FD Rate Hike: ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ಗ್ರಾಹಕರಿಗೆ ಎಸ್‌ಬಿ‌ಐನಿಂದ ಗುಡ್ ನ್ಯೂಸ್

FD Rate Hike: ಹೊಸ ವರ್ಷದ ಹೊಸ್ತಿಲಿನಲ್ಲಿ ತನ್ನ ಕೋಟ್ಯಾಂತರ ಗ್ರಾಹಕರಿಗೆ ಭಾರತದ ಅತಿದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಉಡುಗೊರೆಯೊಂದನ್ನು ನೀಡಿದೆ. 

Written by - Yashaswini V | Last Updated : Dec 27, 2023, 01:16 PM IST
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು ಹೆಚ್ಚಿಸಿದೆ.
  • ಈ ಬಡ್ಡಿ ದರವು ₹ 2 ಕೋಟಿಗಿಂತ ಕಡಿಮೆ ಎಫ್‌ಡಿಗಳಿಗೆ ಮಾತ್ರ ಅನ್ವಯವಾಗುತ್ತದೆ.
  • ಹೊಸ ಬಡ್ಡಿ ದರಗಳು ಇಂದಿನಿಂದ (ಡಿಸೆಂಬರ್ 27) ಜಾರಿಗೆ ಬರಲಿದೆ.
FD Rate Hike: ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ಗ್ರಾಹಕರಿಗೆ ಎಸ್‌ಬಿ‌ಐನಿಂದ ಗುಡ್ ನ್ಯೂಸ್  title=

SBI FD Rates: ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ವರ್ಷಾಚರಣೆಗೂ ಮುನ್ನ ತನ್ನ ಕೋಟ್ಯಾಂತರ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ಬಡ್ಡಿ ದರವು ₹ 2 ಕೋಟಿಗಿಂತ ಕಡಿಮೆ ಎಫ್‌ಡಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಹೊಸ ಬಡ್ಡಿ ದರಗಳು ಇಂದಿನಿಂದ (ಡಿಸೆಂಬರ್ 27) ಜಾರಿಗೆ ಬರಲಿದೆ.  

ಬ್ಯಾಂಕ್ ಒಂದು ವರ್ಷಕ್ಕಿಂತ ಹೆಚ್ಚು, ಎರಡು ವರ್ಷಗಳಿಗಿಂತ ಕಡಿಮೆ, 2 ವರ್ಷಗಳಿಗಿಂತ ಹೆಚ್ಚು, 3 ವರ್ಷಗಳಿಗಿಂತ ಕಡಿಮೆ ಮತ್ತು ಐದು ವರ್ಷಗಳಿಗಿಂತ ಹೆಚ್ಚಿನ ಎಲ್ಲಾ ಅವಧಿಗಳಿಗೆ ಇಡುವ ಸ್ಥಿರ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚಿಸಿದೆ.

