ಅದೃಷ್ಟ ಅಂದರೆ ಇದೇ ! 12 ಕೋಟಿ ಬಂಪರ್ ಗೆದ್ದವರು ಯಾರು ಗೊತ್ತಿಲ್ಲ, ಟಿಕೆಟ್ ಮಾರಿದವರಿಗೆ ಸಿಕ್ಕಿತು ಕೋಟಿ ಕೋಟಿ ಹಣ !
ಕಾಸರಗೋಡು ಹೊಸಂಕಡಿಯ ಮೇರಿಕುಟ್ಟಿ ಜೋಜೋ ಮಾಲಕತ್ವದ ಭಾರತ್ ಲಾಟರಿ ಏಜೆನ್ಸಿ ಮೂಲಕ ಈ ಲಾಟರಿಯನ್ನು ಮಾರಾಟ ಮಾಡಲಾಗಿದೆ. ಈ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್ ಗೆ ಲಕ್ಕಿ ಡ್ರಾ ಬಂದಿದೆ.
12 ಕೋಟಿ ಬಂಪರ್ ಲಾಟರಿ : ಕೇರಳ ಸರ್ಕಾರದ ಲಾಟರಿ ವಿಭಾಗ ನಡೆಸುವ ಪೂಜಾ ಬಂಪರ್ ಲಾಟರಿ ಫಲಿತಾಂಶ ಹೊರ ಬಿದ್ದಿದೆ. ದೀಪಾವಳಿ ಅಂಗವಾಗಿ ನಡೆಸಲಾಗಿದ್ದ ಈ ಬಂಪರ್ ಲಾಟರಿಯ ವಿಜೇತರು ಬರೋಬ್ಬರಿ 12 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ. ಆದರೆ ಆ ವಿಜೇತರು ಯಾರು ಎನ್ನುವುದು ಇನ್ನೂ ಪತ್ತೆಯಾಗಿಲ್ಲ.
12 ಕೋಟಿ ಲಕ್ಕಿ ವಿನ್ನರ್ ಯಾರು ? :
ಕಾಸರಗೋಡು ಹೊಸಂಕಡಿಯ ಮೇರಿಕುಟ್ಟಿ ಜೋಜೋ ಮಾಲಕತ್ವದ ಭಾರತ್ ಲಾಟರಿ ಏಜೆನ್ಸಿ ಮೂಲಕ ಈ ಲಾಟರಿಯನ್ನು ಮಾರಾಟ ಮಾಡಲಾಗಿದೆ. ಈ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್ ಗೆ ಲಕ್ಕಿ ಡ್ರಾ ಬಂದಿದೆ. ಆದರೆ 12 ಕೋಟಿ ಲಕ್ಕಿ ವಿನ್ನರ್ ಯಾರು ಅನ್ನೋದು ಇನ್ನೂ ಗೊತ್ತಾಗಿಲ್ಲ.
ಇದನ್ನೂ ಓದಿ : ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ಈ ಸಣ್ಣ ಬದಲಾವಣೆಯಿಂದ ಗ್ರೇಡ್ ವೇತನದಲ್ಲಿ ₹49,420 ಜಬರ್ದಸ್ತ್ ಹೆಚ್ಚಳ!
ಜೆಸಿ 253199 ಸಂಖ್ಯೆಯ ಲಾಟರಿಗೆ ಬಂಪರ್ :
ಬಹುಮಾನದ ಟಿಕೆಟ್ ಕಾಸರಗೋಡಿಗೇ ಮಾರಾಟವಾಗಿದೆಯೇ ಎಂಬುದು ಏಜೆನ್ಸಿ ಮಾಲೀಕರಿಗೂ ಖಚಿತವಾಗಿ ತಿಳಿದಿಲ್ಲ. ಕಾಸರಗೋಡು ಹೊರತುಪಡಿಸಿ ಕಣ್ಣೂರು ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಈ ಸಂಸ್ಥೆಯಿಂದ ಟಿಕೆಟ್ ಮಾರಾಟವಾಗುತ್ತಿದೆ. ಅಲ್ಲದೆ ಕರ್ನಾಟಕದ ಅನೇಕರು ಕೂಡಾ ತಮ್ಮ ಟಿಕೆಟ್ ಖರೀದಿಸಿದ್ದಾರೆ ಎನ್ನುವುದು ಏಜೆಂಟ್ ಮಾತು. ಹೀಗಾಗಿ ಟಿಕೆಟ್ ಎಲ್ಲಿ ಮಾರಾಟವಾಗಿದೆ ಎಂಬುದು ಖಚಿತವಾಗಿಲ್ಲ. ಆದರೆ ಮೇರಿಕುಟ್ಟಿ ಜೋಜೋ ಮಾರಾಟ ಮಾಡಿದ ಜೆಸಿ 253199 ಸಂಖ್ಯೆಯ ಲಾಟರಿಗೆ ಬಂಪರ್ ಬಹುಮಾನ ಲಭಿಸಿದೆ.
