NPS Update: ರೂ.5000 ಹೂಡಿಕೆ ಮಾಡಿ, 1 ಕೋಟಿ 11 ಲಕ್ಷ 98 ಸಾವಿರ 471 ರೂ.ಪಡೆಯಿರಿ, ಪ್ರತಿ ತಿಂಗಳಿಗೆ ₹44,793 ಪಿಂಚಣಿ ಕೂಡ ಲಭ್ಯ!
NPS Account Update: NPS ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ವಿಶೇಷವೆಂದರೆ ನೀವು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು, ಆದರೆ ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ಅದನ್ನು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರವು ವೃತ್ತಿಪರ ನಿಧಿ ವ್ಯವಸ್ಥಾಪಕರಿಗೆ ಅದರ ಜವಾಬ್ದಾರಿಯನ್ನು ನೀಡುತ್ತದೆ.
NPS ಖಾತೆ: ಹಣಕಾಸು ಯೋಜನೆ ಮತ್ತು ನಿವೃತ್ತಿಯ ಚಿಂತೆ ನಿಮಗೂ ಇದ್ದರೆ ಅದನ್ನು ತಲೆಯಿಂದ ತೆಗೆದು ಹಾಕಿ. ಏಕೆಂದರೆ ಇಂದು ನಾವು ನಿಮಗೆ ಒಳ್ಳೆಯ ಸೂತ್ರವೊಂದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಇದು ನಿವೃತ್ತಿಯ ಮೇಲೆ ಮಾತ್ರವಲ್ಲದೆ ನಿಮಗಾಗಿ ದೊಡ್ಡ ಕಾರ್ಪಸ್ ಫಂಡ್ ಕೂಡ ರಚಿಸುತ್ತದೆ. ಇದಲ್ಲದೆ, ಪಿಂಚಣಿಯ ಒತ್ತಡವೂ ನಿಮ್ಮಿಂದ ದೂರಾಗುತ್ತದೆ. ನಿವೃತ್ತಿಯ ಬಳಿಕವೂ ನಿಮಗೆ ನಿಯಮಿತ ಆದಾಯವಿರುತ್ತದೆ ಮತ್ತು ಹಣದ ಕೊರತೆ ಎದುರಾಗುವುದಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಡಬಲ್ ಲಾಭಕ್ಕಾಗಿ ನೀವು ಟ್ರಿಕ್ ಅನ್ನು ಸಹ ಬಳಸಬಹುದು. ಅದನ್ನು ನಿಮ್ಮ ಪತ್ನಿಯ ಹೆಸರಿನಲ್ಲಿ ತೆರೆಯಿರಿ, ಇದರಿಂದ ಆಗುವ ಲಾಭ ತಿಳಿಯಲು ಈ ಸಂಪೂರ್ಣ ಸುದ್ದಿಯನ್ನು ನೀವು ಓದಲೇಬೇಕು.
ಎನ್‌ಪಿಎಸ್‌ನಲ್ಲಿ ಎಷ್ಟು ಪಿಂಚಣಿ ಬೇಕು ಎಂದು ನೀವೇ ನಿರ್ಧರಿಸಿ
ಪತ್ನಿಯ ಹೆಸರಿನಲ್ಲಿ ಎನ್‌ಪಿಎಸ್ ಖಾತೆಯನ್ನು ತೆರೆದರೆ, ಅವರು 60 ನೇ ವಯಸ್ಸಿನಲ್ಲಿ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಪ್ರತಿ ತಿಂಗಳು ಪಿಂಚಣಿ ಕೂಡ ಅವರಿಗೆ ಸಿಗುತ್ತದೆ. ಇದು ನಿಯಮಿತ ಆದಾಯವಾಗಿ ಉತ್ತಮ ಮೊತ್ತವನ್ನು ತರುತ್ತದೆ. NPS ಖಾತೆಯ ದೊಡ್ಡ ಪ್ರಯೋಜನವೆಂದರೆ ಪ್ರತಿ ತಿಂಗಳು ನಿಮಗೆ ಎಷ್ಟು ಪಿಂಚಣಿ ಬೇಕು ಎಂದು ನೀವೇ ನಿರ್ಧರಿಸಬಹುದು.
NPS ಖಾತೆಯು 65 ವರ್ಷ ವಯಸ್ಸಿನವರೆಗೆ ಹೆಂಡತಿಯ ಹೆಸರಿನಲ್ಲಿ ಹೂಡಿಕೆ ಮಾಡಬಹುದು
ಪತ್ನಿಯ ಹೆಸರಿನಲ್ಲಿ ಖಾತೆಯನ್ನು ತೆರೆಯುವ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಅವರು 65 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ಹೊಣಿರುತ್ತಾರೆ. ಸಾಮಾನ್ಯವಾಗಿ ಇದು 60 ನೇ ವಯಸ್ಸಿನಲ್ಲಿ ಪರಿಪಕ್ವವಾಗುತ್ತದೆ. ನೀವು ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಇದರಲ್ಲಿ ಹಣವನ್ನು ಠೇವಣಿ ಮಾಡಬಹುದು. NPS ನಲ್ಲಿ ಹೂಡಿಕೆಯು 1,000 ರೂ.ನಿಂದ ಪ್ರಾರಂಭವಾಗುತ್ತದೆ.