ಇದನ್ನೂ ಓದಿ- ರೈಲ್ವೆ ಹೊಸ ನಿಯಮ: ಈಗ ಆರ್‌ಎಸಿ ಟಿಕೆಟ್ ಹೊಂದಿರುವವರಿಗೂ ಸಿಗುತ್ತೆ ಈ ಸರ್ವಿಸ್

ಎಷ್ಟು ಅವಧಿಗೆ ಎಷ್ಟು ಬಡ್ಡಿ ಲಭ್ಯ: 
* ಏಳು ದಿನಗಳಿಂದ ನಲವತ್ತೈದು ದಿನಗಳಲ್ಲಿ ಪಕ್ವವಾಗುವ ಠೇವಣಿಗಳಿಗೆ, ಎಸ್‌ಬಿಐ ದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಹೆಚ್ಚಿಸಿದೆ. ಈಗ ಈ ಠೇವಣಿಗಳು ನಿಮಗೆ 3.50% ಬಡ್ಡಿದರವನ್ನು ಪಡೆಯುತ್ತವೆ. 
* 46 ದಿನಗಳಿಂದ 179 ದಿನಗಳವರೆಗೆ, ಬ್ಯಾಂಕ್ ದರಗಳನ್ನು 25 bps ಹೆಚ್ಚಿಸಿದ್ದು ಇದರಲ್ಲಿ 4.75% ಬಡ್ಡಿದರಗಳು ಲಭ್ಯವಾಗಲಿವೆ. 
* 180 ದಿನಗಳಿಂದ 210 ದಿನಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಎಸ್‌ಬಿ‌ಐ ಬಡ್ಡಿ ದರಗಳನ್ನು 50 bps ಹೆಚ್ಚಿಸಿದ್ದು, ಇವುಗಳ ಬಡ್ಡಿದರ 5.75% ರಷ್ಟು ಹೆಚ್ಚಾಗಲಿದೆ. 
* ಎಸ್‌ಬಿ‌ಐ 211 ದಿನಗಳಿಗಿಂತ ಹೆಚ್ಚು ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಬಡ್ಡಿ ದರವನ್ನು  25 ಬಿಪಿಎಸ್‌ಗಳಷ್ಟು ಹೆಚ್ಚಿಸಿದೆ. ಇದರಿಂದ 6% ಬಡ್ಡಿ ಲಭ್ಯವಾಗಲಿದೆ. 
* 3 ವರ್ಷಕ್ಕಿಂತ ಹೆಚ್ಚು 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು 25 ಬಿಪಿಎಸ್ ಹೆಚ್ಚಿಸಿದ್ದು  6.75% ಗಳಷ್ಟು ಬಡ್ಡಿ ಸಿಗಲಿದೆ. 

ಇಂದಿನಿಂದ ಜಾರಿಗೆ ಬಂದ ಹೊಸ ಎಫ್‌ಡಿ ಬಡ್ಡಿದರಗಳು ಈ ಕೆಳಕಂಡಂತಿವೆ 
ಎಫ್‌ಡಿ ಅವಧಿ ಬಡ್ಡಿದರ
7 ದಿನಗಳಿಂದ 45 ದಿನಗಳು 3.50%
46 ದಿನಗಳಿಂದ 179 ದಿನಗಳು 4.75%
180 ದಿನಗಳಿಂದ 210 ದಿನಗಳು 5.75%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6%
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 6.80%
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.00%
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 6.75%
5 ವರ್ಷಗಳು ಮತ್ತು 10 ವರ್ಷಗಳವರೆಗೆ  6.50%

 ಇದನ್ನೂ ಓದಿ- ಆಕಸ್ಮಿಕವಾಗಿ ಬೇರೆಯವರ ಹಣ ನಿಮ್ಮ ಅಕೌಂಟ್'ಗೆ ಬಂದಿದ್ಯಾ? ಈ ವಿಷಯಗಳು ನಿಮಗೂ ತಿಳಿದಿರಲಿ

ಹಿರಿಯ ನಾಗರಿಕರಿಗೆ ಎಸ್‌ಬಿ‌ಐ ಎಫ್‌ಡಿ ದರಗಳು:- 
ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯುತ್ತಾರೆ. ಇತ್ತೀಚಿನ ಹೆಚ್ಚಳದ ನಂತರ,  ಎಸ್‌ಬಿ‌ಐ ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಪಕ್ವವಾಗುವ ಠೇವಣಿಗಳ ಮೇಲೆ 4 ರಿಂದ 7.5% ವರೆಗಿನ ಬಡ್ಡಿ ದರಗಳನ್ನು ನೀಡುತ್ತದೆ.

ಎಫ್‌ಡಿ ಅವಧಿ ಬಡ್ಡಿದರ
7 ದಿನಗಳಿಂದ 45 ದಿನಗಳು 4%
46 ದಿನಗಳಿಂದ 179 ದಿನಗಳು 5.25%
180 ದಿನಗಳಿಂದ 210 ದಿನಗಳು 6.25%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6.5%
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 7.30%
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.50%
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 7.25
5 ವರ್ಷಗಳು ಮತ್ತು 10 ವರ್ಷಗಳವರೆಗೆ  7.5%

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News