Kashi Yatra Subsidy: ಕಾಶಿ ಯಾತ್ರೆಯ ವೆಬ್‌ಸೈಟ್‍ಗೆ ಚಾಲನೆ, 5 ಸಾವಿರ ರೂ. ಸಬ್ಸಿಡಿಗಾಗಿ ಈ ರೀತಿ ಅರ್ಜಿ ಸಲ್ಲಿಸಿ
ಈ ಯೋಜನೆಯ ಲಾಭ ಪಡೆದುಕೊಳ್ಳಲು ಕಡ್ಡಾಯವಾಗಿ ಪ್ರಯಾಣದ ಪುರಾವೆ ನೀಡಬೇಕಾಗುತ್ತದೆ. ಇದಕ್ಕಾಗಿ ಯಾತ್ರಿಕರು ಸಾರಿಗೆ ಟಿಕೆಟ್‌ಗಳು, ಫೋಟೋಗಳು ಮತ್ತು ಇತರ ಬಿಲ್‌ಗಳನ್ನು ನೀಡಬಹುದು.
ಬೆಂಗಳೂರು: ರಾಜ್ಯ ಸರ್ಕಾರವು ಜೂನ್ ಅಂತ್ಯದಲ್ಲಿ 'ಕಾಶಿ ಯಾತ್ರೆ' ಯೋಜನೆಗೆ ಅನುಮೋದನೆ ನೀಡಿತ್ತು. ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಿಕರು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವ ವೆಬ್‌ಸೈಟ್‍ಗೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ನೀವು ಸಹ 5 ಸಾವಿರ ರೂ. ಸಹಾಯಧನ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
2 ವೆಬ್‍ಸೈಟ್‍ಗಳಲ್ಲಿ ಮಾಹಿತಿ
ರಾಜ್ಯ ಸರ್ಕಾರವು ಕಳೆದ ತಿಂಗಳು ಪ್ರಾರಂಭಿಸಿದ ಕಾಶಿ ಯಾತ್ರಾ ಯೋಜನೆಯ ಮಾಹಿತಿ ಪಡೆದುಕೊಳ್ಳಲು ಈಗ 2 ವೆಬ್‌ಸೈಟ್‌ಗಳನ್ನು ಪ್ರಾರಂಭಿಸಲಾಗಿದೆ. itms.kar.nic.in ಮತ್ತು sevasindhuservices.karnataka.gov.in ಈ ವೆಬ್‍ಸೈಟ್‍ಗಳಲ್ಲಿ ಯಾತ್ರಿಕರು ಸಬ್ಸಿಡಿಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಇತರ ಸಂಬಂಧಿತ ವಿವರಗಳನ್ನು ಸಹ ಪರಿಶೀಲಿಸಬಹುದು.
ಈ ಯೋಜನೆಯಡಿ ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಸುಮಾರು 30 ಸಾವಿರ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ನಗದು ಸಹಾಯ ಧನ ನೀಡಲಾಗುತ್ತದೆ. ಕರ್ನಾಟಕದ ಧಾರ್ಮಿಕ ದತ್ತಿ, ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಈ ಸಬ್ಸಿಡಿ ಯೋಜನೆಯನ್ನು ಘೋಷಿಸಿದ್ದರು.
ಇದನ್ನೂ ಓದಿ: Free Booster Dose : ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ 'ಉಚಿತ ಬೂಸ್ಟರ್ ಡೋಸ್' : ಹೀಗೆ ನೊಂದಾಯಿಸಿಕೊಳ್ಳಿ!
