ಬೆಂಗಳೂರು: ಪ್ರಸ್ತುತ ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದು, ಈಗಾಗಲೇ 2 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ದಾಖಲಾಗಿದೆ. ಈ ಬಾರಿ ಸರ್ಕಾರವು ವೈಯಕ್ತಿಕ ತೆರಿಗೆದಾರರಿಗೆ 31 ಜುಲೈ 2023 ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. 2022-23 ರ ಹಣಕಾಸು ವರ್ಷಕ್ಕೆ, ಜನರು ಜುಲೈ 31 ರವರೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು. ಇದೇ ವೇಳೆ, ಕೆಲವು ಜನರಿಗೆ ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಇದಕ್ಕಾಗಿ ಕೆಲವು ಷರತ್ತುಗಳನ್ನು ಅನುಸರಿಸಬೇಕು. ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ರಿಟರ್ನ್
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 194P ಅಡಿಯಲ್ಲಿ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ (Business News In Kannada) ಕೆಲವು ಹಿರಿಯ ನಾಗರಿಕರಿಗೆ ವಿನಾಯ್ತಿ ನೀಡಲಾಗಿದೆ. ಆದಾಗ್ಯೂ, ಅಂತಹ ಜನರು ಕೆಲವು ಷರತ್ತುಗಳನ್ನು ಸಹ ಅನುಸರಿಸಬೇಕಾಗುತ್ತದೆ. ವಾಸ್ತವದಲ್ಲಿ, ಹಿರಿಯ ನಾಗರಿಕರು ಭಾರತದ ನಿವಾಸಿಗಳಾಗಿರಬೇಕು ಮತ್ತು ಅವರ ವಯಸ್ಸು ಮಾರ್ಚ್ 31, 2023 ರೊಳಗೆ 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಅವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ಪಡೆಯಬಹುದು.


ಇದನ್ನೂ ಓದಿ-ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ! ಮತ್ತೆ ಹೆಚ್ಚಾಯ್ತು ಚಿಲ್ಲರೆ ಹಣದುಬ್ಬರ


ತೆರಿಗೆ 
ಆದರೆ, ಇದರಲ್ಲಿ ಒಂದು ವಿಶೇಷ ಸಂಗತಿ ಇರುವುದು ಒಂದು ಗಮನಾರ್ಹ. ಪಿಂಚಣಿಯನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಆದಾಯ ಇಲ್ಲದ ಹಿರಿಯ ನಾಗರಿಕರು ಇವರಾಗಿರಬೇಕು. ಅಷ್ಟೇ ಅಲ್ಲ ಯಾವ ಖಾತೆಗೆ ಪಿಂಚಣಿ ಬರುತ್ತಿದೆಯೋ, ಆ ಬ್ಯಾಂಕ್ ನಿಂದ ಬಡ್ಡಿಯಾಗಿ ಅವರು ಆದಾಯ ಪಡೆಯುತ್ತಿದ್ದರೂ ಕೂಡ ಅಂತಹ ಹಿರಿಯ ನಾಗರಿಕರು ಐಟಿಆರ್ ದಾಖಲಿಸುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಘೋಷಣೆಯನ್ನು ಸಲ್ಲಿಸಬಹುದು. ಇದೇ ವೇಳೆ, ಅಂತಹ ಹಿರಿಯ ನಾಗರಿಕರು ಎರಡು ವಿಭಾಗಗಳಲ್ಲಿ ಬರುತ್ತಾರೆ. ತೆರಿಗೆ ಪಾವತಿಸದೆ ಇರುವ ಒಂದು ವರ್ಗ ಮತ್ತು ತೆರಿಗೆ ಪಾವತಿಸುವ ಎರಡನೇ ವರ್ಗ, 


ಇದನ್ನೂ ಓದಿ-ಟೊಮೆಟೊ ದರಕ್ಕೆ ಸಂಬಂಧಿಸಿದಂತೆ ಇಲ್ಲಿದೆ ಒಂದು ಸಂತಸದ ಸುದ್ದಿ!


ಟಾಕ್ಸ್ ಅಡ್ಮಿನಿಸ್ಟ್ರೇಷನ್
ಐಟಿಆರ್ ಸಲ್ಲಿಸಲು ಎರಡು ತೆರಿಗೆ ಪದ್ಧತಿಗಳನ್ನು ಬಳಸಲಾಗುತ್ತಿದೆ. ಒಂದು ಹೊಸ ತೆರಿಗೆ ಪದ್ಧತಿ ಮತ್ತು ಇನ್ನೊಂದು ಹಳೆಯ ತೆರಿಗೆ ಪದ್ಧತಿ. ಎರಡೂ ತೆರಿಗೆ ಪದ್ಧತಿಗಳು ತಮ್ಮದೇ ಆದ ವಿಶಿಷ್ಟ ಪ್ರಯೋಜನಗಳನ್ನು ಹೊಂದಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.