ನವದೆಹಲಿ: ಬರೋಬ್ಬರಿ 3.5 ಕಿ.ಮೀ ಉದ್ದದ ಸೂಪರ್ ವಾಸುಕಿ ಪ್ರಾಯೋಗಿಕ ಸಂಚಾರ ಸಕ್ಸಸ್ ಆಗಿದೆ. ಭಾರತೀಯ ರೈಲ್ವೆ ಇಲಾಖೆ ‘ಭಾರತದ ಅತಿ ಉದ್ದದ ಮತ್ತು ಭಾರವಾದ ಸರಕು ಸಾಗಣೆ ರೈಲು ‘ಸೂಪರ್ ವಾಸುಕಿ’ಯನ್ನು ಸ್ವಾತಂತ್ರ್ಯ ದಿನದಂದು ಯಶಸ್ವಿಯಾಗಿ ಪರೀಕ್ಷಿಸಿದೆ. ಕೇಂದ್ರ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಈ ರೈಲಿನ ಪ್ರಾಯೋಗಕ ಸಂಚಾರಕ್ಕೆ ಚಾಲನೆ ಸಿಕ್ಕಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Good News! ಖಾಸಗಿ ನೌಕರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಮುಂದಿನ ವರ್ಷ ಎಷ್ಟು ಇನ್ಕ್ರಿಮೆಂಟ್ ಸಿಗಲಿದೆ ಗೊತ್ತಾ?


‘ಸೂಪರ್ ವಾಸುಕಿ’ ರೈಲಿನ ಬಗ್ಗೆ 5 ಪ್ರಮುಖ ಅಂಶಗಳು


  1. ಇದು 3.5 ಕಿಮೀ ಉದ್ದದ ಸರಕು ರೈಲು ಆಗಿದ್ದು, 295 ಲೋಡ್ ವ್ಯಾಗನ್‌ಗಳು 27,000 ಟನ್ ಕಲ್ಲಿದ್ದಲನ್ನು ಛತ್ತೀಸ್‌ಗಢದ ಕೊರ್ಬಾ ಮತ್ತು ನಾಗಪುರದ ರಾಜನಂದಗಾವೊ ನಡುವೆ ಆಗಸ್ಟ್ 15 ರಂದು ಸಾಗಿಸಿತು. ಇದು 5 ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ.

  2.  5 ರೇಕ್‌ಗಳ ಗೂಡ್ಸ್ ರೈಲುಗಳನ್ನು ಒಂದು ಘಟಕವಾಗಿ ಸಂಯೋಜಿಸಿ ರೈಲನ್ನು ರಚಿಸಲಾಗಿದೆ.

  3.  ಭಾರತೀಯ ರೈಲ್ವೆ ಇಲಾಖೆ ಪ್ರಕಾರ, ಇದುವರೆಗೆ ಓಡಿದ ಅತ್ಯಂತ ಉದ್ದವಾದ ಮತ್ತು ಭಾರವಾದ ಸರಕು ಸಾಗಣೆ ರೈಲು ಇದಾಗಿದೆ. ರೈಲು ನಿಲ್ದಾಣವನ್ನು ದಾಟಲು ಸುಮಾರು 4 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅದು ತಿಳಿಸಿದೆ.

  4.  ‘ಸೂಪರ್ ವಾಸುಕಿ’ ಹೊತ್ತೊಯ್ಯುವ ಕಲ್ಲಿದ್ದಲಿನ ಪ್ರಮಾಣವು ಒಂದು ಪೂರ್ಣ ದಿನಕ್ಕೆ 3000 MW ವಿದ್ಯುತ್ ಸ್ಥಾವರವನ್ನು ಬೆಂಕಿಯಿಡಲು ಸಾಕಾಗುತ್ತದೆ. ಇದು ಒಂದು ಪ್ರಯಾಣದಲ್ಲಿ ಸುಮಾರು 9,000 ಟನ್‌ಗಳಷ್ಟು ಕಲ್ಲಿದ್ದಲನ್ನು ಸಾಗಿಸುವ ಅಸ್ತಿತ್ವದಲ್ಲಿರುವ ರೈಲ್ವೆ ರೇಕ್‌ಗಳ (ಪ್ರತಿಯೊಂದರಲ್ಲಿ 100 ಟನ್‌ಗಳಿರುವ 90 ಕಾರುಗಳು) ಸಾಮರ್ಥ್ಯದ 3 ಪಟ್ಟು ಹೆಚ್ಚು.

  5.  ರೈಲ್ವೆ ಇಲಾಖೆಯು ಮುಂಬರುವ ದಿನಗಳಲ್ಲಿ ಈ ರೀತಿಯ ರೈಲುಗಳನ್ನು ಹೆಚ್ಚಾಗಿ ಬಳಸಲು ಯೋಜಿಸಿದೆ. ವಿಶೇಷವಾಗಿ ವಿದ್ಯುತ್ ಕೇಂದ್ರಗಳ ಇಂಧನ ಕೊರತೆಯನ್ನು ತಡೆಗಟ್ಟಲು ಗರಿಷ್ಠ ಬೇಡಿಕೆಯ ಋತುವಿನಲ್ಲಿ ಕಲ್ಲಿದ್ದಲು ಸಾಗಿಸಲು ಈ ರೈಲು ಬಳಕೆಗೆ ನಿರ್ಧರಿಸಲಾಗಿದೆ.  


ಇದನ್ನೂ ಓದಿ: Best Bikes: 100 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಬೈಕ್ ಖರೀದಿಸಿ ಮಜಾ ಮಾಡಿ!


ಆಗ್ನೇಯ ಕೇಂದ್ರ ರೈಲ್ವೆಯು ಬಿಲಾಸ್‌ಪುರದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಇದರ ನಿರ್ವಹಣೆ ಮಾಡಲಿದೆ. ಹೀಗೆ ಒಂದೇ ರೈಲಿನಲ್ಲಿ ಅತ್ಯಧಿಕ ಪ್ರಮಾಣ, ತೂಕದ ಇಂಧನ ಸಾಗಣೆ ಮಾಡಿರುವುದು ದಾಖಲೆಯಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.