Income Tax Return Filing 2024 : ಆದಾಯ ತೆರಿಗೆ ಪಾವತಿಸುವವರಿಗೆ ಇದು ಪ್ರಮುಖ ಸುದ್ದಿ. ಪ್ರಸಕ್ತ ಹಣಕಾಸು ವರ್ಷ 2023-24 ರ ಆದಾಯ ತೆರಿಗೆ ರಿಟರ್ನ್ ಫಾರ್ಮ್ ಅನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಬಿಡುಗಡೆ ಮಾಡಿದೆ. ಈ ಬಾರಿ ಸಿಬಿಡಿಟಿ ಐಟಿಆರ್ ಫಾರ್ಮ್ 1 ಮತ್ತು ಐಟಿಆರ್ ಫಾರ್ಮ್ 4ರಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ಬಾರಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು, ಈ ಬದಲಾವಣೆಗಳನ್ನು ತಿಳಿದಿರಬೇಕು. 


COMMERCIAL BREAK
SCROLL TO CONTINUE READING

ಈ ಬಾರಿ ಆರ್ಥಿಕ ವರ್ಷ ಮುಗಿಯುವ 3 ತಿಂಗಳಿರುವಾಗಲೇ ಸರ್ಕಾರ ಈ ನಮೂನೆಗಳನ್ನು ಬಿಡುಗಡೆ ಮಾಡಿದೆ. ಐಟಿಆರ್ ಫಾರ್ಮ್ ಅನ್ನು ಭರ್ತಿ ಮಾಡಲು 31 ಜುಲೈ 2024 ಕೊನೆಯ ದಿನಾಂಕ ಆಗಿದೆ. ಅಂದರೆ ಐಟಿಆರ್ ಸಲ್ಲಿಸಲು ನೀಡಿರುವ ಗಡುವಿನ 7 ತಿಂಗಳ ಮುಂಚೆಯೇ ಸರ್ಕಾರ ಈ ನಮೂನೆಗಳನ್ನು ಬಿಡುಗಡೆ ಮಾಡಿದೆ. 


ಇದನ್ನೂ ಓದಿ : Pension Scheme: ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 7 ರೂ. ಹೂಡಿಕೆ ಮಾಡಿದರೆ 5 ಸಾವಿರ ಪಿಂಚಣಿ ಸಿಗಲಿದೆ!


ಐಟಿಆರ್ ಫಾರ್ಮ್‌ನಲ್ಲಿ ಯಾವ ಬದಲಾವಣೆಗಳಾಗಿವೆ? :
1. ಈ ಬಾರಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಿಂದಾಗಿ, ವಿಭಾಗ 115BAC ಸಹ ಬದಲಾಗಿದೆ. ಹೊಸ ತೆರಿಗೆ ಪದ್ಧತಿಯು ಈಗ ವೈಯಕ್ತಿಕ, HUF, AOP, BOI ಮತ್ತು AJP ಗಾಗಿ ಡೀಫಾಲ್ಟ್ ಆಯ್ಕೆಯಾಗಿದೆ. ಇದಲ್ಲದೆ, ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಲು ಯಾರು ಬಯಸುವುದಿಲ್ಲವೋ ಅವರು ಅದರಿಂದ ಹೊರಗುಳಿಯಬೇಕಾಗುತ್ತದೆ. ಆ ಜನರು ಹಳೆಯ ತೆರಿಗೆ ಪದ್ಧತಿಯನ್ನೇ ಆಯ್ಕೆ ಮಾಡಬಹುದು. 


2. ಇದರ ಹೊರತಾಗಿ, ಈ ಬಾರಿ ನೀಡಲಾದ ITR ಫಾರ್ಮ್ 1 ಮತ್ತು 4 ರ ಹೊಸ ಆವೃತ್ತಿಯಲ್ಲಿ, ಸೆಕ್ಷನ್ 80CCH ಅಡಿಯಲ್ಲಿ ಮಾಡಬೇಕಾದ ಕಡಿತವನ್ನು ವರದಿ ಮಾಡಲು ಪ್ರತ್ಯೇಕ ಕಾಲಮ್ ನೀಡಲಾಗಿದೆ. 