₹ 1 ಕೋಟಿ 11 ಲಕ್ಷಕ್ಕಿಂತ ಹೆಚ್ಚಿನ ನಿಧಿಯನ್ನು ಹೇಗೆ ಸಿದ್ಧಪಡಿಸಬೇಕು?
ನಿಮ್ಮ ಪತ್ನಿಯ ವಯಸ್ಸು 30 ಮತ್ತು ನೀವು ಪ್ರತಿ ತಿಂಗಳು 5000 ರೂಪಾಯಿಗಳ ಹೂಡಿಕೆಯೊಂದಿಗೆ NPS ಖಾತೆಯನ್ನು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ. ಇದರ ಮೇಲೆ ಸರಾಸರಿ ಶೇ.10ರಷ್ಟು ಆದಾಯ ಬಂದರೆ, 60ನೇ ವಯಸ್ಸಿನಲ್ಲಿ ಒಟ್ಟು ಮೊತ್ತ 1 ಕೋಟಿ 11 ಲಕ್ಷದ 98 ಸಾವಿರದ 471 ರೂ.ತಲುಪುತ್ತದೆ. ಈ ಪೈಕಿ ಪತ್ನಿಗೆ ಒಂದೇ ಬಾರಿಗೆ ಸುಮಾರು 45 ಲಕ್ಷ ರೂ. ಸಿಗುತ್ತದೆ. ಇದಲ್ಲದೆ ಉಳಿದ ಹಣವನ್ನು ಅವರು ಪಿಂಚಣಿಗಾಗಿ ಉಳಿಸಿದರೆ ಅವರು ಪ್ರತಿ ತಿಂಗಳು 45,000 ರೂ.ಗಳ ಸಾಮಾನ್ಯ ಆದಾಯವಾಗಿ ಪಿಂಚಣಿ ಪಡೆಯುತ್ತಾರೆ. ಅವರಿಗೆ ಜೀವನ ಪೂರ್ತಿ ಈ ಮಾಸಿಕ ಆದಾಯ ಇದ್ದೇ ಇರುತ್ತದೆ.
ಇದನ್ನೂ ಓದಿ-Good News: ಶ್ರೀಸಾಮಾನ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ!
NPS ನ ಈ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
>> ವಯಸ್ಸು - 30 ವರ್ಷಗಳು
>> ಹೂಡಿಕೆ - 30 ವರ್ಷಗಳು
>> ಮಾಸಿಕ ಕೊಡುಗೆ - 5,000 ರೂ
>> ಅಂದಾಜು ಆದಾಯ- 10%
>> ಒಟ್ಟು ನಿಧಿ - ರೂ 1,11,98,471 (ಮೆಚ್ಯೂರಿಟಿಯಲ್ಲಿ)
>> ವರ್ಷಾಶನ ಯೋಜನೆಯನ್ನು ಖರೀದಿಸುವ ಮೊತ್ತ ರೂ.44,79,388
>> ರೂ 67,19,083 (ವರ್ಷಾಶನ ದರ 8%)
>> ಮಾಸಿಕ ಪಿಂಚಣಿ - 44,793 ರೂ.
ನಿಧಿ ವ್ಯವಸ್ಥಾಪಕರು NPS ಅನ್ನು ನಿರ್ವಹಿಸುತ್ತಾರೆ
NPS ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ವಿಶೇಷವೆಂದರೆ ನೀವು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು, ಆದರೆ ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ಅದನ್ನು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರವು ವೃತ್ತಿಪರ ನಿಧಿ ವ್ಯವಸ್ಥಾಪಕರಿಗೆ ಈ ಜವಾಬ್ದಾರಿಯನ್ನು ನೀಡುತ್ತದೆ. ಇದಕ್ಕಾಗಿ NPS ಖಾತೆಯಲ್ಲಿ ಸಂಪೂರ್ಣ ಭದ್ರತೆಯನ್ನು ಖಾತರಿಪಡಿಸಲಾಗಿದೆ. ಇದು ಮಾರುಕಟ್ಟೆ ಲಿಂಕ್ಡ್ ಸ್ಕೀಮ್ ಆಗಿರುವುದರಿಂದ ರಿಟರ್ನ್ಸ್ ಗ್ಯಾರಂಟಿ ಇಲ್ಲ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಎನ್‌ಪಿಎಸ್ ಅಂದಾಜು ಶೇ.10-12ರಷ್ಟು ಆದಾಯವನ್ನು ನೀಡಿದೆ. ಹೀಗಾಗಿ ನಿವೃತ್ತಿಯ ಚಿಂತೆ ದೂರಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.