Good News: ಶ್ರೀಸಾಮಾನ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ!

Latest Wheat Flour Price: ಗೋಧಿ ಬೆಲೆ 10-12 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಹಿಟ್ಟಿನ ಬೆಲೆಯೂ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 22-24 ರೂ.ಗಳ ದರದಲ್ಲಿ ಹಿಟ್ಟು ಮಾರಾಟವಾಗುತ್ತಿದೆ. ಆದರೆ, ಇದಕ್ಕಿಂತ ಕಡಿಮೆ ಬೆಲೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.  

Written by - Nitin Tabib | Last Updated : Mar 16, 2023, 05:46 PM IST
  • ಮತ್ತೊಂದೆಡೆ ಹಿಟ್ಟು ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
  • ಗೋಧಿ ರಫ್ತಿನ ಮೇಲಿನ ನಿಷೇಧವನ್ನು ಮುಂದುವರಿಸಲು ಶಿಫಾರಸು ಇದೆ.
  • ಭಾರತೀಯ ಆಹಾರ ನಿಗಮದ ಗೋಧಿಯ ಆರನೇ ಹರಾಜಿನಲ್ಲಿ 23 ಪ್ರದೇಶಗಳಲ್ಲಿ 611 ಡಿಪೋಗಳಿಂದ 10.69 ಎಲ್‌ಎಂಟಿ ಗೋಧಿ ಬಂದಿದೆ ಎಂದು ತಿಳಿಸಿದೆ.
Good News: ಶ್ರೀಸಾಮಾನ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ! title=
ಗೋಧಿ ಹಿಟ್ಟಿನ ಬೆಳೆಯಲ್ಲಿ ಭಾರಿ ಇಳಿಕೆ!

Atta Price Today: ಹಣದುಬ್ಬರದ ವಿಷ್ಯದಲ್ಲಿ ಸಾಮಾನ್ಯ ಜನರಿಗೆ ಸಮಾಧಾನಕರ ಸುದ್ದಿಯೊಂದು ಪ್ರಕಟವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಹಣದುಬ್ಬರ ಅಂಕಿಅಂಶಗಳ ಕುಸಿತದ ಹಿನ್ನೆಲೆ  ಹಿಟ್ಟಿನ ಬೆಲೆಗಳು ಕೊನೆಗೂ ಇಳಿಕೆ ಕಂಡಿವೆ. ಅದರಲ್ಲಿಯೂ ವಿಶೇಷವಾಗಿ ಕಳೆದ ಹಲವು ತಿಂಗಳುಗಳಿಂದ ಗಗನ ಮುಖಿಯಾಗಿದ್ದ ಗೋಧಿ ಬೆಲೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಹಿಟ್ಟಿನ ಬೆಲೆಯೂ ಕುಸಿದಿದೆ. ಗೋಧಿ ಬೆಲೆ 10-12 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಹಿಟ್ಟಿನ ಬೆಲೆಯೂ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 22-24 ರೂ.ಗಳ ದರದಲ್ಲಿ ಹಿಟ್ಟು ಮಾರಾಟವಾಗುತ್ತಿದೆ. ಆದರೆ, ಇದಕ್ಕಿಂತ ಕಡಿಮೆ ಬೆಲೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಹೊಸ ಗೋಧಿಯು ಮಾರುಕಟ್ಟೆಗೆ ಆಗಮಿಸುತ್ತಿದೆ.  ಈ ಬಾರಿ ಉತ್ತಮ ಇಳುವರಿ ಬಂದಿದೆ. ಪ್ರಸ್ತುತ, ಗೋಧಿಯ ಮೇಲೆ ಹವಾಮಾನದ ಪರಿಣಾಮ ಕಂಡುಬಂದಿಲ್ಲ. ಬೆಳೆಯ ಬೆಲೆಗಳು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಗಿಂತ ಹೆಚ್ಚಿರಬಹುದು ಎಂದು ಊಹಿಸಲಾಗಿದೆ. ಪ್ಯಾಕ್ ಮಾಡಲಾದ ವಸ್ತುಗಳು ಹಿಟ್ಟಿನ ಮಾರುಕಟ್ಟೆಯಲ್ಲಿ 3-4% ರಷ್ಟಿದೆ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬ್ರಾಂಡ್ ಹಿಟ್ಟು ಉತ್ಪಾದಿಸುವ ಕಂಪನಿಗಳೂ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ-ಹಿರಿಯ ನಾಗರಿಕರಿಗೊಂದು ಬಂಬಾಟ್ ಸುದ್ದಿ, ತಿಂಗಳಿಗೆ 70,500 ನೀಡುವುದಾಗಿ ಘೋಷಿಸಿದೆ ಮೋದಿ ಸರ್ಕಾರ!

