Jio UPI Payments : ಟೆಲಿಕಾಂ ವಲಯದಲ್ಲಿ ಇತಿಹಾಸವನ್ನು ಸೃಷ್ಟಿಸಿದ ನಂತರ, ಮುಖೇಶ್ ಅಂಬಾನಿ ಈಗ UPI ವಲಯವನ್ನು ಪ್ರವೇಶಿಸುವ ಯೋಚನೆಯಲ್ಲಿದ್ದಾರೆ. ಈ ವಿಭಾಗಕ್ಕೆ ಜಿಯೋ ಪ್ರವೇಶದಿಂದಾಗಿ, PhonePe ಮತ್ತು Paytmಗೆ ಭಾರೀ ಟಕ್ಕರ್ ಸಿಗುವುದು ಗ್ಯಾರಂಟಿ. ಉಚಿತ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಿಯೋ ಟೆಲಿಕಾಂ ವಲಯದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿ ಈ  ಮಾರುಕಟ್ಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.  


COMMERCIAL BREAK
SCROLL TO CONTINUE READING

ಸುದ್ದಿಯ ಪ್ರಕಾರ, Jio ಶೀಘ್ರದಲ್ಲೇ ಸೌಂಡ್‌ಬಾಕ್ಸ್ (Jio Soundbox) ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ. Jio ಚಿಲ್ಲರೆ ಮಳಿಗೆಗಳಲ್ಲಿ ಸೌಂಡ್‌ಬಾಕ್ಸ್ ಅನ್ನು  ಈಗಾಗಲೇ ಪ್ರಾರಂಭಿಸಿದೆ. ಇದು ನೇರವಾಗಿ Paytm ಸೌಂಡ್‌ಬಾಕ್ಸ್‌ನೊಂದಿಗೆ ಸ್ಪರ್ಧಿಸುತ್ತದೆ. 


ಇದನ್ನೂ ಓದಿ : ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ ಈ ಸೌಲಭ್ಯ


Paytm ಬಿಕ್ಕಟ್ಟಿನ ಪ್ರಯೋಜನ ಪಡೆಯಲಿದೆಯೇ ಜಿಯೋ : 
ಮುಕೇಶ್ ಅಂಬಾನಿಯವರ ಜಿಯೋ ಪೇ ಅಪ್ಲಿಕೇಶನ್‌ಗೆ ಸೌಂಡ್‌ಬಾಕ್ಸ್ ಅನ್ನು ಶೀಘ್ರದಲ್ಲೇ ಸೇರಿಸಲಾಗುವುದು. ವರದಿಯ ಪ್ರಕಾರ, Jio ನಿಂದ ಸೌಂಡ್‌ಬಾಕ್ಸ್‌ನ ಪ್ರಯೋಗವೂ ಪ್ರಾರಂಭವಾಗಿದೆ.ಪ್ರಸ್ತುತ, ಈ ವಿಭಾಗದಲ್ಲಿ ಅನೇಕ ಅಪ್ಲಿಕೇಶನ್‌ಗಳು ಈಗಾಗಲೇ ಲಭ್ಯವಿದೆ. ಪ್ರಸ್ತುತ, ಪೇಟಿಎಂ ವಿರುದ್ಧ RBI ತೆಗೆದುಕೊಂಡ ದೊಡ್ಡ ಕ್ರಮದ ಲಾಭವನ್ನು ಮುಖೇಶ್ ಅಂಬಾನಿ ಪಡೆಯುವ ಸಾಧ್ಯತೆ ಇದೆ.  


ಗ್ರಾಹಕರಿಗೆ ಸಿಗಬಹುದು ಆಕರ್ಷಕ ರಿಯಾಯಿತಿ : 
ಮುಖೇಶ್ ಅಂಬಾನಿ ಯುಪಿಐ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಗ್ರಾಹಕರಿಗೆ ಹಲವು ಆಕರ್ಷಕ ಕೊಡುಗೆಗಳನ್ನು ನೀಡಬಹುದು.ಜಿಯೋದ ಈ ಪ್ಲಾನ್‌ನಿಂದಾಗಿ ಇತರ ಕಂಪನಿಗಳ ಕಳವಳ ಹೆಚ್ಚುತ್ತಿದೆ. Paytm ಮೇಲೆ ವಿಧಿಸಲಾದ ನಿಷೇಧದ ಲಾಭವನ್ನು Jio ಸುಲಭವಾಗಿ ಪಡೆಯಬಹುದು. 


ಇದನ್ನೂ ಓದಿ : Xstream Air Fiber ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ Airtel


ಫ್ಲಿಪ್‌ಕಾರ್ಟ್ ಕೂಡ ಒದಗಿಸುತ್ತಿದೆ ಸೌಲಭ್ಯ :
ಪ್ರಸ್ತುತ ಫೋನ್ ಪೇ, ಗೂಗಲ್ ಪೇ, ಅಮೆಜಾನ್ ಪೇ ಮತ್ತು ಪೇಟಿಎಂ ಆಪ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇತ್ತೀಚೆಗೆ ಫ್ಲಿಪ್ಕಾರ್ಟ್ ಕೂಡಾ ಮಾರುಕಟ್ಟೆಯಲ್ಲಿ UPI ಸೇವೆಯ ಸೌಲಭ್ಯವನ್ನು ಪ್ರಾರಂಭಿಸಿದೆ. Flipkart Axis Bank ಸಹಯೋಗದೊಂದಿಗೆ UPI ಸೌಲಭ್ಯವನ್ನು ಪ್ರಾರಂಭಿಸಿದೆ.ಕಂಪನಿಯು UPI ಹ್ಯಾಂಡಲ್ (@fkaxis) ಅನ್ನು ಪ್ರಾರಂಭಿಸಿದೆ. ಪ್ರಸ್ತುತ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