ಐಟಿಆರ್ ಸಲ್ಲಿಸುವುದು ತಡವಾದರೂ ಬೀಳುವುದಿಲ್ಲ ದಂಡ .! ಏನು ಹೇಳುತ್ತದೆ ಹೊಸ ನಿಯಮ

  Income Tax Return Last Date:ಐಟಿಆರ್ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ನಿಧಾನವಾಗುತ್ತಿದೆ.  

Written by - Ranjitha R K | Last Updated : Jul 22, 2022, 01:07 PM IST
  • ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ.
  • ಐಟಿಆರ್ ಫಾರ್ಮ್ ಅನ್ನು ಮೊದಲೇ ನೋಟಿಫೈ ಮಾಡಲಾಗಿದೆ.
  • ದಂಡವಿಲ್ಲದೆ ಐಟಿಆರ್ ಸಲ್ಲಿಕೆ ಹೇಗೆ ತಿಳಿದುಕೊಳ್ಳಿ
  ಐಟಿಆರ್ ಸಲ್ಲಿಸುವುದು ತಡವಾದರೂ ಬೀಳುವುದಿಲ್ಲ ದಂಡ .! ಏನು ಹೇಳುತ್ತದೆ ಹೊಸ ನಿಯಮ title=
Income Tax Return Last Date (file photo)

Income Tax Return Last Date: ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಈ ಬಾರಿ ಐಟಿಆರ್ ಫೈಲಿಂಗ್‌ಗೆ  ಜುಲೈ 31 ಕೊನೆಯ ದಿನವಾಗಿದೆ. 2021-22 ವರ್ಷಕ್ಕೆ ಸಂಬಂಧಿಸಿದಂತೆ ಐಟಿಆರ್ ಫಾರ್ಮ್ ಅನ್ನು ಮೊದಲೇ ನೋಟಿಫೈ ಮಾಡಲಾಗಿದೆ.  ಐಟಿಆರ್ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ನಿಧಾನವಾಗುತ್ತಿದೆ.

ದಂಡವಿಲ್ಲದೆ ಐಟಿಆರ್ ಸಲ್ಲಿಕೆ : 
ಏತನ್ಮಧ್ಯೆ, ಜುಲೈ 31 ರೊಳಗೆ ಐಟಿಆರ್ ಸಲ್ಲಿಸದಿದ್ದರೆ, ನಂತರ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಐಟಿಆರ್ ಅನ್ನು ಕೊನೆಯ ದಿನಾಂಕದ ನಂತರವೂ ದಂಡವಿಲ್ಲದೆ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ನೋಡೋಣ. 

ಇದನ್ನೂ ಓದಿ : ಅಧಿಕ ಮೈಲೇಜ್ ನೀಡುವ ಸಿಎನ್‌ಜಿ ಕಾರು

ವಿನಾಯಿತಿ ಮಿತಿಗಿಂತ ಕಡಿಮೆ ಆದಾಯದ ಮೇಲೆ ಪರಿಹಾರವನ್ನು ನೀಡಲಾಗುವುದು :
ಆದಾಯ ತೆರಿಗೆಯ ಸೆಕ್ಷನ್ 234 ಎಫ್ ಅಡಿಯಲ್ಲಿ, ವ್ಯಕ್ತಿಯ ಆರ್ಥಿಕ ವರ್ಷದಲ್ಲಿನ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರದಿದ್ದರೆ, ಐಟಿಆರ್ ತಡವಾಗಿ ಸಲ್ಲಿಸುವಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಆದಾಯ ತೆರಿಗೆ ತಜ್ಞರು ಹೇಳುತ್ತಾರೆ.

ಸರಳ ಭಾಷೆಯಲ್ಲಿ ಅರ್ಥಮಾಡಿಕೊಲ್ಳುವುದಾದರೆ : 
 ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳಬೇಕಾದರೆ  ಜುಲೈ 31 ರ ನಂತರ 2.5 ಲಕ್ಷದವರೆಗಿನ ಆದಾಯ ಹೊಂದಿರುವವರು ಆದಾಯ ತೆರಿಗೆ ಸಲ್ಲಿಸಿದರೆ, ಆಗ  ಯಾವುದೇ ರೀತಿಯ ದಂಡವನ್ನು ಪಾವತಿಸಬೇಕಾಗಿಲ್ಲ. ಆದರೆ, ಅದು ನೀವು ಆಯ್ಕೆ ಮಾಡಿದ ತೆರಿಗೆ ಆಡಳಿತವನ್ನು ಅವಲಂಬಿಸಿರುತ್ತದೆ. 

ಇದನ್ನೂ ಓದಿ :  ಸರ್ಕಾರದ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತದೆ 5 ಸಾವಿರ ರೂಪಾಯಿ ಪಿಂಚಣಿ ..!

ವಯಸ್ಸು ಮತ್ತು ವಾರ್ಷಿಕ ಆದಾಯ ವಿನಾಯಿತಿ :
ಅದೇ ರೀತಿ, ಯಾರಾದರೂ ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿದರೆ,  60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ವಿನಾಯಿತಿಯು 2.5 ಲಕ್ಷ ರೂ. ಆಗಿರುತ್ತದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ಮತ್ತು 80 ವರ್ಷಕ್ಕಿಂತ ಕಡಿಮೆ ಇರುವವರಿಗೆ 3 ಲಕ್ಷದವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ.  80 ವರ್ಷ ಮೇಲ್ಪಟ್ಟವರಿಗೆ ಮೂಲ ವಿನಾಯಿತಿ ಮಿತಿ 5 ಲಕ್ಷ ಆಗಿರುತ್ತದೆ. 

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News