ಬೆಂಗಳೂರು : ಹಣದುಬ್ಬರದಿಂದ ಜನ ಸಾಮಾನ್ಯರಿಗೆ ಮುಕ್ತಿನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಭರ್ಜರಿ ಘೋಷಣೆ ಮಾಡಿದೆ. ಸರ್ಕಾರ ಇದೀಗ  ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಗ್ಗದ ಬೆಲೆಯಲ್ಲಿ ಕಾಳುಗಳು ಮತ್ತು ಹಿಟ್ಟು ಒದಗಿಸಿದ ನಂತರ ಇದೀಗ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಭಾರತ್ ಅಟ್ಟ ಮತ್ತು ಭಾರತ್ ದಾಲ್ ನಂತರ ಈಗ ಕೇಂದ್ರ ಸರ್ಕಾರ ಭಾರತ್ ರೈಸ್ ಅನ್ನು ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಕೇವಲ 25 ರೂ.ಗೆ ಒಂದು ಕೆಜಿ ಅಕ್ಕಿಯನ್ನು ಮಾರಾಟ ಮಾಡಲಿದೆ.  


COMMERCIAL BREAK
SCROLL TO CONTINUE READING

ಕೆ.ಜಿ ಅಕ್ಕಿಗೆ 25 ರೂ. :  
ವರದಿಯ ಪ್ರಕಾರ, ಭಾರತ ಸರ್ಕಾರವು NAFED, NCCF ಮತ್ತು ಕೇಂದ್ರೀಯ ಭಂಡಾರ್ ಮೂಲಕ ಅಗ್ಗದ ಬೆಲೆಗೆ ಅಕ್ಕಿಯನ್ನು ಮಾರಾಟ ಮಾಡುತ್ತದೆ. ಜನರು ಕೆಜಿಗೆ 25 ರೂ. ನೀಡುವ ಮೂಲಕ 'ಭಾರತ್ ರೈಸ್' ಅನ್ನು ಖರೀದಿಸಬಹುದಾಗಿದೆ. ಕೆಲ ದಿನಗಳಿಂದ ಅಕ್ಕಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಗಮನಾರ್ಹ. ಈ ವರ್ಷ ಅಕ್ಕಿ ಬೆಲೆಯಲ್ಲಿ  ಶೇ.14.1 ರಷ್ಟು ಏರಿಕೆ ಕಂಡಿದೆ. ಸಾಮಾನ್ಯ ನಾನ್ ಬ್ರಾಂಡೆಡ್ ಅಕ್ಕಿಯ ಬೆಲೆ ಕೆಜಿಗೆ ಸರಾಸರಿ 43.3 ರೂ.ಗೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಕಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರವು ಭಾರತ್ ಬ್ರಾಂಡ್ ಅಡಿಯಲ್ಲಿ ಅಗ್ಗದ ಬೆಲೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ.   


ಇದನ್ನೂ ಓದಿ :  FD Rate Hike: ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ಗ್ರಾಹಕರಿಗೆ ಎಸ್‌ಬಿ‌ಐನಿಂದ ಗುಡ್ ನ್ಯೂಸ್


ಭಾರತ್ ಹಿಟ್ಟು ಮತ್ತು ಬೇಳೆಕಾಳುಗಳ ಮಾರಾಟ  : 
ಹಣದುಬ್ಬರವನ್ನು ನಿಯಂತ್ರಿಸಲು, ಸರ್ಕಾರವು ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಗ್ಗದ ಬೆಲೆಗೆ ಹಿಟ್ಟು, ಬೇಳೆಕಾಳುಗಳು, ಈರುಳ್ಳಿ ಮತ್ತು ಟೊಮೆಟೊಗಳನ್ನು ಮಾರಾಟ ಮಾಡಿದೆ. ನವೆಂಬರ್ 6, 2023 ರಂದು, ಕೇಂದ್ರ ಸರ್ಕಾರವು ಭಾರತ್ ಅಟ್ಟಾವನ್ನು ಪ್ರಾರಂಭಿಸಿತು. ಇದರಲ್ಲಿ ಜನರು ಕೆಜಿಗೆ 27.50 ರೂ ದರದಲ್ಲಿ ಹಿಟ್ಟನ್ನು ಖರೀದಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಹಿಟ್ಟಿನ ಸರಾಸರಿ ಬೆಲೆ ಕೆಜಿಗೆ 35 ರೂ. ಆದರೆ  ಭಾರತ್  ಶಾಪ್ ಮೂಲಕ ಒಂದು ಕೆಜಿಗೆ  27.50 ರೂ.ಯಂತೆ ಹಿಟ್ಟನ್ನು ಖರೀದಿಸಬಹುದಾಗಿದೆ. ಅದೇ ರೀತಿ ಸರ್ಕಾರ ಭಾರತ್ ದಾಲ್ ಅನ್ನು ಕೆಜಿಗೆ 60 ರೂ.ಯಂತೆ ಮಾರಾಟ ಮಾಡುತ್ತಿದೆ. ಈ ಹಿಂದೆ ಈರುಳ್ಳಿ, ಟೊಮೇಟೊ ಬೆಲೆ ಗಗನಕ್ಕೇರಿದ್ದ ಸಂದರ್ಭದಲ್ಲಿ ಸರ್ಕಾರ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಈರುಳ್ಳಿ, ಟೊಮೇಟೊವನ್ನು ಕೂಡಾ ಜನರಿಗೆ ಮಾರಾಟ ಮಾಡಿದೆ. ನವೆಂಬರ್ ನಲ್ಲಿ ಆಹಾರ ಹಣದುಬ್ಬರ ದರ ಶೇ.8.70ಕ್ಕೆ ತಲುಪಿರುವುದು ಗಮನಾರ್ಹ. ಆದರೆ ಚಿಲ್ಲರೆ ಹಣದುಬ್ಬರ ದರವು 5.55% ಕ್ಕೆ ತಲುಪಿದೆ.  


ಇದನ್ನೂ ಓದಿ :  ಅಂಬಾನಿ ಇಡೀ ಜೀವನದಲ್ಲಿ ಸಂಪಾದಿಸಿದ ಆಸ್ತಿಯನ್ನು ಈ ವ್ಯಕ್ತಿ ಒಂದೇ ತಿಂಗಳಲ್ಲಿ ಗಳಿಸಿ ಬಿಟ್ಟರಂತೆ ! ಯಾರು ಆ ಬಿಸ್ ನೆಸ್ ಮ್ಯಾನ್ ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.