PM Kisan 10ನೇ ಕಂತು ವರ್ಗಾವಣೆಗೆ ಇನ್ನೊಂದೇ ದಿನ ಬಾಕಿ, ಈಗಲೇ ನಿಮ್ಮ ಈ ದಾಖಲೆಗಳನ್ನು ಅಪ್ಡೇಟ್ ಮಾಡಿ
ರೈತರಿಗೆ ಕಳುಹಿಸಿದ ಸಂದೇಶದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2022 ರಂದು ಮಧ್ಯಾಹ್ನ 12 ಗಂಟೆಗೆ ಪಿಎಂ ಕಿಸಾನ್ ಯೋಜನೆಯಡಿ 10 ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.
ನವದೆಹಲಿ : PM Kisan Samman Nidhi 2021 Latest News: ಪ್ರಧಾನಮಂತ್ರಿ ಕಿಸಾನ್ ಯೋಜನೆಯ 10ನೇ ಕಂತಿಗಾಗಿ ರೈತರ ನಿರೀಕ್ಷೆ ಕೊನೆಯಾಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan Yojana) ಕಂತು ನೀಡುವ ದಿನಾಂಕವನ್ನು ಪ್ರಕಟಿಸಿದೆ. ಇದರ ಸಂದೇಶವನ್ನು ಫಲಾನುಭವಿಗಳಿಗೂ ರವಾನಿಸಲಾಗಿದೆ. ಜನವರಿ 1 ರಂದು ಪ್ರಧಾನಿ ಮೋದಿ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.
ಯಾವಾಗ ಸಿಗಲಿದೆ 10ನೇ ಕಂತು:
ರೈತರಿಗೆ ಕಳುಹಿಸಿದ ಸಂದೇಶದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2022 ರಂದು ಮಧ್ಯಾಹ್ನ 12 ಗಂಟೆಗೆ ಪಿಎಂ ಕಿಸಾನ್ (PM Kisan) ಯೋಜನೆಯಡಿ 10 ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ನಾಳೆ ಪ್ರಧಾನಿ ಮೋದಿ (PM Narendra Modi) ಅವರು ರೈತ ಉತ್ಪಾದಕ ಸಂಸ್ಥೆಗಳಿಗೆ ಈಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ರೈತರು pmindiawebcast.nic.in ಅಥವಾ ದೂರದರ್ಶನ ಮೂಲಕ ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಬಹುದು.
ಇದನ್ನೂ ಓದಿ : ಧೂಳೆಬ್ಬಿಸಲು ಬರುತ್ತಿದೆ Royal Enfield, ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿದೆ 4 ಹೊಸ ಬೈಕ್ ಗಳು
ಅಪ್ಲಿಕೇಶನ್ ನಲ್ಲಿ ದೋಷಗಳು :
1. ಈ ಅಪ್ಲಿಕೇಶನ್‌ನಲ್ಲಿ, ''ENGLISH' ನಲ್ಲಿ ರೈತರ ಹೆಸರನ್ನು ಹೊಂದಿರುವುದು ಅವಶ್ಯಕ. ಆದ್ದರಿಂದ ಅರ್ಜಿಯಲ್ಲಿ ಬೇರೆ ಭಾಷೆಯಲ್ಲಿ ಹೆಸರು ಇರುವ ರೈತರು ಇದನ್ನು ಸರಿಪಡಿಸಿಕೊಳ್ಳಿ .
2. ಅರ್ಜಿಯಲ್ಲಿನ ಅರ್ಜಿದಾರರ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿರುವ (Bank account) ಹೆಸರು ಬೇರೆ ಬೇರೆಯಾಗಿರಬಾರದು. ಹಾಗಿದ್ದಲ್ಲಿ, ರೈತರು ಬ್ಯಾಂಕ್ ಶಾಖೆಗೆ ಹೋಗಿ, ಆಧಾರ್ ಮತ್ತು ಅರ್ಜಿಯಲ್ಲಿ ನೀಡಿದ ಹೆಸರಿಗೆ ಅನುಗುಣವಾಗಿ ಬ್ಯಾಂಕ್‌ನಲ್ಲಿ (Bank) ತನ್ನ ಹೆಸರನ್ನು ಸರಿಮಾಡಿಕೊಳ್ಳಬೇಕು.
3. ಬ್ಯಾಂಕಿನ IFSC ಕೋಡ್ ಬರೆಯುವಲ್ಲಿ ಯಾವುದೇ ತಪ್ಪು ಇರಬಾರದು.
4. ಬ್ಯಾಂಕ್ ಖಾತೆ ಸಂಖ್ಯೆಯನ್ನು ಸರಿಯಾಗಿ ಬರೆಯಬೇಕು.
5. ರೈತರು ತಮ್ಮ ವಿಳಾಸವನ್ನು ಸರಿಯಾಗಿ ಪರಿಶೀಲಿಸಬೇಕು. ಗ್ರಾಮದ ಹೆಸರಿನಲ್ಲಿ ಯಾವುದೇ ತಪ್ಪು ಇರಬಾರದು.
6. ಅಂತಹ ತಪ್ಪುಗಳು ಸಂಭವಿಸಿದಲ್ಲಿ, ಅವುಗಳನ್ನು ಸರಿಪಡಿಸುವುದು ಅವಶ್ಯಕ, ಇಲ್ಲದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಈ ದೋಷಗಳನ್ನು ಸರಿಪಡಿಸಲು ಆಧಾರ್ ಪರಿಶೀಲನೆ ಅಗತ್ಯ. ಆಧಾರ್ ಪರಿಶೀಲನೆಗಾಗಿ, ರೈತರು ತಮ್ಮ ಹತ್ತಿರದ CSC / ವಸುಧಾ ಕೇಂದ್ರ / ಸಹಜ್ ಕೇಂದ್ರವನ್ನು ಸಂಪರ್ಕಿಸಬೇಕು.
ಇದನ್ನೂ ಓದಿ : ಉದ್ಯೋಗಿಗಳಿಗೆ ಬಿಗ್ ರಿಲೀಫ್ ನೀಡಿದ EPFO : ಏನಿದು ಇಲ್ಲಿದೆ ನೋಡಿ!
ಆನ್‌ಲೈನ್‌ನಲ್ಲಿ ತಪ್ಪುಗಳನ್ನು ಸರಿಪಡಿಸಬಹುದು :
1. ಇದಕ್ಕಾಗಿ ಮೊದಲು PM ಕಿಸಾನ್ ವೆಬ್‌ಸೈಟ್ pmkisan.gov.in ಗೆ ಹೋಗಬೇಕು.
2. ಮೇಲ್ಭಾಗದಲ್ಲಿರುವ ಲಿಂಕ್ ಫಾರ್ಮರ್ಸ್ ಕಾರ್ನರ್ ಮೇಲೆ ಕ್ಲಿಕ್ ಮಾಡಿ.
3. ಈಗ ಎಡಿಟ್ ಆಧಾರ್ ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
4. ಇದರ ನಂತರ ನಿಮ್ಮ ಮುಂದೆ ಒಂದು ಪುಟ ತೆರೆಯುತ್ತದೆ. ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಸರಿಪಡಿಸಬಹುದು.
5. ಇದರ ಹೊರತಾಗಿ, ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಮತ್ತು ಖಾತೆ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕು. ಅಲ್ಲಿಗೆ ಭೇಟಿ ನೀಡಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.