ನವದೆಹಲಿ : ಯಾಂತ್ರೀಕರಣದಿಂದಾಗಿ ಈಗಾಗಲೇ ನೌಕರಿಗೆ ಕತ್ತರಿ ಬೀಳುತ್ತಿದೆ. ಹೀಗಿರುವಾಗ ಈ ಮಧ್ಯೆ ಮತ್ತೊಂದು ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ  ಹೇರಲಾಗಿದ್ದ ಲಾಕ್‌ಡೌನ್ (Lockdown) ಕಾರಣದಿಂದಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಕಂಪನಿಗಳು ಮುಚ್ಚಲ್ಪಟ್ಟವು. ಜನ ಈ ಅಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ, ವರ್ಲ್ಡ್ ಎಕನಾಮಿಕ್ ಫೋರಂ (World Economic Forum) ವರದಿಯೊಂದನ್ನು ಬಿಡುಗಡೆ ಮಾಡಿದೆ.  ಈ ವರದಿಯ ಪ್ರಕಾರ ಮುಂದಿನ ನಾಲ್ಕು ವರ್ಷಗಳಲ್ಲಿ, ಅಂದರೆ 2025 ರ ವೇಳೆಗೆ, ಪ್ರತಿ 10 ಜನರಲ್ಲಿ 6 ಜನರು ಉದ್ಯೋಗ (Job) ಕಳೆದುಕೊಳ್ಳಬೇಕಾಗಬಹುದು ಎಂದು ಹೇಳಿದೆ. 


COMMERCIAL BREAK
SCROLL TO CONTINUE READING

ಸಂಶೋಧನೆಯಲ್ಲಿ ಬಹಿರಂಗವಾದ ವಿಚಾರ : 
ಕೋವಿಡ್ -19 (COVID-19) ಕಾರಣ,  ಎಲ್ಲಾ ಕಡೆ ಯಂತ್ರಗಳ ಬಳಕೆಯಲ್ಲಿ ಭಾರೀ ಹೆಚ್ಚಳ  ಕಂಡು ಬಂದಿದೆ.  ಈ ಕಾರಣದಿಂದಾಗಿ, ದೊಡ್ಡ ಸಂಖ್ಯೆಯಲ್ಲಿ ಜನ ತಮ್ಮ ಉದ್ಯೋಗ ಕಳೆದುಕೊಳುವ (Job Cut)  ಆತಂಕ ಎದುರಾಗಿದೆ.  19 ದೇಶಗಳಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 32,000 ಉದ್ಯೋಗಿಗಳ ಬಗ್ಗೆ ಸಂಶೋಧನೆ ನಡೆಸಿದ ನಂತರ ಈ ವರದಿ (Report) ಹೊರಬಂದಿದೆ ಎನ್ನಲಾಗಿದೆ. 


ಇದನ್ನೂ ಓದಿ : SBI ಗ್ರಾಹಕರು ಈ ಹಂತಗಳ ಮೂಲಕ ಸುಲಭವಾಗಿ ಡೆಬಿಟ್ ಕಾರ್ಡ್ ಪಿನ್ ರಚಿಸಬಹುದು


ಉದ್ಯೋಗ ಉಳಿಸಿಕೊಡಲು ಸರ್ಕಾರಕ್ಕೆ ಮನವಿ : 
ಸಮೀಕ್ಷೆಯಲ್ಲಿ ಭಾಗಿಯಾದ  40% ಉದ್ಯೋಗಿಗಳು ಕೆಲವೇ ವರ್ಷಗಳಲ್ಲಿ  ಉದ್ಯೋಗವನ್ನು (Job)  ಕಳೆದುಕೊಳ್ಳುತ್ತೇವೆ ಎಂಬ ಆತಂಕವನ್ನು ಎದುರಿಸುತ್ತಿದ್ದಾರೆ.  56% ಜನರು ಭವಿಷ್ಯದಲ್ಲಿಯೂ ಎಲ್ಲಿಯಾದರೂ ನೌಕರಿಯ ಆಕಾಶ ಇದ್ದೇ ಇರುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ.  ಇದೆ ವೇಳೆ, 60% ಕ್ಕಿಂತ ಹೆಚ್ಚು ಜನರು ಉದ್ಯೋಗವನ್ನು ಉಳಿಸಿಕೊಡುವಂತೆ ಸರ್ಕಾರವನ್ನು (Government) ಮನವಿ ಮಾಡಿದ್ದಾರೆ. 


ಕೌಶಲ್ಯ ಅಭಿವೃದ್ಧಿಯತ್ತ ಗಮನ: 
ವರದಿಯ ಪ್ರಕಾರ, 80% ಕಾರ್ಮಿಕರು ತಮ್ಮನ್ನು ಹೊಸ ತಂತ್ರಜ್ಞಾನಕ್ಕೆ ಹೊಂದಿಸಿಕೊಳ್ಳಲು ಅನುಕೂಲವಾಗುವಂತೆ,  ತಮ್ಮದೇ ಆದ ಕೌಶಲ್ಯ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿದ್ದಾರೆ. ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ವಿಶ್ವಾಸ ಸಾವಿರಾರು ಜನರಿಗೆ ಇದೆ.  ಯಂತ್ರಗಳು ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೇಲಿನ ಹೆಚ್ಚಿನ ಅವಲಂಬನೆಯಿಂದಾಗಿ, ಸುಮಾರು 85 ಮಿಲಿಯನ್ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ ಎಂದು  WEF ವರದಿಯಲ್ಲಿ ಕಳೆದ ವರ್ಷವೇ ಹೇಳಿತ್ತು. ಆದರೆ ಈಗ 2025 ರ ವೇಳೆಗೆ 10 ಜನರಲ್ಲಿ 6 ಜನರು ಉದ್ಯೋಗ ಕಳೆದುಕೊಳ್ಳಬೇಕಾಗಬಹುದು ಎಂದು ನೀಡಿರುವ ವರದಿ ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. 


ಇದನ್ನೂ ಓದಿ : Financial Fit: ಆರ್ಥಿಕವಾಗಿ ಬಲಿಷ್ಠರಾಗಬೇಕೆ ಹಾಗಿದ್ರೆ ಈ ನಿಯಮಗಳನ್ನ ಪಾಲಿಸಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.