ಹಿಟ್ಟು ರಫ್ತು ನಿಷೇಧವನ್ನು ತೆಗೆದುಹಾಕಲು ಆಗ್ರಹ
ಮತ್ತೊಂದೆಡೆ ಹಿಟ್ಟು ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಗೋಧಿ ರಫ್ತಿನ ಮೇಲಿನ ನಿಷೇಧವನ್ನು ಮುಂದುವರಿಸಲು ಶಿಫಾರಸು ಇದೆ. ಭಾರತೀಯ ಆಹಾರ ನಿಗಮದ ಗೋಧಿಯ ಆರನೇ ಹರಾಜಿನಲ್ಲಿ 23 ಪ್ರದೇಶಗಳಲ್ಲಿ 611 ಡಿಪೋಗಳಿಂದ 10.69 ಎಲ್‌ಎಂಟಿ ಗೋಧಿ ಬಂದಿದೆ ಎಂದು ತಿಳಿಸಿದೆ. ಇದರಲ್ಲಿ 970 ಬಿಡ್ಡರ್‌ಗಳಲ್ಲಿ 4.91 ಎಲ್‌ಎಂಟಿ ಗೋಧಿ ಮಾರಾಟವಾಗಿದೆ.

ಇದನ್ನೂ ಓದಿ-Provident Fund ನಲ್ಲಿ ನೀವೂ ಹಣ ಹೂಡಿಕೆ ಮಾಡುತ್ತೀರಾ? ಇಲ್ಲಿದೆ ಮಹತ್ವದ ಅಪ್ಡೇಟ್!

ಖರೀದಿ ಸಾಮಾನ್ಯ ಎಂದು ನಿರೀಕ್ಷಿಸಲಾಗಿದೆ
ಹಿಟ್ಟಿನ ಬೆಲೆಯಲ್ಲಿ ಶೀಘ್ರದಲ್ಲೇ ಪರಿಹಾರ ಸಿಗಬಹುದು ಎಂದು ಊಹಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ, ಗೋಧಿ OMSS ಅಂದರೆ ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಮ್‌ನ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆಗಳು ಮುಂಬರುವ ದಿನಗಳಲ್ಲಿ ಕಡಿಮೆಯಾಗಬಹುದು ಎಂದು ಭಾರತೀಯ ಆಹಾರ ನಿಗಮದ ಸಿಎಂಡಿ ಅಶೋಕ್ ಕೆಕೆ ಮೀನಾ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಗೋಧಿ ಬೆಳೆ ಚೆನ್ನಾಗಿ ಬಂದಿದೆ ಎಂದು ಮೀನಾ ಹೇಳಿದ್ದಾರೆ. ಇದಲ್ಲದೆ, ಖರೀದಿಯು ಸಹ ಸಾಮಾನ್ಯವಾಗಿರುತ್ತದೆ. ಈ ಬಾರಿ 300-400 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹವಾಗುವ ನಿರೀಕ್ಷೆ ಇದೆ. ಏಪ್ರಿಲ್ 1 ರ ವೇಳೆಗೆ 113 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಉಳಿಯುವ ಸಾಧ್ಯತೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಬಾರಿ 93-95 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದ್ದು, 75 ಲಕ್ಷ ಮೆಟ್ರಿಕ್ ಟನ್ ಬಫರ್ ನೀಡಲಾಗುವುದು ಎಂದು ಅಂದಾಜಿಸಲಾಗಿದೆ. ಎಲ್ಲಾ ಗೋಧಿಯನ್ನು OMSS ಅಡಿಯಲ್ಲಿ ಎತ್ತಿದಾಗ ಮಾತ್ರ ಇದು ಸಾಧ್ಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News