ನವದೆಹಲಿ : ದೇಶದಲ್ಲಿ ಹೆಚ್ಚಾಗುತ್ತಿರುವ ಆನ್ ಲೈನ್ ವಂಚನೆ (Online Fraud) ಹಿನ್ನೆಲೆಯಲ್ಲಿ ಭಾರತದ ಅತ್ಯಂತದೊಡ್ಡ ವಿಮಾ ಕಂಪನಿಯಾದ ಎಲ್ ಐಸಿ (LIC) ತನ್ನ ಗ್ರಾಹಕರಿಗೆ ಅಲರ್ಟ್ ಜಾರಿ ಮಾಡಿದೆ. ತಾನು ಎಲ್ಐಸಿ ಅಧಿಕಾರಿ ಅಥವಾ ಐಆರ್ ಡಿಎಐ (IRDAI) ಅಧಿಕಾರಿ ಎಂದು ಕೊಂಡು ಯಾರಾದರೂ ನಿಮಗೆ ಕಾಲ್ ಮಾಡಿದರೆ, ಎಚ್ಚರವಾಗಿರಿ. ನಿಮ್ಮನ್ನು ವಂಚಿಸುವ ಉದ್ದೇಶದಿಂದ ಈ ಕರೆ ಬಂದಿರಬಹುದು ಎಂದು ಎಲ್ ಐಸಿ ಹೇಳಿದೆ.
ಇದು ವಂಚನೆಯ ಮಹಾಜಾಲ.!
ತಾನು ಎಲ್ಐಸಿ (LIC) ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿ ಎಲ್ಐಸಿ ಗ್ರಾಹಕರಿಗೆ ಫೋನ್ ಮಾಡಿ ಪಾಲಿಸಿ ಸರಂಡರ್ ಬಗ್ಗೆ ಮಾತಾಡುತ್ತಾನೆ. ಈಗಿರುವ ಪಾಲಿಸಿ ಸರೆಂಡರ್ ಮಾಡಿ ಹೊಸ ಪಾಲಿಸಿ ಖರೀದಿ ಮಾಡಿ. ಹೊಸ ಪಾಲಿಸಿಯಲ್ಲಿ (Policy)ಸಾಕಷ್ಟು ಲಾಭ ಇದೆ ಎಂದು ನಂಬಿಸುತ್ತಾನೆ. ಕೊನೆಗೆ ಇದು ಮೋಸದಲ್ಲಿ ಕೊನೆಗೊಳ್ಳುತ್ತದೆ ಎಂದು ಎಲ್ಐಸಿ ಹೇಳಿದೆ. ಆ ರೀತಿಯ ಕಾಲ್ಸ್ ಬಂದರೆ ಅದಕ್ಕೆ ಯಾವುದೇ ಕಾರಣಕ್ಕೂ ಬಲಿಯಾಗಬೇಡಿ. ಬದಲಿಗೆ ಅಲರ್ಟ್ ಇರಿ ಎಂದು ಎಲ್ಐಸಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : 7th Pay Commission: ಜುಲೈನಿಂದ ಸರ್ಕಾರಿ ನೌಕರರ ಪಿಎಫ್ನಲ್ಲಿ ಮಹತ್ವದ ಬದಲಾವಣೆ!
ಎಲ್ಐಸಿ ಯಾವತ್ತಿಗೂ ಕಾಲ್ ಮಾಡುವುದಿಲ್ಲ.
ಎಲ್ಐಸಿ ಎಂದೂ ಕೂಡಾ ತನ್ನ ಗ್ರಾಹಕರಿಗೆ (Customer) ಕಾಲ್ ಮಾಡಿ ಪಾಲಿಸಿ ಸರೆಂಡರ್ ಮಾಡಲು ಪ್ರಚೋದಿಸುವುದಿಲ್ಲ. ಗ್ರಾಹಕರಿಗೆ ಪಾಲಿಸಿಯ ಬಗ್ಗೆ ಮಾಹಿತಿ ಬೇಕಾದರೆ, ಎಲ್ಐಸಿ ಅಧಿಕೃತ ವೆಬ್ ಸೈಟಿಗೆ (website) ಹೋಗಿ ಪಾಲಿಸಿ ನೊಂದಾಯಿಸಿ, ಅಲ್ಲಿಂದ ಯಾವುದೇ ಮಾಹಿತಿ ಬೇಕಾದರೂ ಪಡೆಯಬಹುದು ಎಂದು ಹೇಳಿದೆ. ಪಾಲಿಸಿ ಮಾಹಿತಿ ಪಡೆಯಲು ಯಾವತ್ತಿಗೂ ಎಲ್ಲಿಗೂ ಹೋಗಬೇಕಾದ ಅಗತ್ಯವೇನಿಲ್ಲ ಎಂದು ಎಲ್ಐಸಿ ಹೇಳಿಕೊಂಡಿದೆ.
ಆಲರ್ಟ್ ಆಗಿರಿ ಎಂದಿದೆ ಎಲ್ಐಸಿ :
ಸಿಕ್ಕಿದವರಲ್ಲಿ ಎಲ್ಲಾ ಎಲ್ಐಸಿ ಪಾಲಿಸಿಯನ್ನು ಖರೀದಿಸಬೇಡಿ. IRDAI ಮೂಲಕ ಪಡೆದ ಲೈಸೆನ್ಸ್ ಇದ್ದರೆ ಅಥವಾ ಎಲ್ಐಸಿ ನೀಡಿರುವ ಐಡಿ ಕಾರ್ಡ್ ಇರುವರ ಬಳಿ ಮಾತ್ರ ಪಾಲಿಸಿ ಖರೀದಿಸಿ ಎಂದು ಎಲ್ ಐಸಿ ಹೇಳಿದೆ. ಎಲ್ಐಸಿ ಎಂದು ಕೊಂಡು ಯಾರಾದರೂ ಕಾಲ್ ಮಾಡಿದ್ದರೆ, ಅಂಥಹ ದೂರನ್ನು co_crm_fb@licindia ಗೆ ಸಲ್ಲಿಸಿ ಎಂದು ಅದು ಹೇಳಿದೆ.
ಇದನ್ನೂ ಓದಿ : ಈ ಬ್ಯಾಂಕುಗಳು ನೀಡುತ್ತಿವೆ special FD scheme; ಅಧಿಕ ಬಡ್ಡಿಯೊಂದಿಗೆ ಸಿಗಲಿದೆ ಉತ್ತಮ ರಿಟರ್ನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.