Amit Shah : ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಬಿಗ್ ನ್ಯೂಸ್ ನೀಡಿದ ಕೇಂದ್ರ ಸಚಿವ ಅಮಿತ್ ಶಾ!

ಸಹಕಾರಿ ಬ್ಯಾಂಕ್‌ಗಳನ್ನು ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಯೊಂದಿಗೆ ಸಂಪರ್ಕಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ. 

Written by - Channabasava A Kashinakunti | Last Updated : Jul 15, 2022, 09:47 AM IST
  • ಪ್ರಸ್ತುತ 300 ಯೋಜನೆಗಳು ಚಾಲನೆಯಲ್ಲಿವೆ
  • ಡಿಜಿಟಲ್ ವಹಿವಾಟು ಒಂದು ಟ್ರಿಲಿಯನ್ ಡಾಲರ್ ದಾಟಿದೆ
  • ಲೇವಾದೇವಿಗಾರರ ಕಪಿಮುಷ್ಠಿಯಿಂದ ರೈತರ ರಕ್ಷಣೆ
Amit Shah : ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಬಿಗ್ ನ್ಯೂಸ್ ನೀಡಿದ ಕೇಂದ್ರ ಸಚಿವ ಅಮಿತ್ ಶಾ! title=

Cooperative Banks Update : ದೇಶದ ಜನರಿಗಾಗಿ ಸರ್ಕಾರವು ನಿರಂತರವಾಗಿ ಕಲ್ಯಾಣ ಕಾರ್ಯಕ್ರಮ, ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಇದರ ಅಡಿಯಲ್ಲಿ ಈಗ ಸಹಕಾರಿ ಬ್ಯಾಂಕ್‌ಗಳ ಗ್ರಾಹಕರು ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು. 

ಈ ಬಗ್ಗೆಇತ್ತೀಚೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಸಹಕಾರಿ ಬ್ಯಾಂಕ್‌ಗಳನ್ನು ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಯೊಂದಿಗೆ ಸಂಪರ್ಕಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : Draupadi Murmu : ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ಎಷ್ಟು ಮತಗಳು? ಇಲ್ಲಿದೆ ಲೆಕ್ಕಾಚಾರ

ಪ್ರಸ್ತುತ 300 ಯೋಜನೆಗಳು ಚಾಲನೆಯಲ್ಲಿವೆ

ಪ್ರಸ್ತುತ, ಸರ್ಕಾರದ 52 ಸಚಿವಾಲಯಗಳು ನಡೆಸುತ್ತಿರುವ 300 ಯೋಜನೆಗಳ ಲಾಭವನ್ನು ಡಿಬಿಟಿ ಮೂಲಕ ಫಲಾನುಭವಿಗಳಿಗೆ ವರ್ಗಾಯಿಸಲಾಗುತ್ತಿದೆ. ಈಗ ಸಹಕಾರಿ ಬ್ಯಾಂಕ್‌ಗಳ ಗ್ರಾಹಕರು ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೊದಲಿಗಿಂತ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿದರು. ಇದರಿಂದಾಗಿ ದೇಶದ ನಾಗರಿಕರು ಬ್ಯಾಂಕಿಂಗ್ ಸೇವೆಯ ಲಾಭ ಪಡೆಯುತ್ತಿದ್ದಾರೆ.

