Xstream Air Fiber ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ Airtel

Airtel New Tariff Plans: ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್‌ ತನ್ನ ಬಳಕೆದಾರರಿಗೆ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಎರಡೂ ಯೋಜನೆಗಳಲ್ಲಿ 100Mbps ವೇಗದಲ್ಲಿ ಡೇಟಾ ಸೌಲಭ್ಯ ಒದಗಿಸಲಾಗುತ್ತಿದೆ. ಲೈವ್ ಟಿವಿ ಚಾನೆಲ್‌ಗಳಿಗೆ ಚಂದಾದಾರಿಕೆ ಮತ್ತು OTT ಸಹ ಇವುಗಳಲ್ಲಿ ಶಾಮೀಲಾಗಿವೆ (Technology News In Kannada)  

Last Updated : Mar 10, 2024, 10:00 PM IST
  • ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್‌
  • ಎರಡೂ ಯೋಜನೆಗಳಲ್ಲಿ 100Mbps ವೇಗದಲ್ಲಿ ಡೇಟಾವನ್ನು ಒದಗಿಸಲಾಗುತ್ತಿದೆ.
  • ಇವುಗಳಲ್ಲಿ ಲೈವ್ ಟಿವಿ ಚಾನೆಲ್‌ಗಳೂ ಲಭ್ಯವಿರಲಿವೆ
Xstream Air Fiber ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ Airtel title=

Airtel Xstream Air Fiber New Tariff Plans: ಭಾರತದ ಮುಂಚೂಣಿಯ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ (Bharti Airtel) ತನ್ನ ಬಳಕೆದಾರರ ವ್ಯಾಪ್ತಿಯನ್ನು ವಿಸ್ತರಿಸಲು ಎರಡು ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಅವುಗಳ ಬೆಲೆ 1 ಸಾವಿರಕ್ಕಿಂತ ಕಡಿಮೆಯಾಗಿದೆ. ಇವುಗಳಲ್ಲಿ, ಹೈ-ಸ್ಪೀಡ್ ಡೇಟಾ, ಲೈವ್ ಚಾನೆಲ್‌ಗಳು ಮತ್ತು OTT ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ ಸ್ಥಿರವಾದ ವೈರ್‌ಲೆಸ್ ಪ್ರವೇಶ ಅತ್ಯುತ್ತಮವಾಗಿದೆ, ಇದು 5G ತಂತ್ರಜ್ಞಾನವನ್ನು ಬಳಸುವ ಬಳಕೆದಾರರಿಗೆ ಅತಿ ವೇಗದ ಇಂಟರ್ನೆಟ್ ಅನ್ನು ಒದಗಿಸುತ್ತದೆ. (Technology News In Kannada)

ಏರ್‌ಟೆಲ್‌ನ ಹೊಸ ಯೋಜನೆಗಳು
ಏರ್‌ಟೆಲ್‌ನ ಹೊಸ ಯೋಜನೆಗಳ ಬೆಲೆ ಕುರಿತು ಹೇಳುವುದಾದರೆ ಅವು ಕ್ರಮೇಣ ರೂ. 699 ಮತ್ತು 999 ರೂ.ಗಳಾಗಿದೆ. ಎರಡರಲ್ಲೂ, ಕ್ರಮವಾಗಿ 40Mbps ಮತ್ತು 100Mbps ವೇಗದಲ್ಲಿ 1TB ಡೇಟಾ ಬಳಕೆಗೆ ಸಿಗುತ್ತದೆ. ಡೇಟಾ ಮಿತಿಯು ಅವಧಿಗೆ ಮುಂಚಿತವಾಗಿ ಖಾಲಿಯಾದರೆ, ಡೇಟಾ ವೇಗವೂ ಕಡಿಮೆಯಾಗುತ್ತದೆ.

ಇದೀಗ  ಎರಡೂ ಹೊಸ ಯೋಜನೆಗಳಲ್ಲಿ ಲಭ್ಯವಿರುವ ಪ್ರಯೋಜನಗಳ ಕುರಿತು ಹೇಳುವುದಾದರೆ, 350 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳ ಚಂದಾದಾರಿಕೆ, ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಜೊತೆಗೆ 4K ಆಂಡ್ರಾಯ್ಡ್ ಬಾಕ್ಸ್ ಅನ್ನು ನೀಡಲಾಗುತ್ತಿದೆ.

