ನವದೆಹಲಿ: ಕೋಟ್ಯಾಧಿಪತಿ ಆಗುವುದು ಹೇಗೆ(How To Become Crorepati)..? ಇಂದು ಪ್ರತಿಯೊಬ್ಬರೂ ಮಿಲಿಯನೇರ್ ಆಗಲು ಹಾತೊರೆಯುತ್ತಾರೆ. ಇದು ಅಂದುಕೊಂಡಷ್ಟು ಸುಲಭವಲ್ಲ, ಆದರೆ ಕಷ್ಟವೂ ಅಲ್ಲ. ನೀವು ನಿಯಮಿತವಾಗಿ ಉಳಿತಾಯ ಪ್ರಾರಂಭಿಸಿದರೆ ಬರೀ 1 ಕೋಟಿಯಲ್ಲ 10 ಕೋಟಿ ರೂ.ಗಳ ಒಡೆಯನಾಗುವುದು ಸುಲಭ. ಹೂಡಿಕೆ ಪ್ರಾರಂಭಿಸಲು(Best Investment Plan) ಯಾವುದೇ ವಯಸ್ಸಿಲ್ಲ, ನೀವು ಯಾವಾಗ ಪ್ರಾರಂಭಿಸಿದರೂ ಅದು ಒಳ್ಳೆಯದು.


COMMERCIAL BREAK
SCROLL TO CONTINUE READING

60ನೇ ವಯಸ್ಸಿನಲ್ಲಿ 10 ಕೋಟಿ ರೂ. ಸಿಗುತ್ತದೆ


ಮುಂದಿನ ದಿನಗಳಲ್ಲಿ ನೀವು ಕೂಡ ಆರ್ಥಿಕವಾಗಿ ಸದೃಢರಾಗಲು ಬಯಸಿದರೆ ಇಂದಿನಿಂದಲೇ ಹೂಡಿಕೆ(Mutual Fund Investment)ಯನ್ನು ಆರಂಭಿಸಿ. ಅದು ಸಣ್ಣ ಮೊತ್ತವಾದರೂ ಸರಿ. ದಿನನಿತ್ಯದ ಒಂದು ಸಣ್ಣ ಮೊತ್ತ ಉಳಿತಾಯವು ನಿಮ್ಮನ್ನು ವಯಸ್ಸಿನ ಕೊನೆಯಲ್ಲಿ ಶ್ರೀಮಂತರನ್ನಾಗಿ ಮಾಡಬಹುದು. ಪ್ರತಿದಿನ ಕೇವಲ 20 ರೂ. ಅಂದರೆ ತಿಂಗಳಿಗೆ 600 ರೂ. ಹೂಡಿಕೆ ಮಾಡಿದರೆ ನೀವು 60ನೇ ವಯಸ್ಸಿನಲ್ಲಿ 10 ಕೋಟಿ ರೂ.ಗೆ ಒಡೆಯರಾಗಬಹುದು. ನೀವು ಇದನ್ನು ನಂಬದಿರಬಹುದು, ಆದರೆ ಇದು ಸತ್ಯ. ಇದು ಹೇಗೆ ಸಾಧ್ಯ ಎಂಬುದರ ಬಗ್ಗೆ ತಿಳಿಯಿರಿ.


ತಿಂಗಳಿಗೆ ಕೇವಲ 600 ರೂ. ಹೂಡಿಕೆ ಮಾಡಿ


10 ಕೋಟಿ ರೂ.ಗೆ ನೀವು ಒಡೆಯರಾಗಬೇಕೆಂದರೆ ಸಣ್ಣವಯಸ್ಸಿನಲ್ಲಿಯೇ ನೀವು ಮ್ಯೂಚುವಲ್ ಫಂಡ್‌(SIP Investment Plan)ಗಳಲ್ಲಿ ಹೂಡಿಕೆ ಮಾಡಬೇಕು. ಇದರಲ್ಲಿ ನೀವು ನಿಯಮಿತ ಹೂಡಿಕೆಗಾಗಿ SIP ತೆಗೆದುಕೊಳ್ಳಬೇಕಾಗುತ್ತದೆ. ನೀವು ತಿಂಗಳಿಗೆ 500 ರೂ.ಗಳೊಂದಿಗೆ SIP ನಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. ಆದರೆ ನಾವು ಹೇಳಿದಂತೆ ನೀವು ಪ್ರತಿದಿನ 20 ರೂ. ಹೂಡಿಕೆ ಮಾಡಬೇಕು. ಅಂದರೆ ನೀವು ಪ್ರತಿ ತಿಂಗಳು 600 ರೂ.ಗಳ SIP ಮಾಡಬೇಕು. ನೀವು 20ನೇ ವಯಸ್ಸಿನಲ್ಲಿ ಈ ಹೂಡಿಕೆಯನ್ನು ಪ್ರಾರಂಭಿಸಬೇಕು.