ಈ ಯೋಜನೆಗೆ ಒಟ್ಟು 7 ಕೋಟಿ ರೂ.ವರೆಗೆ ಮೀಸಲಿಟ್ಟಿರುವುದಾಗಿ ಸಿಎಂ ಬೊಮ್ಮಾಯಿ ಸರ್ಕಾರ ಹೇಳಿದ್ದು, ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಭಾಷಣದಲ್ಲಿ ಇದನ್ನು ಘೋಷಿಸಲಾಗಿದೆ. ಪ್ರತಿಯೊಬ್ಬ ಯಾತ್ರಿಕರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಈ ಸಬ್ಸಿಡಿ ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಸಹಾಯಧನ ಪಡೆಯಲು ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಈ ಸಬ್ಸಿಡಿ ಪಡೆದುಕೊಳ್ಳುವ ಯಾತ್ರಿಕರು ಕರ್ನಾಟಕದ ಸ್ಥಳೀಯರಾಗಿರಬೇಕು ಮತ್ತು ವಯಸ್ಕರಾಗಿರಬೇಕು, ಅಂದರೆ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಸಬ್ಸಿಡಿ ಪಡೆಯುವವರು ವಾಸಸ್ಥಳದ ಪುರಾವೆ ಮತ್ತು ವಯಸ್ಸಿನ ಪುರಾವೆಗಳಂತಹ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ವೋಟರ್ ಐಡಿ ಮತ್ತು ಆಧಾರ್ ಅಥವಾ ಪಡಿತರ ಚೀಟಿಗಳನ್ನು ದಾಖಲೆಗಳನ್ನಾಗಿ ನೀಡಬಹುದು. ಸಹಾಯಧನದ ವರ್ಗಾವಣೆಗೆ ಬ್ಯಾಂಕ್ ಖಾತೆ ವಿವರಗಳು ಮತ್ತು ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ಸಹ ಅಗತ್ಯವಾಗಿರುತ್ತದೆ.
ಇದನ್ನೂ ಓದಿ: ದೇವಸ್ಥಾನ ತೊರೆಯದಿದ್ದರೆ ಕನ್ಹಯ್ಯಾ ರೀತಿಯಲ್ಲಿಯೇ ಹತ್ಯೆ , ಅರ್ಚಕರಿಗೆ ಬಂತು ಬೆದರಿಕೆ ಪತ್ರ ..!
ಈ ಯೋಜನೆಯ ಲಾಭ ಪಡೆದುಕೊಳ್ಳಲು ಪ್ರಯಾಣದ ಪುರಾವೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಇದಕ್ಕಾಗಿ ಯಾತ್ರಿಕರು ಸಾರಿಗೆ ಟಿಕೆಟ್‌ಗಳು, ಫೋಟೋಗಳು ಮತ್ತು ಇತರ ಬಿಲ್‌ಗಳನ್ನು ನೀಡಬಹುದು. ಏಪ್ರಿಲ್ 1 ಮತ್ತು ಜೂನ್ 30ರ ನಡುವೆ ಕಾಶಿಗೆ ತೀರ್ಥಯಾತ್ರೆ ಕೈಗೊಂಡವರು ತಮ್ಮ ದರ್ಶನದ ಟಿಕೆಟ್, Waiting List ಅಥವಾ ಅವರ ಪೂಜಾ ರಶೀದಿಯಂತಹ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಪುರಾವೆಗಳನ್ನು ಒದಗಿಸಿದರೆ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಬಹುದು.
ಏತನ್ಮಧ್ಯೆ ಸಚಿವೆ ಶಶಿಕಲಾ ಜೊಲ್ಲೆಯವರು ಮಂಗಳವಾರ ‘ಭಾರತ್ ಗೌರವ’ ಎಂಬ ವಿಶೇಷ ರೈಲನ್ನು ಘೋಷಿಸಿದ್ದಾರೆ. ಇದು ಉತ್ತರಪ್ರದೇಶದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಂತಹ ಸ್ಥಳಗಳನ್ನು ಒಳಗೊಂಡಿದೆ. ಫಲಾನುಭವಿಗಳಿಗೆ 5 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ. ದೇಶದ ಪ್ರಮುಖ ದೇವಾಲಯಗಳನ್ನು ಹೋಲುವ ಬೋಗಿಗಳನ್ನು ಹೊಂದಿರುವ ರೈಲು ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಿಂದ ಹೊರಡಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.