ಡಿಜಿಟಲ್ ವಹಿವಾಟು ಒಂದು ಟ್ರಿಲಿಯನ್ ಡಾಲರ್ ದಾಟಿದೆ

ಜನ್ ಧನ್ ಯೋಜನೆಯಿಂದಾಗಿ ಹೊಸದಾಗಿ 45 ಕೋಟಿ ಜನರ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದರು. ಅದೇ ರೀತಿ, 32 ಕೋಟಿ ಜನರು ರುಪೇ ಡೆಬಿಟ್ ಕಾರ್ಡ್‌ನ ಪ್ರಯೋಜನವನ್ನು ಸಹ ಪಡೆದುಕೊಂಡಿದ್ದಾರೆ. ಸಹಕಾರದಿಂದ ಏಳಿಗೆ ಹೊಂದುವ ಪ್ರಧಾನಿ ಮೋದಿಯವರ ಸಂಕಲ್ಪದಿಂದಾಗಿ ಇದೆಲ್ಲವೂ ಸಂಭವಿಸಿದೆ. ಸಹಕಾರಿ ಕ್ಷೇತ್ರವು ದೇಶದ ಏಳಿಗೆ ಮತ್ತು ಆರ್ಥಿಕ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಹಕಾರ ಸಚಿವರು ಹೇಳಿದರು. ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಕೋಟಿಗಟ್ಟಲೆ ಹೊಸ ಖಾತೆಗಳ ಡಿಜಿಟಲ್ ವಹಿವಾಟು ಒಂದು ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ. 2017-18ನೇ ಸಾಲಿನ ಡಿಜಿಟಲ್ ವಹಿವಾಟಿಗೆ ಹೋಲಿಸಿದರೆ 50 ಪಟ್ಟು ಹೆಚ್ಚಳವಾಗಿದೆ.

ಲೇವಾದೇವಿಗಾರರ ಕಪಿಮುಷ್ಠಿಯಿಂದ ರೈತರ ರಕ್ಷಣೆ

ಡಿಬಿಟಿಯೊಂದಿಗೆ ಸಹಕಾರಿ ಬ್ಯಾಂಕ್‌ಗಳು ಸೇರ್ಪಡೆಗೊಳ್ಳುವುದರಿಂದ ನಾಗರಿಕರೊಂದಿಗೆ ಹೆಚ್ಚಿನ ಸಂಪರ್ಕ ಹೆಚ್ಚುತ್ತದೆ ಮತ್ತು ಸಹಕಾರಿ ಕ್ಷೇತ್ರವು ಬಲಗೊಳ್ಳುತ್ತದೆ. ಅಮಿತ್ ಶಾ, ಗುಜರಾತ್ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಂದರೆ ಖೇತಿ ಬ್ಯಾಂಕ್ 71 ನೇ ವರ್ಷಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಅಭಿನಂದಿಸುತ್ತಾ, ಬ್ಯಾಂಕ್ ಬಗ್ಗೆ ಮಾತನಾಡಿದರು. ಲೇವಾದೇವಿಗಾರರ ಕಪಿಮುಷ್ಠಿಯಿಂದ ರೈತರನ್ನು ರಕ್ಷಿಸುವಲ್ಲಿ ಈ ಬ್ಯಾಂಕ್ ಮಹತ್ತರ ಪಾತ್ರ ವಹಿಸಿದೆ.

ಇದನ್ನೂ ಓದಿ : Congress : ಉಪರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಜಂಟಿ ಅಭ್ಯರ್ಥಿ ಯಾರು? ಇಲ್ಲಿದೆ  ಮಾಹಿತಿ

ಸಕಾಲದಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಲಾಭ

ಆರ್‌ಬಿಐ ಮತ್ತು ನಬಾರ್ಡ್ ಬ್ಯಾಂಕಿಂಗ್‌ಗಾಗಿ ಮಾಡಿರುವ ಎಲ್ಲಾ ನಿಯತಾಂಕಗಳಲ್ಲಿ ಕೃಷಿ ಬ್ಯಾಂಕ್ ತನ್ನನ್ನು ತಾನು ಸಾಬೀತುಪಡಿಸಿದೆ ಎಂದು ಹೇಳಿದರು. ಈ ಹಿಂದೆ ಬ್ಯಾಂಕ್‌ನಿಂದ ಶೇ.12ರಿಂದ 15ರ ಬಡ್ಡಿಗೆ ಸಾಲ ಲಭ್ಯವಿದ್ದು, ಈಗ ಶೇ.10ಕ್ಕೆ ಇಳಿದಿದೆ. ಅಷ್ಟೇ ಅಲ್ಲ, ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಫಲಾನುಭವಿಗಳಿಗೆ ಶೇ.2ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News