್ಟ್‌ ಮಾಡ್ತಾರೋ ಅಂತಾ ಕಾದು ನೋಡಬೇಕಿದೆ. 

ಈ ಹಿಂದೆ ಊರ್ವಶಿ ರೌಟೇಲಾ, ಮಿಸ್ಟರ್‌ ಆರ್‌.ಪಿ (ರಿಷಭ್ ಪಂತ್‌) ಅವರನ್ನು ಕೆಲ ಬಾರಿ ಭೇಟಿ ಆಗಿರುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ತಮ್ಮನ್ನು ಭೇಟಿ ಮಾಡುವ ಸಲುವಾಗಿ ಪಂತ್, ಹೋಟೆಲ್‌ ಲಾಬಿಯಲ್ಲಿ ಗಂಟೆಗಳ ಕಾಲ ಕಾಯುತ್ತಾ ಕುಳಿತು, 16-17 ಬಾರಿ ಮಿಸ್‌ಕಾಲ್‌ ನೀಡಿದ್ದರು ಎಂದಿದ್ದರು. ರಿಷಭ್ ಪಂತ್‌ ಎಂದು ಹೇಳದೆ, ಕೇವಲ ಆರ್‌.ಪಿ ಎಂದು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ರಿಷಭ್ ಪಂತ್‌ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ 'ಅಕ್ಕಾ ನನ್ನನ್ನು ಬಿಟ್ಟುಬಿಡು', ಎಂದು ಬರೆದುಕೊಂಡು ನಂತರ ಅದನ್ನು ಡಿಲೀಟ್‌ ಮಾಡಿದ್ದರು. ಹೀಗೆ ಇಬ್ಬರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಫೈಟ್‌ ಆಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News