Kingfisher House Sold: ಕೊನೆಗೂ ಹರಾಜಾದ ವಿಜಯ್ ಮಲ್ಯಗೆ ಸೇರಿದ Kingfisher House, ಎಷ್ಟು ಬೆಲೆ ಬಂತು ಗೊತ್ತಾ?
Kingfisher House Sold:ಮುಂಬೈನ ವಿಲೆ ಪಾರ್ಲೆಯಲ್ಲಿರುವ ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಹೌಸ್ (Vijay Malya) ಒಂಬತ್ತನೇ ಪ್ರಯತ್ನದಲ್ಲಿ ಹೈದರಾಬಾದ್ ಮೂಲದ ಸ್ಯಾಟರ್ನ್ ರಿಯಾಲ್ಟರ್ಸ್ ಗೆ (Saturn Realtors) 52.25 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ.
Kingfisher House Sold: ಮುಂಬೈನ ವಿಲೆ ಪಾರ್ಲೆಯಲ್ಲಿರುವ ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಹೌಸ್ (Vijay Malya) ಒಂಬತ್ತನೇ ಪ್ರಯತ್ನದಲ್ಲಿ ಹೈದರಾಬಾದ್ ಮೂಲದ ಸ್ಯಾಟರ್ನ್ ರಿಯಾಲ್ಟರ್ಸ್ ಗೆ (Saturn Realtors) 52.25 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ. ಒಂದು ಕಾಲದಲ್ಲಿ ಮಲ್ಯ ಮಾಲಿಕತ್ವದ ಹಾಗೂ ಇದೀಗ ಬೀಗ ಜಡಿದ ಕಿಂಗ್ ಫಿಷರ್ ಏರ್ಲೈನ್ಸ್ ನ (Kingfisher Airlines) ಪ್ರಧಾನ ಕಚೇರಿಯಾಗಿದೆ. ಇದು ಮಲ್ಯರ ಒಡೆತನದಲ್ಲಿದೆ. ಮಲ್ಯ ಸುಮಾರು 9,000 ಕೋಟಿ ಮೊತ್ತದ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಈ ಡೀಲ್ ಗಾಗಿ ಸ್ಯಾಟರ್ನ್ ರಿಯಲ್ಟರ್ಸ್ ಮಹಾರಾಷ್ಟ್ರ ಸರ್ಕಾರಕ್ಕೆ (Maharashtra Government) ಸುಮಾರು 2.612 ಕೋಟಿ ರೂ.ಗಳ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದೆ. ಈ ಡೀಲ್ ಅನ್ನು ಕಳೆದ ತಿಂಗಳು ಜುಲೈ 31ರಂದು ನೊಂದಾಯಿಸಲಾಗಿತ್ತು.
ಮುಂಬೈನ ವಿಮಾನ ನಿಲ್ದಾಣದ ಹೊರಗಿರುವ ಈ 2401.70 ಸ್ಕ್ವೆಯರ್ ಮೀಟರ್ ವಿಸ್ತೀರ್ಣಹೊಂದಿರುವ ಈ ಆಸ್ತಿಯನ್ನು 2016ರಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಬೆಂಗಳೂರಿನ ಸಾಲ ಮರುಪಾವತಿ ನ್ಯಾಯಾಧಿಕರಣ (Debt Recovery Tribunal) ಕಳೆದ 8 ಪ್ರಯತ್ನಗಳ ಬಳಿಕ ಈ ಮನೆಯನ್ನು ಇಂದು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ .
