ಐಟಿಆರ್ ಫೈಲಿಂಗ್ 2022: ಈ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು 31 ಜುಲೈ 2022 ಕೊನೆಯ ದಿನವಾಗಿದೆ. ನೀವು ಇನ್ನೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ, ನಿಗದಿತ ಗಡುವು ಮುಗಿಯುವುದರೊಳಗೆ ನಿಮ್ಮ ಐಟಿಆರ್ ಫೈಲ್ ಮಾಡುವುದು ಅಗತ್ಯವಾಗಿದೆ. ನಿಗದಿತ ದಿನಾಂಕದೊಳಗೆ ನೀವು ಐಟಿಆರ್ ಫೈಲ್ ಮಾಡಲು ವಿಫಲರಾದರೆ ನಂತರ ದಂಡ ಪಾವತಿಸಬೇಕಾಗಬಹುದು. 


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ಪೋರ್ಟಲ್‌ನಲ್ಲಿ ರಿಟರ್ನ್ಸ್ ಸಲ್ಲಿಸುವಲ್ಲಿ ನೀವು ತೊಂದರೆಗಳನ್ನು ಎದುರಿಸಿದರೆ, ನೀವು ಇ-ಪ್ಯಾನ್ ಮೂಲಕ ಅದನ್ನು ಸುಲಭಗೊಳಿಸಬಹುದು. ಇ-ಪ್ಯಾನ್‌ನೊಂದಿಗೆ, ಯಾವುದೇ ತೊಂದರೆಯಿಲ್ಲದೆ ರಿಟರ್ನ್ ಸಲ್ಲಿಸಬಹುದು. ಹಾಗಾದರೆ ಡಿಜಿಟಲ್ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ ಎಂದು ತಿಳಿಯೋಣ...


ಇದನ್ನೂ ಓದಿ- ತನ್ನ ಗ್ರಾಹಕರಿಗಾಗಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಆರಂಭಿಸಿದ ಎಸ್‌ಬಿಐ


ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾವುದೇ ಕಾರಣದಿಂದಾಗಿ ಪ್ಯಾನ್ ಕಾರ್ಡ್ ಕಳೆದುಹೋದರೆ ನೀವು ನಿಮ್ಮ ಹಣಕಾಸಿನ ಸಂಬಂಧಿತ ಹಲವು ಕೆಲಸಗಳಲ್ಲಿ ತೊಂದರೆ ಎದುರಿಸಬೇಕಾಗಬಹುದು. ವಿಶೇಷವಾಗಿ ಐಟಿಆರ್  ಸಲ್ಲಿಕೆ ಸಾಧ್ಯವಾಗದೇ ಇರಬಹುದು. ಇಂತಹ ಸಮಯದಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ತ್ವರಿತ ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ.


ಆದಾಯ ತೆರಿಗೆಯ ವೆಬ್‌ಸೈಟ್  ಮೂಲಕ ಇ-ಪ್ಯಾನ್ ಅನ್ನು ನಿಮಿಷಗಳಲ್ಲಿ ಡೌನ್‌ಲೋಡ್ ಮಾಡುವ ಸೇವೆಯನ್ನು ಸಹ ಪ್ರಾರಂಭಿಸಲಾಯಿತು. ತಕ್ಷಣ ಇ-ಪ್ಯಾನ್ ಅಥವಾ ಅಥವಾ ಡಿಜಿಟಲ್ ಆವೃತ್ತಿಯ ಪ್ಯಾನ್ ಅನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಅರ್ಥಾತ್ ನೀವು ಐಟಿಆರ್ ಫೈಲ್ ಮಾದುಲ್ ಭೌತಿಕ ಪ್ಯಾನ್‌ಗಾಗಿ ಕಾಯುವ ಅಗತ್ಯವಿಲ್ಲ. ನೀವು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಕೇವಲ 10 ನಿಮಿಷಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಬಹುದು.


ಇದನ್ನೂ ಓದಿ- EPFO- ಡೈರೆಕ್ಟ್ UAN ರಚಿಸುವ ಸುಲಭ ಪ್ರಕ್ರಿಯೆ


ಆದಾಯ ತೆರಿಗೆ ಪೋರ್ಟಲ್‌ನಿಂದ ಇ-ಪ್ಯಾನ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ.
* ಇದಕ್ಕಾಗಿ ಮೊದಲು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್ https://www.incometax.gov.in ಗೆ ಭೇಟಿ ನೀಡಿ.
* "ನಮ್ಮ ಸೇವೆಗಳು" ವಿಭಾಗದ ಅಡಿಯಲ್ಲಿ, 'ತತ್‌ಕ್ಷಣ ಇ-ಪ್ಯಾನ್' ಆಯ್ಕೆಯನ್ನು ಹುಡುಕಿ.
* ನೀವು ಮೊದಲೇ ಇ-ಪ್ಯಾನ್ ಡೌನ್‌ಲೋಡ್ ಮಾಡಿದ್ದರೆ, ನೀವು 'ಸ್ಥಿತಿಯನ್ನು ಪರಿಶೀಲಿಸಿ/ ಇ-ಪ್ಯಾನ್ ಡೌನ್‌ಲೋಡ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆದರೆ ನೀವು ಮೊದಲು ಇ-ಪ್ಯಾನ್ ಡೌನ್‌ಲೋಡ್ ಮಾಡದಿದ್ದರೆ, ನೀವು 'ಹೊಸ ಇ-ಪ್ಯಾನ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ನಂತರ ನೀಡಿರುವ ಆಯ್ಕೆಗಳನ್ನು ಗಮನಿಸಿ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಆಯ್ಕೆಯನ್ನು ಆರಿಸಿಕೊಳ್ಳಬೇಕು ಮತ್ತು ನಂತರ ಮುಂದುವರಿಸಿ ಕ್ಲಿಕ್ ಮಾಡಿ.
* ಈಗ ಹೊಸ ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಇನ್‌ಪುಟ್ ಕ್ಷೇತ್ರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
* ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ಪುಟವು ಘೋಷಣೆಯನ್ನು ಪ್ರದರ್ಶಿಸುತ್ತದೆ, ಇಲ್ಲಿ ನೀವು ಮುಂದುವರಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಇದರ ನಂತರ ನೋಂದಾಯಿತ ಅಥವಾ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನಿಗದಿತ ಜಾಗದಲ್ಲಿ ಒಟಿಪಿ ನಮೂದಿಸಿ.
* ಎಲ್ಲಾ ವಿವರಗಳನ್ನು ನಿಮ್ಮ ಮುಂದೆ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ನಿಮ್ಮ ಇಮೇಲ್ ಅನ್ನು ನಮೂದಿಸಿ.
* ನಿಮ್ಮ ಇ-ಮೇಲ್ ಇನ್‌ಬಾಕ್ಸ್‌ನಲ್ಲಿ ನೀವು ಶೀಘ್ರದಲ್ಲೇ ಇ-ಪ್ಯಾನ್ ಅನ್ನು ಪಡೆಯುತ್ತೀರಿ. ನಿಮ್ಮ ಇ-ಪ್ಯಾನ್‌ನ ಪ್ರಿಂಟ್ ಔಟ್ ಅನ್ನು ಸಹ ನೀವು ತೆಗೆದುಕೊಳ್ಳಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.