ಧೂಳೆಬ್ಬಿಸಲು ಬರುತ್ತಿದೆ Royal Enfield, ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿದೆ 4 ಹೊಸ ಬೈಕ್ ಗಳು

ಕಂಪನಿಯು ಮುಂದಿನ ವರ್ಷ ಭಾರತದಲ್ಲಿ 4 ಹೊಸ ಮೋಟಾರ್‌ಸೈಕಲ್‌ಗಳನ್ನು ಹೊರ ತರಲಿದೆ. ಇದರಲ್ಲಿ ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಕ್ಲಾಸಿಕ್ ಬಾಬರ್ 350, ಹಂಟರ್ 350 ಮತ್ತು ರಾಯಲ್ ಎನ್‌ಫೀಲ್ಡ್ ಸ್ಕ್ರೀಮ್ 411 ಸೇರಿವೆ. 

Written by - Ranjitha R K | Last Updated : Dec 31, 2021, 02:21 PM IST
  • ಹೊಸ ಸ್ಕ್ರಮ್ 411 ಅಡ್ವೆಂಚರ್ ಮೊದಲ ಬೈಕ್ ಆಗಿರಲಿದೆ
  • ಕಂಪನಿಯು 2022 ರಲ್ಲಿ ಹೊಸ ಹಂಟರ್ ಅನ್ನು ಬಿಡುಗಡೆ ಮಾಡಲಿದೆ
  • ಲಾಂಚ್ ಆಗಲಿದೆ ಹೊಸ ತಲೆಮಾರಿನ ಬುಲೆಟ್ 350 ಬಾಬರ್
ಧೂಳೆಬ್ಬಿಸಲು ಬರುತ್ತಿದೆ Royal Enfield, ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿದೆ 4 ಹೊಸ ಬೈಕ್ ಗಳು  title=
ಧೂಳೆಬ್ಬಿಸಲು ಬರುತ್ತಿದೆ Royal Enfield (file photo)

ನವದೆಹಲಿ :  2022 ರಲ್ಲಿ ರಾಯಲ್ ಎನ್‌ಫೀಲ್ಡ್‌ನ (Royal Enfield) ಪೈಪ್‌ಲೈನ್‌ನಲ್ಲಿ ಅನೇಕ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಹೃದಯದಲ್ಲಿ ಪ್ರಾಬಲ್ಯ ಸಾಧಿಸಲುಕಂಪನಿ ತಯಾರಿ ನಡೆಸುತ್ತಿದೆ. ಕಂಪನಿಯು ಮುಂದಿನ ವರ್ಷ ಭಾರತದಲ್ಲಿ 4 ಹೊಸ ಮೋಟಾರ್‌ಸೈಕಲ್‌ಗಳನ್ನು ಹೊರ ತರಲಿದೆ. ಇದರಲ್ಲಿ ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಕ್ಲಾಸಿಕ್ ಬಾಬರ್ 350, ಹಂಟರ್ 350 ಮತ್ತು ರಾಯಲ್ ಎನ್‌ಫೀಲ್ಡ್ ಸ್ಕ್ರೀಮ್ 411 ಸೇರಿವೆ. ಕಂಪನಿಯು ಕಳೆದ ಕೆಲವು ದಿನಗಳಲ್ಲಿ ಅನೇಕ ಹೊಸ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ ಮತ್ತು ರಾಯಲ್ ಎನ್‌ಫೀಲ್ಡ್ (Royal Enfield bike) ತನ್ನ ಮುಂಬರುವ ಬೈಕ್‌ಗಳಿಗೆ ಈ ಹೆಸರುಗಳನ್ನು ಬಳಸಲಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 :
ಚೆನ್ನೈ ಮೂಲದ ಬೈಕ್ ತಯಾರಕರು 2022 ರಲ್ಲಿ ಹಂಟರ್ 350 (Hunter 350) ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.  ಇದನ್ನು ಇತ್ತೀಚೆಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶೀಘ್ರದಲ್ಲೇ ಇದನ್ನೂ ಭಾರತದಲ್ಲಿ ಲಾಂಚ್ ಮಾಡಲಾಗುವುದು.  ಈ ಮೋಟಾರ್‌ಸೈಕಲ್ ಅನ್ನು ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ರ (royal enfield meteor 350) ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು.  ಆದರೆ ಅದರ ವಿನ್ಯಾಸವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಅಲ್ಲದೆ, ಇದು ಟ್ರಿಪ್ಪರ್ ನ್ಯಾವಿಗೇಷನ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : Gold Price Today : ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ : ಇಳಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ

ರಾಯಲ್ ಎನ್‌ಫೀಲ್ಡ್ ಬುಲೆಟ್ 350 :
ರಾಯಲ್ ಎನ್‌ಫೀಲ್ಡ್ ನ್ಯೂ ಜನರೇಶನ್ (royal enfield new generation) ಬುಲೆಟ್ 350 ಅನ್ನು ಮುಂದಿನ ವರ್ಷವೇ ದೇಶದಲ್ಲಿ ಬಿಡುಗಡೆ ಮಾಡಲಿದೆ.   ಪ್ರಸ್ತುತ ಮಾದರಿಗೆ ಹೋಲಿಸಿದರೆ ನ್ಯೂ ಜನರೇಶನ್  ಮೋಟಾರ್‌ಸೈಕಲ್‌ನ ವಿನ್ಯಾಸವು ಗಮನಾರ್ಹವಾಗಿ ಬದಲಾಗಲಿದೆ. ಬೈಕ್ ನಲ್ಲಿ (Bike) ತಾಂತ್ರಿಕ ಸುಧಾರಣೆಯಾಗುವ ಸಾಧ್ಯತೆಯೂ ಇದೆ. ಹೊಸ ಬುಲೆಟ್ 350 ಹೊಸ 350 ಸಿಸಿ ಎಂಜಿನ್ ಪಡೆಯಲಿದ್ದು ಅದು 20.2 ಬಿಎಚ್‌ಪಿ ಪವರ್ ಮತ್ತು 27 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ನಲ್ಲಿ  ಟ್ರಿಪ್ಪರ್ ನ್ಯಾವಿಗೇಷನ್ ಕೂಡ ಇರಲಿದೆ. 

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ (Scram 411) :
ಕಂಪನಿಯು 2022 ರಲ್ಲಿ ಹಿಮಾಲಯನ್ (royal enfield himalayan) ಹೊಸ ಮಾದರಿಯನ್ನು ಬಿಡುಗಡೆ ಮಾಡಲಿದೆ.  ಇದು ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡರ್‌ನಿಂದ ವಿಭಿನ್ನ ರಸ್ತೆಯಲ್ಲಿ ಓಡಲು ತಯಾರಿ ನಡೆಸುತ್ತಿದೆ. ಹೊಸ ಬೈಕ್‌ನ ಹೆಸರು ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಆಗಿರಬಹುದು. ಇದು ಹಿಮಾಲಯನ್ ಮೂಲದ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಆಗಿದೆ. ಕಂಪನಿಯು ಈ ಮೋಟಾರ್‌ಸೈಕಲ್‌ನೊಂದಿಗೆ ಸಿಂಗಲ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟ್ರಿಪ್ಪರ್ ನ್ಯಾವಿಗೇಶನ್ ಅನ್ನು ಒದಗಿಸಲಿದೆ.

ಇದನ್ನೂ ಓದಿ : ಅಗ್ಗದ ದರದಲ್ಲಿ ಕಾರು ಖರೀದಿಗೆ ಇದುವೇ ಕೊನೆಯ ಅವಕಾಶ, ತಪ್ಪಿದರೆ ಬಜೆಟ್ ಮೀರಿ ಹೋಗಲಿದೆ ಬೆಲೆ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬಾಬರ್
ರಾಯಲ್ ಎನ್‌ಫೀಲ್ಡ್‌ನ ಹೊಸ ಕ್ಲಾಸಿಕ್ 350 (royal enfield new classic 350) ಆಧಾರಿತ ಮುಂಬರುವ ಬಾಬರ್ ಮೋಟಾರ್‌ಸೈಕಲ್ ಕೂಡ 2022 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಬೈಕ್‌ಗೆ ಬಾಬರ್ ಶೈಲಿಯನ್ನು ನೀಡಲು, ಅದೇ ರೀತಿಯ ಹ್ಯಾಂಡಲ್‌ಬಾರ್ ಮತ್ತು ಬಾಬರ್ ಸೀಟ್ ಅನ್ನು ನೀಡಲಾಗುವುದು. ಹಂಟರ್‌ನಂತೆ, ಮೆಟಿಯರ್ 350 ರ ಎಂಜಿನ್ ಅನ್ನು ಹೊಸ ಮೋಟಾರ್‌ಸೈಕಲ್‌ನೊಂದಿಗೆ ಕಾಣಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News