ದರ ಇಳಿಕೆಗೆ ಈ ಆಸ್ತಿ ಇರುವ ಜಾಗ ಹಾಗೂ ಮಾರುಕಟ್ಟೆಯ ಸ್ಥಿತಿ ಇದಕ್ಕೆ ಕಾರಣ ಎಂದು ರಿಯಲ್ ಎಸ್ಟೇಟ್ ಸಂಶೋಧನಾ ಸಂಸ್ಥೆ ಲಿಯಾಸೆಜ್ ಫೋರಾಸ್ ಸಂಸ್ಥೆಯ ಮುಖ್ಯ ನಿರ್ದೇಶಕ ಪಂಕಜ್ ಕಪೂರ್ ಹೇಳಿದ್ದಾರೆ. , "ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವುದರಿಂದ ಮತ್ತು ಎತ್ತರದ ನಿರ್ಬಂಧಗಳಿಂದಾಗಿ ಈ ಆಸ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಮರ್ಥ್ಯವಿಲ್ಲ. ಅಲ್ಲದೆ, ಮಾರುಕಟ್ಟೆಯ ಸ್ಥಿತಿಯು ಕೂಡ ಕೆಟ್ಟದಾಗಿದೆ. " ಎಂದು ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ-Vijay Mallyaಗೆ ಶಾಕ್ ನೀಡಿದ ಬ್ರಿಟನ್ ನ್ಯಾಯಾಲಯ, ಲಂಡನ್ ನಲ್ಲೂ ದಿವಾಳಿ ಘೋಷಿತ
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ಬಳಿಕ ಅಕ್ಟೋಬರ್ 20, 2012ರಂದು ಕಿಂಗ್ ಫಿಷರ್ ಏರ್ಲೈನ್ಸ್ ಸಂಸ್ಥೆಯನ್ನು ಮುಚ್ಚಲಾಗಿತ್ತು. ಕಿಂಗ್ ಫಿಷರ್ ಏರ್ಲೈನ್ಸ್ ಗೆ ಸಂಬಂಧಿಸದ ವಂಚನೆ ಹಾಗೂ ಮನಿ ಲಾಂಡ್ರಿಂಗ್ ಆರೋಪವನ್ನು ಮಲ್ಯ ಎದುರಿಸುತ್ತಿದ್ದು, ಸಾಲ ಮರುಪಾವತಿಸಲು ವಿಫಲವಾದ ಕಾರಣ ಹಾಗೂ ಬ್ಯಾಂಕುಗಳಿಗೆ ವಂಚನೆ ಎಸಗಿ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ-ಫ್ರಾನ್ಸ್‌ನಲ್ಲಿ 1.6 ಮಿಲಿಯನ್ ಯೂರೋ ಮೌಲ್ಯದ ವಿಜಯ್ ಮಲ್ಯ ಆಸ್ತಿ ಇಡಿ ವಶಕ್ಕೆ
ಪ್ರಸ್ತುತ ಮಲ್ಯ (Vijay Malya) ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿದ್ದಾರೆ ಹಾಗೂ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ಪಾರಾಗಲು ಹಲವು ವೇದಿಕೆಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಏಪ್ರಿಲ್ 2019 ರಲ್ಲಿ ಬಂಧನಕ್ಕೊಳಗಾದ ಬಳಿಕ ಅವರು ಹಸ್ತಾಂತರ ವಾರೆಂಟ್ ಮೇಲೆ ಯುಕೆಯಲ್ಲಿ ಜಾಮೀನಿನ ಮೇಲೆ ಹೊದ್ರಗಿದ್ದಾರೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಮತ್ತು ವಿಜಯ್ ಮಲ್ಯ ಅವರಿಗೆ ಸೇರಿದ ರೂ. 5646.54 ಕೋಟಿ ಮೌಲ್ಯದ ಆಸ್ತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಅದರ ಒಕ್ಕೂಟಕ್ಕೆ ಮಾರಾಟ ಮಾರಾಟ ಮಾಡಲು ನೀಡಬೇಕೆಂದು ಜೂನ್ ತಿಂಗಳ ಆರಂಭದಲ್ಲಿ ವಿಶೇಷ ಹಣದ ತಡೆ ಕಾಯ್ದೆ (PMLA) ನ್ಯಾಯಾಲಯ ತೀರ್ಪು ನೀಡಿತ್ತು. ಮಲ್ಯ ಮತ್ತು ಅವರ ಈಗ ನಿಷ್ಕ್ರಿಯವಾಗಿರುವ ಕಂಪನಿಗಳ ಮೇಲೆ 6203 ಕೋಟಿ ರೂ. ಹಣ ಮರುಪಾವತಿ ಬಾಕಿ ಉಳಿದಿದೆ.
ಇದನ್ನೂ ಓದಿ-ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟಿನಲ್ಲಿ ಭಾರೀ ಮುಖಭಂಗ, UBHL ಮೇಲ್ಮನವಿ ವಜಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.