Kawasaki Vulcan S 2022  India Launch - ಕ್ರೂಸರ್ ಬೈಕ್  (Cruiser Bike) ಪ್ರಿಯರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಸಿದ್ಧ ಆಟೋಮೊಬೈಲ್ ಕಂಪನಿ ಕವಾಸಕಿ ತನ್ನ ಪವರ್ಫುಲ್ ಮತ್ತು ಕೂಸ್ ಬೈಕ್ ಆಗಿರುವ 2022 Vulcan S ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೆಟಾಲಿಕ್ ಮ್ಯಾಟ್ ಗ್ರಾಫೀನ್ ಸ್ಟೀಲ್ ಗ್ರೇ ಬಣ್ಣದಲ್ಲಿ ಬರುವ ಈ ಬೈಕಿನ ಬೆಲೆ 6.10 ಲಕ್ಷ ರೂ. ಬೈಕಿನಲ್ಲಿ ನೀಡಲಾಗಿರುವ ಇಂಧನ ಟ್ಯಾಂಕ್ ಮೇಲೆ ಬೆಳ್ಳಿ ಮತ್ತು ಬೂದು ಬಣ್ಣದ ಸಂಯೋಜನೆಗಳು ಬೈಕ್ ಗೆ ಅತ್ಯಂತ  ರಿಚ್ ಲುಕ್ ನೀಡುತ್ತವೆ. 


COMMERCIAL BREAK
SCROLL TO CONTINUE READING

7500rpm ಮೇಲೆ  59.94bhp ಪವರ್ :
2022 Vulcan S (Kawasaki Bike) ಮಧ್ಯಮ ತೂಕದ ಕ್ರೂಸರ್ ಬೈಕ್ ಆಗಿದ್ದು, ಬಿಎಸ್ 6 ಎಮಿಷನ್ ನಾರ್ಮ್ಸ್ ಜೊತೆಗೆ ಬರುತ್ತದೆ. 649 ಸಿಸಿ ಪ್ಯಾರಲಲ್-ಟ್ವಿನ್ ಲಿಕ್ವಿಡ್-ಕೂಲ್ ಎಂಜಿನ್ ಅನ್ನು ಈ ಬೈಕಿನಲ್ಲಿ ನೀಡಲಾಗಿದೆ. ಈ ಎಂಜಿನ್ 7500rpm ನಲ್ಲಿ 59.94bhp ಶಕ್ತಿಯನ್ನು ಉತ್ಪಾದಿಸುತ್ತದೆ. ಬೈಕು 6600rpm ನಲ್ಲಿ 62.4Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಸುಗಮ ಸವಾರಿ ಅನುಭವಕ್ಕಾಗಿ ಇದರಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ.


ಇದನ್ನೂ ಓದಿ :  ಈಗ EMI ನಲ್ಲಿ ಸಿಗುತ್ತಿದೆ ಸಗಣಿ ಭರಣಿ, ಈ ವೆಬ್ ಸೈಟ್ ಮೂಲಕ ಖರೀದಿಸಬಹುದು


ಆರಾಮದಾಯಕ ಪ್ರಯಾಣಕ್ಕಾಗಿ ಅದ್ಭುತ ಟೆಲಿಸ್ಕೋಪಿಕ್ ಫಾರ್ಕ್ಸ್ :
ಆರಾಮದಾಯಕ ಮತ್ತು ಗುಣಮಟ್ಟದ ರೇಡ್ ಗಾಗಿ ಈ ಬೈಕ್ ನಲ್ಲಿ 41ಎಂಎಂ ತೆಲಿಸ್ಕೊಪಿಕ್ ಫಾರ್ಕ್ಸ್ ನೀಡಲಾಗಿದೆ. ಇದರ ಫ್ರಂಟ್ ವ್ಹೀಲ್ ಟ್ರಾವೆಲ್ 130mm ಆಗಿದೆ. ಬೈಕ್ ನ ರಿಯರ್ ಭಾಗದಲ್ಲಿ ರಿಯರ್ ವೀಲ್ ಟ್ರಾವೆಲ್ ಜೊತೆಗೆ ಆಫ್ಸೆಟ್ ಲೋ ಡೌನ್ ಮೊನೊ ಶಾಕ್ ನೀಡಲಾಗಿದೆ. ಈ ಬೈಕ್ ಸೇಫ್ಟಿ ಕುರಿತು ಹೇಳುವುದಾದರೆ. ಇದರಲ್ಲಿ ABS ಜೊತೆಗೆ 300mm ಫ್ರಂಟ್ ಹಾಗೂ 250mm ನ ರಿಯರ್ ಡಿಸ್ಕ್ ಬ್ರೇಕ್ ನೀಡಲಾಗಿದೆ.


14 ಲೀಟರ್ ಫ್ಯೂಲ್ ಟ್ಯಾಂಕ್ :
ಬೈಕ್ ನ ಫ್ರಂಟ್ ವೀಲ್ 18 ಇಂಚು ಹಾಗೂ ಬ್ಯಾಕ್ ವೀಲ್ 17 ಇಂಚಿನದ್ದಾಗಿದೆ. ಫ್ಯೂಲ್ ಟ್ಯಾಂಕ್ ಕುರಿತು ಹೇಳುವುದಾದರೆ. 14 ಲೀಟರ್ ಎಣ್ಣೆಗೆ ಇದು ಫುಲ್ ಆಗುತ್ತದೆ. ಬೈಕ್ ಹ್ಯಾಲೋಜಿನ್ ಹೆಡ್ ಲೈಟ್ ಹೊಂದಿದೆ ಹಾಗೂ ಇದು ಸೆಮಿ ಡಿಜಿಟಲ್ ಮೀಟರ್ ಕನ್ಸೋಲ್ ಹೊಂದಿದೆ. ಈ ಕನ್ಸೋಲ್ ನಲ್ಲಿ ಕಂಪನಿಯ ರಿಯರ್ ಪೋಜಿಶನ್ ಇಂಡಿಕೇಟರ್ ಕೂಡ ನೀಡುತ್ತಿದೆ. 


ಇದನ್ನೂ ಓದಿ :  LPG Subsidy: ನಿಮಗೆ ಎಲ್‌ಪಿಜಿ ಮೇಲೆ ಸಬ್ಸಿಡಿ ಸಿಗುತ್ತಿದೆಯೇ ? ಹೀಗೆ ಚೆಕ್ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