ನೀವು ಇನ್ಸ್ಟಾಲೇಶನ್  ಶುಲ್ಕವನ್ನು ಪಾವತಿಸಬೇಕಾಗಿಲ್ಲ
ಏರ್‌ಟೆಲ್ ಪ್ರಕಾರ, ಹೊಸ ಎಕ್ಸ್‌ಟ್ರೀಮ್ ಏರ್‌ಫೈಬರ್ ಯೋಜನೆಗಳನ್ನು ಆರು ತಿಂಗಳು ಮತ್ತು ಒಂದು ವರ್ಷಕ್ಕೆ ಖರೀದಿಸಬಹುದು. ಇದರಲ್ಲಿ ಅತ್ಯುತ್ತಮ ಸಂಗತಿ ಎಂದರೆ, ಈಗ ಗ್ರಾಹಕರು ಇದಕ್ಕಾಗಿ ಇನ್ಸ್ಟಾಲೇಶನ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನೋಯ್ಡಾ ಮತ್ತು ಗಾಜಿಯಾಬಾದ್ ಬಳಕೆದಾರರಿಗೆ ಈ ಸೇವೆ ಲಭ್ಯವಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇದನ್ನು ಬುಕ್ ಮಾಡಬಹುದು.

ಇದನ್ನೂ ಓದಿ-Google Maps Tips: ಗೂಗಲ್ ಮ್ಯಾಪ್ಸ್ ನಲ್ಲಿ ನಿಮ್ಮ ಮನೆ ಲೋಕೇಶನ್ ನೋಂದಾಯಿಸಬೇಕೆ? ಪ್ರಕ್ರಿಯೆ ತುಂಬಾ ಸುಲಭವಾಗಿದೆ

ರೂ 799 ಪ್ಲಾನ್‌ನ ವಿವರಗಳು
ಮೇಲೆ ತಿಳಿಸಿದ ಎರಡು ಪ್ಲಾನ್‌ಗಳಿಗಿಂತ ಮೊದಲು ಏರ್‌ಟೆಲ್ ಎಕ್ಸ್‌ಟ್ರೀಮ್ ಏರ್ ಫೈಬರ್ ರೂ 799 ಬೆಲೆಯ ಪ್ಲಾನ್ ಅನ್ನು ಪರಿಚಯಿಸಿತ್ತು. ಈ ಪ್ಯಾಕ್‌ನಲ್ಲಿ, 1TB FUP ಮಿತಿಯೊಂದಿಗೆ 100Mbps ವೇಗದಲ್ಲಿ ಡೇಟಾ ಒದಗಿಸಲಾಗುತ್ತಿದೆ. ಮಿತಿಯನ್ನು ತಲುಪಿದರೆ, ಇಂಟರ್ನೆಟ್  ವೇಗ ಕಡಿಮೆಯಾಗುತ್ತದೆ. ಇದಲ್ಲದೆ, ಲೈವ್ ಚಾನೆಲ್‌ಗಳು ಮತ್ತು OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಯೋಜನೆಯಲ್ಲಿ ನೀಡಲಾಗುತ್ತಿದೆ. ಈ ಯೋಜನೆಗೆ 6 ತಿಂಗಳು ಮತ್ತು ಒಂದು ವರ್ಷದವರೆಗೆ ಚಂದಾದಾರರಾಗಬಹುದು.

ಇದನ್ನೂ ಓದಿ-YouTube ಗೆ ಸೆಡ್ಡು ಹೊಡೆಯಲು ಮುಂದಾದ ಎಲಾನ್ ಮಸ್ಕ್, ಇನ್ಮುಂದೆ ಟಿವಿ ಮೇಲೂ 'X' ವಿಡಿಯೋಗಳನ್ನು ನೋಡಬಹುದು!

ಈ ಯೋಜನೆಗಳನ್ನು ಇತ್ತೀಚೆಗಷ್ಟೇ ಪರಿಚಯಿಸಲಾಗಿದೆ
ಏರ್‌ಟೆಲ್ ಇತ್ತೀಚೆಗೆ 3 ಹೊಸ ರೋಮಿಂಗ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಅವುಗಳ ಬೆಲೆ 195, 295 ಮತ್ತು 595 ರೂ.ಗಲಾಗಿದೆ. ಈ ಮೂರು ಯೋಜನೆಗಳಲ್ಲಿ 1GB ವರೆಗೆ ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೆ, ಹೊಸ ರೀಚಾರ್ಜ್ ಯೋಜನೆಗಳಲ್ಲಿ 100 ನಿಮಿಷಗಳ ಔಟ್ ಗೋಯಿಂಗ್ ಕರೆಗಳು ಮತ್ತು 100 SMS ಲಭ್ಯವಿರಲಿವೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಪ್ಯಾಕ್‌ಗಳನ್ನು ರೀಚಾರ್ಜ್ ಮಾಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News