ಗೆದ್ದವರು ಯಾರು ಗೊತ್ತಿಲ್ಲ :
ಈ ಬಾರಿ 25 ಕೋಟಿಯ ಓಣಂ ಬಂಪರ್ ಭಾಗ್ಯವನ್ನು ಹೊರ ರಾಜ್ಯದ ವ್ಯಕ್ತಿ ಗೆದ್ದಿದ್ದರು. ಪಾಲಕ್ಕಾಡ್‌ನಲ್ಲಿ ಮಾರಾಟವಾದ ಟಿಕೆಟ್ ಅನ್ನು ಕೊಯಮತ್ತೂರಿನ ನಿವಾಸಿ ಖರೀದಿಸಿದ್ದರು. ಬಹುಮಾನದ ಮೊತ್ತ ದೊಡ್ಡದಾಗಿರುವುದರಿಂದ ಹೊರ ರಾಜ್ಯಗಳಿಂದ ಸಾಕಷ್ಟು ಮಂದಿ ಬಂದು ರಾಜ್ಯ ಲಾಟರಿ ಟಿಕೆಟ್ ಖರೀದಿಸುತತ್ತಾರೆ. ರಾಜ್ಯದ ಗಡಿಭಾಗದ ಹೊಸಂಕಡಿಯಲ್ಲಿ ಕಾರ್ಯಾಚರಿಸುತ್ತಿರುವ ಏಜೆನ್ಸಿಯಿಂದ ಪ್ರಥಮ ಬಹುಮಾನದ ಪೂಜಾ ಬಂಪರ್ ಮಾರಾಟವಾಗಿದೆ. ಓಣಂ ಬಂಪರ್ ನಂತೆ ದೀಪಾವಳಿ ಬಂಪರ್ ಲಾಟರಿ ಕೂಡಾ ಹಿರ ರಾಜ್ಯದವರಿಗೆ ಲಭಿಸಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ : ಕೋಕಾ-ಕೋಲಾ ಇಂಡಿಯಾದಿಂದ ರೆಡಿ-ಟು ಡ್ರಿಂಕ್ ಟೀ ಪಾನೀಯಗಳ ಯೋಜನೆ!
ಟಿಕೆಟ್ ಮಾರಾಟ ಮಾಡಿದವರಿಗೂ ಅದೃಷ್ಟ :
ಮೇರಿಕುಟ್ಟಿ ಅವರ ಏಜೆನ್ಸಿಯಿಂದ ಮೊದಲ ಬಹುಮಾನವಲ್ಲದೆ ಎರಡನೇ ಬಹುಮಾನದ 1 ಕೋಟಿ ರೂಪಾಯಿ ಟಿಕೆಟ್ ಕೂಡಾ ಮಾರಾಟವಾಗಿದೆ. ಜೊಜೊ ಜೋಸೆಫ್ ಮಾರಾಟ ಮಾಡಿರುವ ಟಿಕೆಟ್ ಗೆ ಈ ಬಹುಮಾನ ಬಂದಿದೆ. ಜೋಜೋ ಮೊದಲ ಬಹುಮಾನ ಪಡೆದ ಲಾಟರಿ ಏಜೆಂಟ್ ಮೇರಿಕುಟ್ಟಿ ಅವರ ಪತಿ. ಕೇರಳದಲ್ಲಿ ಲಾಟರಿ ಮಾರಾಟ ಮಾಡುವವರಿಗೂ ಶೇ. 10 ರಷ್ಟು ಮೊತ್ತ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಮಾರಾಟ ಮಾಡಿದ ದಂಪತಿ ಪೈಕಿ ಪತ್ನಿಗೆ 1.20 ಕೋಟಿ ರೂ. ಹಾಗೂ ಪತಿಗೆ 10 ಲಕ್ಷ ರೂ. ಹಣ ಸಿಗಲಿದೆ.
ಯಾರಿಗೆ ಬಹುಮಾನ :
ದ್ವಿತೀಯ ಬಹುಮಾನವಾಗಿ 4 ಟಿಕೆಟ್ಗಳಿಗೆ ತಲಾ 1 ಕೋಟಿ ರೂಪಾಯಿ ಲಭಿಸಿದೆ. ಅದರಲ್ಲಿ ಜೆಡಿ 504106, ಜೆಸಿ 748835, ಜೆಸಿ 293247 ಮತ್ತು ಜೆಸಿ 781889 ಸಂಖ್ಯೆಯ ಲಾಟರಿಗಳಿಗೆ ತಲಾ 1 ಕೋಟಿ ರೂ. ಸಿಗಲಿದೆ. ಇದಲ್ಲದೇ, 10 ಲಾಟರಿಗಳಿಗೆ ತಲಾ 10 ಲಕ್ಷ ರೂ. ಬಹುಮಾನ ಸಿಗಲಿದೆ. ಜೆಎ 269609, ಜೆಬಿ 117859, ಜೆಸಿ 284717, ಜೆಡಿ 239603, ಜೆಇ 765533, ಜೆಎ 538789, ಜೆಬಿ 271191, ಜೆಸಿ 542383, ಜೆಡಿ 899020, ಜೆಇ 588634 ಸಂಖ್ಯೆಯ ಲಾಟರಿಗಳು ತಲಾ 10 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