ಇನ್ಮುಂದೆ ಮನೆ ಬಾಡಿಗೆ ನೀಡುವುದು ಇನ್ನಷ್ಟು ಸುಲಭವಾಗಲಿದೆ, Modi Govt ತರಲಿದೆ ಈ ಕಾನೂನು

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ (Narendra Modi) ಆದರ್ಶ ಬಾಡಿಗೆ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಬುಧವಾರ ಮಾಹಿತಿ ನೀಡಿರುವ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಇದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ಬಾಡಿಗೆ ಮನೆಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ. ಆದರ್ಶ ಬಾಡಿಗೆ ಕಾಯ್ದೆಯ ಕರಡನ್ನು 2019ರ ಜುಲೈನಲ್ಲಿ ಸಚಿವಾಲಯ ಬಿಡುಗಡೆ ಮಾಡಿತ್ತು.

Last Updated : Nov 25, 2020, 09:44 PM IST
  • ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆದರ್ಶ ಬಾಡಿಗೆ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.
  • ಈ ಕುರಿತು ಬುಧವಾರ ಮಾಹಿತಿ ನೀಡಿರುವ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಮಾಹಿತಿ ನೀಡಿದ್ದಾರೆ.
  • ನೂತನ ಕಾಯ್ದೆ ಜಾರಿಯಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.
ಇನ್ಮುಂದೆ ಮನೆ ಬಾಡಿಗೆ ನೀಡುವುದು ಇನ್ನಷ್ಟು ಸುಲಭವಾಗಲಿದೆ, Modi Govt ತರಲಿದೆ ಈ ಕಾನೂನು

ನವದೆಹಲಿ: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಆದರ್ಶ ಬಾಡಿಗೆ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಬುಧವಾರ ಮಾಹಿತಿ ನೀಡಿರುವ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಇದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ಬಾಡಿಗೆ ಮನೆಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ. ಆದರ್ಶ ಬಾಡಿಗೆ ಕಾಯ್ದೆಯ ಕರಡನ್ನು 2019ರ ಜುಲೈನಲ್ಲಿ ಸಚಿವಾಲಯ ಬಿಡುಗಡೆ ಮಾಡಿತ್ತು.

ಇದನ್ನು ಓದಿ- ವಲಸೆ ಕಾರ್ಮಿಕರಿಗಾಗಿ ಕೈಗೆಟಕುವ ದರದಲ್ಲಿ ಬಾಡಿಗೆ ಯೋಜನೆ ಘೋಷಿಸಿದೆ ಮೋದಿ ಸರ್ಕಾರ

ರಿಯಲ್ ಎಸ್ಟೇಟ್ ಕಂಪನಿಗಳ ಸಂಘ ನರೆಡ್ಕೊ ಆಯೋಜಿಸಿರುವ ವೆಬ್‌ನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಮಿಶ್ರಾ, ವಲಸಿಗರಿಗಾಗಿ ಫೇರ್ ರೆಂಟ್ ಹೌಸಿಂಗ್ ಕಾಂಪ್ಲೆಕ್ಸ್ (ARHC) ಯೋಜನೆಯ ಪ್ರಗತಿ ತುಂಬಾ ಉತ್ತಮವಾಗಿದೆ. ಈ ಕಾರ್ಯಕ್ರಮದ ಮೂಲಕ ನಗರಗಳಲ್ಲಿನ ಕೊಳೆಗೇರಿಗಳನ್ನು ನಿಲ್ಲಿಸಬಹುದು. ಸರ್ಕಾರ ಈ ಯೋಜನೆಯನ್ನು ಕೆಲವು ತಿಂಗಳ ಹಿಂದೆ ಪ್ರಾರಂಭಿಸಿತ್ತು.

ಇದನ್ನು ಓದಿ- ಕನಸಿನ ಮನೆ ಖರೀದಿಸಬೇಕೆ? ಹೀಗೆ 2.67 ಲಕ್ಷ ರೂ.ರಿಯಾಯಿತಿ ಪಡೆಯಿರಿ

ಆರ್ಥಿಕತೆಯನ್ನು ಅನ್ಲಾಕ್ ಮಾಡಿದ ನಂತರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಕ್ರಮಗಳಿಂದಾಗಿ, ಮನೆಗಳ ಮಾರಾಟವು ಈಗ ಸುಧಾರಿಸುತ್ತಿದೆ ಎಂದು ಮಿಶ್ರಾ ಹೇಳಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳು ಆಸ್ತಿ ನೋಂದಣಿಯ ಸ್ಟಾಂಪ್ ಸುಂಕವನ್ನು ಕಡಿಮೆ ಮಾಡಿದ್ದು, ಇದು ಮನೆಗಳ ಮಾರಾಟವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ. ವಸತಿ ವಲಯವನ್ನು ಪ್ರೋತ್ಸಾಹಿಸಲು ಸ್ಟ್ಯಾಂಪ್  ಸುಂಕವನ್ನು ಕಡಿಮೆ ಮಾಡುವಂತೆ ಕೇಂದ್ರವು ಎಲ್ಲಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ ಎಂದು ಕಾರ್ಯದರ್ಶಿ ಹೇಳಿದ್ದಾರೆ.

ಇದನ್ನು ಓದಿ- Home Loan ಮುಗಿದ ತಕ್ಷಣವೇ ಈ ಕೆಲಸ ಮಾಡಲು ಮರೆಯದಿರಿ

'ಆದರ್ಶ ಬಾಡಿಗೆ ಕಾಯ್ದೆ ಈಗಾಗಲೇ ಸಿದ್ಧವಾಗಿದೆ. ಇದನ್ನು ವಿವಿಧ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ. ಇದು ವ್ಯಾಪಕವಾದ ಪರಿಣಾಮಗಳನ್ನು ಬೀರಲಿದೆ' ಎಂದು ಮಿಶ್ರಾ ಹೇಳಿದ್ದಾರೆ. 'ಉದ್ದೇಶಿತ ಕಾನೂನಿನ ಕುರಿತು ಟಿಪ್ಪಣಿಗಳನ್ನು ಸ್ವೀಕರಿಸುವ   ಗಡುವು ಅಕ್ಟೋಬರ್ 31 ಕ್ಕೆ ಮುಕ್ತಾಯಗೊಂಡಿದೆ' ಎಂದು ಅವರು ಹೇಳಿದ್ದಾರೆ. ಈಗ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಆದರ್ಶ ಬಾಡಿಗೆ ಕಾಯ್ದೆ ಶೀಘ್ರದಲ್ಲೇ ಬರಲಿದೆ ಎಂದು ಕಾರ್ಯದರ್ಶಿ ಹೇಳಿದ್ದಾರೆ. 2011 ರ ಜನಗಣತಿಯ ಪ್ರಕಾರ ಜನರು ತಮ್ಮ ಮನೆಯನ್ನು ಬಾಡಿಗೆಗೆ ನೀಡಲು ಹಿಂಜರಿಯುತ್ತಿರುವುದರಿಂದ 1.1 ಕೋಟಿ ಮನೆಗಳು ಖಾಲಿ ಉಳಿದಿವೆ ಎಂದು ಅವರು ಹೇಳಿದ್ದಾರೆ. ಆದರ್ಶ ಬಾಡಿಗೆ ಕಾಯ್ದೆಯಿಂದ ಈಗ ಎಲ್ಲ ವಿಸಂಗತಿಗಳನ್ನು ತೆಗೆದುಹಾಕಲಾಗುವುದು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.

More Stories

Trending News