ಕರೋನ ಕಾಲದಲ್ಲಿ KFCಗಾಗಿ ಹೆಚ್ಚಿದ ಬೇಡಿಕೆ; ಕಳೆದ ಒಂದೇ ವರ್ಷದಲ್ಲಿ ತೆರೆಯಿತು 30 ರೆಸ್ಟೋರೆಂಟ್
ಕರೋನಾ ಸಾಂಕ್ರಾಮಿಕದ ನಡುವೆಯೂ KFC ಇಂಡಿಯಾ ಸುಮಾರು 30 ಹೊಸ ರೆಸ್ಟೋರೆಂಟ್‌ಗಳನ್ನು ತೆರೆದಿದೆ. ಈ ವರ್ಷ ಕೂಡ ಹೊಸ ಔಟ್ಲೆಟ್ ತೆರೆಯಲು ಕಂಪನಿ ತಯಾರಿ ನಡೆಸುತ್ತಿದೆ.
ನವದೆಹಲಿ : ವಿಶ್ವಾದ್ಯಂತ ಕರೋನಾ ಸಾಂಕ್ರಾಮಿಕ (Corona Epidemic) ಹರಡಿಕೊಂಡಿದ್ದರೂ, ಅಮೆರಿಕದ ಪ್ರಸಿದ್ಧ ಫುಡ್ ಚೈನ್ KFC ತನ್ನ ರೆಸ್ಟೋರೆಂಟ್ (Restaurant) ನೆಟ್‌ವರ್ಕ್ ಅನ್ನು ಭಾರತದಲ್ಲಿ ವಿಸ್ತರಿಸುತ್ತಲೇ ಇದೆ. ಕಂಪನಿಯು ತನ್ನ ವ್ಯವಹಾರದಲ್ಲಿ ಹಲವಾರು ರಚನಾತ್ಮಕ ಬದಲಾವಣೆಗಳನ್ನು ಮಾಡಿಕೊಂಡಿದೆ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ತನ್ನ ವ್ಯವಹಾರವನ್ನು ಹೆಚ್ಚಿಸಲು ವಿಶೇಷ ಗಮನ ಹರಿಸಲಾಗುವುದು ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ 30 ಹೊಸ ರೆಸ್ಟೋರೆಂಟ್‌ಗಳನ್ನು ತೆರೆದ ಕೆಎಫ್‌ಸಿ :
ಕರೋನಾ ಸಾಂಕ್ರಾಮಿಕದ (Corona Epidemic) ನಡುವೆಯೂ KFC ಇಂಡಿಯಾ ಸುಮಾರು 30 ಹೊಸ ರೆಸ್ಟೋರೆಂಟ್‌ಗಳನ್ನು ತೆರೆದಿದೆ. ಈ ವರ್ಷ ಕೂಡ ಹೊಸ ಔಟ್ಲೆಟ್ ತೆರೆಯಲು ಕಂಪನಿ ತಯಾರಿ ನಡೆಸುತ್ತಿದೆ. 'ನಮ್ಮ ಬ್ರ್ಯಾಂಡ್ ಅನ್ನು ಹೆಚ್ಚು ಹೆಚ್ಚು ವಿಸ್ತರಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಕೆಎಫ್‌ಸಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮೆನನ್ ತಿಳಿಸಿದ್ದಾರೆ. ಆನ್‌ಲೈನ್ (Online) ಮತ್ತು ಆಫ್‌ಲೈನ್‌ನಲ್ಲಿ ಬ್ರ್ಯಾಂಡ್‌ನ ವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Recharge Plan:ಕೇವಲ ರೂ.108ಕ್ಕೆ 60 ದಿನಗಳವರೆಗೆ ಅನಿಯಮಿತ ಕಾಲಿಂಗ್, ನಿತ್ಯ 1 GB ಡೇಟಾ ಉಚಿತ!
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ 480 ಕೆಎಫ್‌ಸಿ ರೆಸ್ಟೋರೆಂಟ್‌ಗಳು :
ಕರೋನಾ ಸಾಂಕ್ರಾಮಿಕದಿಂದ ಉಂಟಾದ ಅಡೆತಡೆಗಳ ಹೊರತಾಗಿಯೂ, ಕೆಎಫ್‌ಸಿ ವ್ಯವಹಾರವನ್ನು ವಿಸ್ತರಿಸಲಾಗಿದೆ. ಫ್ರಾಂಚೈಸಿಗಳು (Franchise) ಹೊಸ ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಕರೋನಾ ಸಾಂಕ್ರಾಮಿಕಕ್ಕೆ ಮೊದಲು, ಭಾರತದಲ್ಲಿ ಕೆಎಫ್‌ಸಿ ರೆಸ್ಟೋರೆಂಟ್‌ಗಳ ಸಂಖ್ಯೆ 450 ಆಗಿತ್ತು. ಈಗ ಕಂಪನಿಯ 480 ರೆಸ್ಟೋರೆಂಟ್‌ಗಳು ದೇಶದ 130 ನಗರಗಳಲ್ಲಿ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ : Holi Discounts & Offers : ಈ ಉತ್ಪನ್ನಗಳ ಮೇಲೆ ಸಿಗಲಿದೆ 80% ವರೆಗೆ ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.