3. ಸೆಕ್ಷನ್ 80CCH ಅನ್ನು ಹಣಕಾಸು ಕಾಯಿದೆ 2023 ರಲ್ಲಿ ಸೇರಿಸಲಾಗಿದೆ. ಇದರ ಹೊರತಾಗಿ, ಅಗ್ನಿಪಥ್ ಯೋಜನೆಯಲ್ಲಿ  (Agnipath Scheme)ಭಾಗವಹಿಸುವ ಯಾರೇ ಆಗಿರಲಿ, ಅಗ್ನಿವೀರ್ ಕಾರ್ಪಸ್ ಫಂಡ್‌ಗೆ (Agniveer Corpus Fund) ಕೊಡುಗೆ ನೀಡುವವರು ನವೆಂಬರ್ 1, 2022 ರಿಂದ ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತಾರೆ. 


ಇದನ್ನೂ ಓದಿ : ಶೀಘ್ರವೇ ಹೊಸ Mercedes-Benz GLS ಫೇಸ್‌ಲಿಫ್ಟ್ ಬಿಡುಗಡೆ; ಈ ದಿನ ಮಾರುಕಟ್ಟೆಗೆ ಎಂಟ್ರಿ!


4. ಇದಲ್ಲದೆ, ಇನ್ನು ಮುಂದೆ ತೆರಿಗೆದಾರರು ತಮ್ಮ ಎಲ್ಲಾ ಬ್ಯಾಂಕ್ ಖಾತೆಗಳು ಮತ್ತು ವರ್ಷದ ನಗದು ವ್ಯವಹಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. 


ಐಟಿಆರ್ ಫಾರ್ಮ್ 1 : 
ವಾರ್ಷಿಕ ಆದಾಯ 50 ಲಕ್ಷ ರೂ.ವರೆಗೆ ಇದ್ದರೆ ಐಟಿಆರ್ ಫಾರ್ಮ್ ಸಲ್ಲಿಸಬೇಕು. 50 ಲಕ್ಷದವರೆಗಿನ ಆದಾಯದಲ್ಲಿ ನಿಮ್ಮ ವೇತನ, ಪಿಂಚಣಿ ಅಥವಾ  ಬೇರೆ ಎಲ್ಲಾ ಮೂಲಗಳೂ ಸೇರಿರುತ್ತವೆ. ಇದರೊಂದಿಗೆ ಕೃಷಿಯಿಂದ ಬರುವ 5000 ರೂಪಾಯಿ ಆದಾಯವನ್ನು ಕೂಡಾ ಸೇರಿಸಲಾಗಿದೆ. 


ಐಟಿಆರ್ ಫಾರ್ಮ್ 4 : 
ಇದರ ಹೊರತಾಗಿ, ನಾವು ITR-4 ಹಿಂದೂ ಅವಿಭಜಿತ ಕುಟುಂಬ ಮತ್ತು ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಂಪನಿಗಳಿಗೆ ಅನ್ವಯಿಸುತ್ತದೆ. ನಿಮ್ಮ ವಾರ್ಷಿಕ ಆದಾಯ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಫಾರ್ಮ್ 4 ಅನ್ನು ಭರ್ತಿ ಮಾಡಬೇಕು. ಇದರಲ್ಲಿಯೂ ನೀವು ವರ್ಷದ ನಗದು ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಕಳೆದ ವರ್ಷ, ಕ್ರಿಪ್ಟೋಕರೆನ್ಸಿಗೆ ಪ್ರತ್ಯೇಕ ಕಾಲಮ್ ಅನ್ನು ಸೇರಿಸಲಾಯಿತು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.