ನವದೆಹಲಿ: ನೀವು ಸಹ ಒಂದು ತಿಂಗಳಿಗಿಂತ ಕಡಿಮೆ ಕಾಲ ಅನ್‌ಲಿಮಿಟೆಡ್ ಇಂಟರ್ನೆಟ್ ಅನ್ನು ಆನಂದಿಸಲು ಬಯಸಿದರೆ, ನಿಮಗೆ ಗುಡ್ಸು ನ್ಯೂಸ್ ಒಂದು ಇದೆ. ದೇಶದ ಪ್ರಮುಖ ಟೆಲಿಕಾಂ ಕಂಪನಿ ಜಿಯೋ ಇತ್ತೀಚೆಗೆ ತನ್ನ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಒಂದನ್ನ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಜಿಯೋ ಅಗ್ಗದ ಪ್ಲಾನ್: 


ಜಿಯೋ ಈ ಯೋಜನೆಯ ಬೆಲೆ ಕೇವಲ 329 ರೂಪಾಯಿಗೆ ಲಭ್ಯವಿದೆ. ರೀಚಾರ್ಜ್(Jio Recharge Plan) ಮಾಡಿದ ನಂತರ  ಗ್ರಾಹಕರಿಗೆ 6 ಜಿಬಿ ಹೈಸ್ಪೀಡ್ ಡೇಟಾ, ಅನಿಯಮಿತ ಕರೆ, 100 ಎಸ್‌ಎಂಎಸ್ ಸಿಗುತ್ತದೆ. ಈ ಯೋಜನೆಯ ಅವಧಿ 84 ದಿನಗಳು. ನಿಮ್ಮ ದಿನದ ಇಂಟೆರ್ ನೆಟ್ ಮುಗಿದರೆ ಡೇಟಾ ಸ್ಪೀಡ್ ಮಿತಿ 64 ಕೆಬಿಪಿಎಸ್ ವೇಗದಲ್ಲಿ ಚಲಿಸುತ್ತದೆ. 6 ಜಿಬಿ ಬಳಸಿದ ನಂತರವೂ ನಿಮ್ಮ ಇಂಟರ್ನೆಟ್ ಖಡಿತ ಮಾಡುವುದಿಲ್ಲ. ಆದ್ರೆ, ವೇಗದ ಮಿತಿಯನ್ನ ಮಾತ್ರ ಕಡಿಮೆ ಮಾಡಲಾಗುತ್ತದೆ.


ಇದನ್ನೂ ಓದಿ : PPF: ಪ್ರತಿ ತಿಂಗಳು 7500 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿಯ ವೇಳೆಗೆ ಮಿಲಿಯನೇರ್ ಆಗಿ


ವೊಡಾಫಾನ್-ಐಡಿಯಾ ಯೋಜನೆ:


ನೀವು ವಿಐ ಗ್ರಾಹಕರಾಗಿದ್ದರೆ, ನೀವು 379 ರೂಗಳನ್ನು ರೀಚಾರ್ಜ್(Vi Recharge Plan) ಮಾಡಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿ, ನಿಮಗೆ 84 ದಿನಗಳವರೆಗೆ 6 ಜಿಬಿ ಡೇಟಾವನ್ನು ನೀಡಲಾಗುವುದು. ಇದರೊಂದಿಗೆ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ, 1000 ಎಸ್‌ಎಂಎಸ್ ಮತ್ತು ಯೋಜನೆಯಲ್ಲಿ ವಿ ಮೂವೀಸ್ ಮತ್ತು ಟಿವಿಗೆ ಪ್ರವೇಶ ಸಿಗುತ್ತದೆ.


ಇದನ್ನೂ ಓದಿ : Gold-Silver Price: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ₹ 9300 ಇಳಿಕೆ ಕಂಡ ಚಿನ್ನದ ಬೆಲೆ!


ಏರ್‌ಟೆಲ್‌ನ ಧನ್ಸು ಯೋಜನೆ:


ಏರ್‌ಟೆಲ್ ಬಳಕೆದಾರರು 6 ಜಿಬಿ ಡೇಟಾ(Data), ಅನಿಯಮಿತ ವಾಯ್ಸ್ ಕಾಲಿಂಗ್, 900 ಎಸ್‌ಎಂಎಸ್ ಅನ್ನು 84 ದಿನಗಳವರೆಗೆ 379 ರೂಗಳನ್ನು ಮಾತ್ರ ರೀಚಾರ್ಜ್ ಮಾಡುವ ಮೂಲಕ ಪಡೆಯಬಹುದು. ಇದರೊಂದಿಗೆ ಏರ್‌ಟೆಲ್ ತನ್ನ ಬಳಕೆದಾರರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಗೆ ಅವಕಾಶ ನೀಡಲಾಗುತ್ತದೆ.


ಇದನ್ನೂ ಓದಿ : ಪಾಲಿಸಿದಾರರಿಗೆ ಎಲ್ಐಸಿ ತರಾತುರಿಯ ಆಲರ್ಟ್ ಜಾರಿ ಮಾಡಿದ್ದೇಕೆ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.