ನವದೆಹಲಿ : 7th Pay Commission : ಕೇಂದ್ರ ನೌಕರರಿಗೆ ಈ ತಿಂಗಳು ಮತ್ತೊಮ್ಮೆ ಶುಭ ಸುದ್ದಿ ಸಿಗಲಿದೆ. ಮೋದಿ ಸರ್ಕಾರ (Modi government) ತನ್ನ ಉದ್ಯೋಗಿಗಳಿಗೆ ಉಡುಗೊರೆ ನೀಡಲು ಸಿದ್ಧತೆ ನಡೆಸಿದೆ. ಮಾಹಿತಿ ಪ್ರಕಾರ, ಈ ತಿಂಗಳ ಕೊನೆಯ ವಾರದಲ್ಲಿ, ಡಿಎ (DA) ಹೆಚ್ಚಳದ ಜೊತೆಗೆ, HRA ಹೆಚ್ಚಳವನ್ನು ಘೋಷಿಸಬಹುದು.
ದೀಪಾವಳಿಯಂದು ಮೋದಿ ಸರ್ಕಾರವು (Modi government) ಉದ್ಯೋಗಿಗಳ ತುಟ್ಟಿಭತ್ಯೆಯನ್ನು 3 ಶೇಕಡಾ ಹೆಚ್ಚಿಸಿತ್ತು. ಇದೀಗ ಕೇಂದ್ರ ಸರ್ಕಾರ (Central government) ಮತ್ತೊಮ್ಮೆ ನೌಕರರನ್ನು ಸಿಹಿ ಸುದ್ದಿ ನೀಡುವ ಸಿದ್ದತೆ ನಡೆಸಿದೆ ಎನ್ನಲಾಗಿದೆ. ಡಿಎ (DA) ಜೊತೆಗೆ ಮನೆ ಬಾಡಿಗೆ ಭತ್ಯೆ ಹೆಚ್ಚಿಸುವ ಬಗ್ಗೆಯೂ ಸರ್ಕಾರ ಯೋಚಿಸುತ್ತಿದೆ.
ಇದನ್ನೂ ಓದಿ : ಅತಿ ಕಡಿಮೆ ಬೆಲೆಯಲ್ಲಿ ಮನೆ ಮತ್ತು ಮಳಿಗೆ ಖರೀದಿಸುವ ಅವಕಾಶ ನೀಡುತ್ತಿದೆ ಈ ಬ್ಯಾಂಕ್, ಶೀಘ್ರವೇ ಹೀಗೆ ನೊಂದಾಯಿಸಿಕೊಳ್ಳಿ
ಪ್ರಸ್ತಾಪ ರವಾನೆ :
11.56 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ಜಾರಿಗೆ ತರಲು ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ. ಅನುಮೋದನೆಗಾಗಿ ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ಉದ್ಯೋಗಿಗಳಿಗೆ ಎಚ್‌ಆರ್‌ಎ ಸಿಗಲಿದೆ. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ ಜನವರಿ 1, 2021 ರಿಂದ HRA ಅನ್ನು ಜಾರಿಗೆ ತರಲು ಒತ್ತಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮನೆ ಬಾಡಿಗೆ ಭತ್ಯೆ ಹೆಚ್ಚಿಸಿದ ನಂತರ, ನೌಕರರ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ.
'ಮನೆ ಬಾಡಿಗೆ ಭತ್ಯೆ' ಎಷ್ಟು ಆಗಿರುತ್ತದೆ ?
50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು 'X' ವರ್ಗದ ಅಡಿಯಲ್ಲಿ ಬರುತ್ತವೆ . ಅದೇ ಸಮಯದಲ್ಲಿ, 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವವರು 'ವೈ' ವರ್ಗಕ್ಕೆ ಸೇರುತ್ತಾರೆ. 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು 'Z' ವರ್ಗದ ಅಡಿಯಲ್ಲಿ ಬರುತ್ತವೆ. ಎಲ್ಲಾ ಮೂರು ವರ್ಗಗಳಿಗೆ ಕನಿಷ್ಠ HRA 5400, 3600 ಮತ್ತು 1800 ರೂ ಆಗಿರುತ್ತದೆ. ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಿದಾಗ, ಗರಿಷ್ಠ ಮನೆ ಬಾಡಿಗೆ ಭತ್ಯೆಯು (House Rent Allowance) ಶೇಕಡಾ 30 ಕ್ಕೆ ಹೆಚ್ಚಾಗುತ್ತದೆ. ಆದರೆ ಡಿಎ (DA) ಶೇಕಡಾ 50ಕ್ಕಿಂತ ಹೆಚ್ಚಾದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಏಕೆಂದರೆ ಸರಕಾರದ ಹಳೆಯ ಆದೇಶದ ಪ್ರಕಾರ ಡಿಎ ಶೇ.50 ದಾಟಿದರೆ ಎಚ್ ಆರ್ ಎ ಶೇ.30, ಶೇ.20 ಮತ್ತು ಶೇ.10ರಷ್ಟಿರುತ್ತದೆ.
ಇದನ್ನೂ ಓದಿ : Bumper Savings: ಹಣ ಉಳಿತಾಯ ಇದೀಗ ತುಂಬಾ ಸಿಂಪಲ್, '3 Day Rule' ಬಳಕೆಯಿಂದ ಬಂಪರ್ ಉಳಿತಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.