ಇದನ್ನೂ ಓದಿ: 19-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ


SIPನಲ್ಲಿ ದೀರ್ಘಾವಧಿಗೆ ಹಣ ಹೂಡಿಕೆ ಮಾಡಬೇಕು


ಕಳೆದ ಕೆಲವು ವರ್ಷಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಅತ್ಯುತ್ತಮ ಆದಾಯವನ್ನು ನೀಡಿವೆ. ಕೆಲವು ಫಂಡ್‌ಗಳು ಶೇ.12ರಿಂದ ಶೇ.25ರಷ್ಟು ಆದಾಯವನ್ನು ನೀಡಿವೆ. ನೀವು ಪ್ರತಿ ತಿಂಗಳು 600 ರೂ.ವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ SIP ಮಾಡಿದರೆ 40 ವರ್ಷಗಳಲ್ಲಿ 10 ಕೋಟಿ ರೂ.ಗಳ ಗುರಿಯನ್ನು ಸಾಧಿಸಬಹುದು. ನೀವು ಈ ಹೂಡಿಕೆಯನ್ನು 40 ವರ್ಷಗಳವರೆಗೆ ಮುಂದುವರಿಸಬೇಕು. ಅಂದರೆ 480 ತಿಂಗಳವರೆಗೆ ಪ್ರತಿ ತಿಂಗಳು 600 ರೂ.ಗಳ ಎಸ್‌ಐಪಿ ಮಾಡಬೇಕಾಗುತ್ತದೆ.


10 ಕೋಟಿ ರೂ. ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಿ


ನೀವು ತಿಂಗಳಿಗೆ 600 ರೂ.ಗಳನ್ನು 40 ವರ್ಷಗಳವರೆಗೆ ಹೂಡಿಕೆ(SIP Calculator) ಮಾಡಿದರೆ ಶೇ.15ರಷ್ಟು ವಾರ್ಷಿಕ ರಿಟರ್ನ್ಸ್ ಲೆಕ್ಕ ಹಾಕಿದರೆ 1.88 ಕೋಟಿ ರೂ. ಆಗುತ್ತದೆ. ಈ ಸಮಯದಲ್ಲಿ ನೀವು ಒಟ್ಟು 2.88 ಲಕ್ಷ ರೂ. ಹೂಡಿಕೆ(480 ತಿಂಗಳುಗಳಿಗೆ) ಮಾಡಿರುತ್ತೀರಿ. ಈಗ ನೀವು ಈ SIPನಲ್ಲಿ ಶೇ.20ರಷ್ಟು ವಾರ್ಷಿಕ ಆದಾಯ ಪಡೆದರೆ, ನಂತರ 40 ವರ್ಷಗಳಲ್ಲಿ ನೀವು ಒಟ್ಟು 10.21 ಕೋಟಿ ರೂ.ಗಳಷ್ಟು ಆದಾಯವನ್ನು ಪಡೆಯುತ್ತೀರಿ.


ಇದನ್ನೂ ಓದಿ: ಇನ್ನು ಪಿಂಚಣಿ ಹಣಕ್ಕಾಗಿ ಕಾಯಬೇಕಾಗಿಲ್ಲ, ತಕ್ಷಣ ಖಾತೆಗೆ ಬರುತ್ತದೆ ಪೆನ್ಷನ್


ಹೂಡಿಕೆದಾರರು ಮ್ಯೂಚುಯಲ್ ಫಂಡ್‌(Mutual Funds)ಗಳಲ್ಲಿ ಸಂಯೋಜನೆಯ ಲಾಭವನ್ನು ಪಡೆಯುತ್ತಾರೆ. ಅಲ್ಲದೆ ಇದರಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುವ ಸೌಲಭ್ಯವಿದೆ. ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ನಿಧಿಯನ್ನು ನಿರೀಕ್ಷಿಸಲು ಇದು ಕಾರಣವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.