Yeshasvini Yojane: ದಿನೇ ದಿನೇ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗಾಗಿಯೇ ಆರೋಗ್ಯ ವಿಮೆ ಮಾಡಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಅಷ್ಟೇಯಲ್ಲ, ಆರೋಗ್ಯ ವಿಮೆಗಳ ಮೊತ್ತವೂ ಸಿಕ್ಕಾಪಟ್ಟೆ ದುಬಾರಿಯಾಗುತ್ತಿದೆ. ಇದಕ್ಕಿರುವ ಒಂದೇ ಒಂದು ಪರಿಹಾರವೆಂದರೆ ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವುದು. ಇದು ಗ್ರಾಮೀಣ ಭಾಗದ ಅರೋಗ್ಯ ಭದ್ರತೆಯನ್ನು ಧೃಡಪಡಿಸಲೆಂದೇ ಇರುವ ಯೋಜನೆಯಾಗಿದೆ.


COMMERCIAL BREAK
SCROLL TO CONTINUE READING

ಯಶಸ್ವಿನಿ ಯೋಜನೆಗೆ ಪ್ರತಿವರ್ಷವೂ ರಾಜ್ಯ ಸರ್ಕಾರ ಹೆಸರು ನೋಂದಾಯಿಸಿಕೊಳ್ಳಲು ಇಂತಿಷ್ಟು ಸಮಯಾವಕಾಶ ನೀಡುತ್ತದೆ. ಈಗ 2024-25ನೇ ಸಾಲಿನ ಯಶಸ್ವಿನಿ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದು ಇದೇ ಡಿಸೆಂಬರ್ 31 ಹೆಸರು ನೋಂದಾಯಿಸಿಕೊಳ್ಳಲು ಕಡೆಯ ದಿನವಾಗಿದೆ. ಹಾಗಾಗಿ ನೀವು ಇವತ್ತೇ ಅರ್ಜಿ ಸಲ್ಲಿಸಿ. 


ಇದನ್ನೂ ಓದಿ- ಐಟಿಆರ್ ಫೈಲ್ ಯಾರಿಂದ ಮಾಡಿಸುತ್ತಿರಿ ಎನ್ನುವುದೂ ಮುಖ್ಯ, ಯಾರಿಂದಲೋ ಮಾಡಿಸಿದರೆ ಸಮಸ್ಯೆ ಗ್ಯಾರಂಟಿ!


ಇದು ರಾಜ್ಯದ ಸಹಕಾರ ಇಲಾಖೆಯ ಯೋಜನೆಯಾಗಿದ್ದು ನೀವು ಅರ್ಜಿ ಸಲ್ಲಿಸಬೇಕಾದರೆ ಯಾವುದಾದರೂ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರಬೇಕು. ಸಹಕಾರ ಸಂಘದಲ್ಲೇ ಅರ್ಜಿ ಸಲ್ಲಿಸಬೇಕು. ನಿಮ್ಮ ಕುಟುಂಬದ ಯಾರಾದರೂ ಸರ್ಕಾರಿ ನೌಕರರರಾಗಿದ್ದರೆ ನೀವು ಅರ್ಹರಾಗಿರುವುದಿಲ್ಲ. ಜೊತೆಗೆ ನೀವು ಈಗಾಗಲೇ ಬೇರೆ ಅರೋಗ್ಯ ವಿಮೆ ಸೌಲಭ್ಯ ಪಡೆಯುತ್ತಿದ್ದರೆ ಯಶಸ್ವಿನಿ ಯೋಜನೆಯಡಿ ನಿಮಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. 


ಗ್ರಾಮೀಣ ಪ್ರದೇಶದಲ್ಲಿ ನಾಲ್ವರು ಸದಸ್ಯರಿರುವ ಕುಟುಂಬ 500 ರೂಪಾಯಿಗಳನ್ನು ಭರಿಸಿ ಹೆಸರುಗಳನ್ನೂ ನೋಂದಾಯಿಸಿಕೊಳ್ಳಬಹುದು. ನಾಲ್ಕಕ್ಕಿಂತ ಹೆಚ್ಚು ಜನರಿದ್ದರೆ 500 ರೂಪಾಯಿಗಳ ಮೇಲೆ ತಲಾ 100 ಪಾವತಿಸಬೇಕಾಗುತ್ತದೆ. ನಗರ ಪ್ರದೇಶದಲ್ಲಿ ನಾಲ್ಕು ಜನ ಇರುವ ಕುಟುಂಬ 1,000 ರೂಪಾಯಿ ಭರಿಸಬೇಕಾಗುತ್ತದೆ. ನಾಲ್ಕಕ್ಕಿಂತ ಹೆಚ್ಚು ಜನ ಇರುವ ಕುಟುಂಬ 1,000 ರೂಪಾಯಿ ಜೊತೆಗೆ ತಲಾ 200 ಪಾವತಿಸಬೇಕಾಗುತ್ತದೆ. 


ಇದನ್ನೂ ಓದಿ- RBIನಿಂದ 500 ರೂಪಾಯಿ ನೋಟುಗಳ ಬಗ್ಗೆ ಹೊಸ ಗೈಡ್ ಲೈನ್: ಇಲ್ಲಿದೆ ಮಹತ್ವದ ಮಾಹಿತಿ


ಯಶಸ್ವಿನಿ ಯೋಜನೆಯಡಿ ಒಟ್ಟು 2,128 ರೀತಿಯ ಚಿಕಿತ್ಸೆ ಪಡೆಯಬಹುದಾಗಿದೆ. ಇದರಲ್ಲಿ 1,650 ಸಾಮಾನ್ಯ ಚಿಕಿತ್ಸೆಗಳು. 478 ಐಸಿಯುನಲ್ಲಿ ದಾಖಲಿಸಿದಾಗ ನೀಡುವ ಚಿಕಿತ್ಸೆಗಳು. ಯಶಸ್ವಿನಿ ಯೋಜನೆಯಲ್ಲಿ 5 ಲಕ್ಷ ರೂ. ವರೆಗಿನ ಚಿಕಿತ್ಸೆ ಉಚಿತವಾಗಿರುತ್ತದೆ. ಜಗತ್ತಿನಲ್ಲೇ ಅತ್ಯಂತ ಕಡಿಮೆ ವೆಚ್ಚಕ್ಕೆ ಕರ್ನಾಟಕ ರಾಜ್ಯದ ಸಹಕಾರ ಇಲಾಖೆ ಯಶಸ್ವಿನಿ ಯೋಜನೆಯಡಿ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.