ಆಧಾರ್ ಕಾರ್ಡ್ ಫೋಟೋ ಅಪ್‌ಡೇಟ್: ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಈ ಡಾಕ್ಯುಮೆಂಟ್ ಸಹಾಯದಿಂದ ದೇಶದ ಜನರು ಅನೇಕ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುತ್ತಾರೆ. ಹಲವು ಸರ್ಕಾರಿ ಕೆಲಸಗಳಿಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ವಯಸ್ಸು ಹೆಚ್ಚಾದಂತೆ ಮುಖದಲ್ಲಿ ಬದಲಾವಣೆ ಅಥವಾ ಆಧಾರ್ ಕಾರ್ಡ್‌ನ ಫೋಟೋ ಸರಿಯಾಗಿಲ್ಲದ ಕಾರಣ ಅದನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕೆ ಇಂದು ನಾವು ನಿಮಗೆ ಸುಲಭವಾದ ವಿಧಾನವನ್ನು ಹೇಳಲಿದ್ದೇವೆ. ಇದರ ಮೂಲಕ ಆಧಾರ್ ಕಾರ್ಡ್‌ನಲ್ಲಿ ನೀವು ಸುಲಭವಾಗಿ ಫೋಟೋವನ್ನು ಬದಲಾಯಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿರಿ.


COMMERCIAL BREAK
SCROLL TO CONTINUE READING

ಆಧಾರ್ ಕಾರ್ಡ್ ಫೋಟೋ ಬದಲಾವಣೆ


ಅನೇಕ ಜನರು ತಮ್ಮ ಆಧಾರ್ ಕಾರ್ಡ್‌ನ ಫೋಟೋವನ್ನು ಬದಲಾಯಿಸಲು ಮತ್ತು ಅದನ್ನು ನವೀಕರಿಸಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸರಳ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಆಧಾರ್ ಕಾರ್ಡ್‌ನ ಫೋಟೋವನ್ನು ನವೀಕರಿಸಬಹುದು. ನೀವು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿವರಗಳನ್ನು ನವೀಕರಿಸಬಹುದು ಮತ್ತು ಫೋಟೋವನ್ನು ಸಹ ಅಲ್ಲಿ ಬದಲಾಯಿಸಬಹುದು.


ಇದನ್ನೂ ಓದಿ: ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!


ಫೋಟೋ ಬದಲಾಯಿಸಲು ಈ ಹಂತಗಳನ್ನು ಅನುಸರಿಸಿರಿ


ಹಂತ 1: ಹತ್ತಿರದ ಆಧಾರ್ ನೋಂದಣಿ ಕೇಂದ್ರ/ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.


ಹಂತ 2: UIDAI ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ/ತಿದ್ದುಪಡಿ/ಅಪ್‌ಡೇಟ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.


ಹಂತ 3: ಫಾರ್ಮ್ ಅನ್ನು ಭರ್ತಿ ಮಾಡಿ.


ಹಂತ 4: ನಿಮ್ಮ ಫಾರ್ಮ್ ಅನ್ನು ಅಲ್ಲಿನ ಉದ್ಯೋಗಿಗೆ ಸಲ್ಲಿಸಿ ಮತ್ತು ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ನೀಡಿ.


ಹಂತ 5: ಈಗ ಉದ್ಯೋಗಿ ನಿಮ್ಮ ಲೈವ್ ಚಿತ್ರವನ್ನು ತೆಗೆದುಕೊಳ್ಳುತ್ತಾರೆ.


ಹಂತ 6: ನಿಮ್ಮ ವಿವರಗಳನ್ನು ಅನುಮೋದಿಸಲು ನೀವು ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕಾಗುತ್ತದೆ.


ಹಂತ 7: ವಿವರಗಳನ್ನು ನವೀಕರಿಸಲು ನೀವು 100 ರೂ. ಪಾವತಿಸಬೇಕು.


ಹಂತ 8: ಇದೀಗ ನೀವು URN ಒಳಗೊಂಡಿರುವ ಸ್ವೀಕೃತಿ ಚೀಟಿಯನ್ನು ಪಡೆಯುತ್ತೀರಿ.


ಹಂತ 9: UIDAI ಆಧಾರ್ ಅಪ್‌ಡೇಟ್ ಸ್ಥಿತಿಯನ್ನು ಪರಿಶೀಲಿಸಲು ಅಪ್‌ಡೇಟ್ ವಿನಂತಿ ಸಂಖ್ಯೆ (URN) ಬಳಸಬಹುದು.   


ಇದನ್ನೂ ಓದಿ: RBI ಮತ್ತೆ ಬಿಡುಗಡೆ ಮಾಡಲಿದೆಯೇ 1000 ರೂ.? ಈ ಬಗ್ಗೆ ಕೇಂದ್ರ ಬ್ಯಾಂಕ್ ನೀಡಿದ ಮಾಹಿತಿ ಇದು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.