RBI Rule Alert : ನಿಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತಿಳಿದುಕೊಂಡಿರಿ, ಇಲ್ಲವಾದರೆ ದಂಡ ತೆರಬೇಕಾದಿತು
RBI Rule Alert : ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ ನ ನಿಯಮಗಳನ್ನು ಬದಲಾಯಿಸಿದೆ. ಅತಿದೊಡ್ಡ ಬದಲಾವಣೆಯು ನಿಮ್ಮ ಸಂಬಳ, ಪಿಂಚಣಿ, ಇಎಂಐಗೆ ಸಂಬಂಧಿಸಿದ್ದಾಗಿದೆ.
ನವದೆಹಲಿ : RBI Rule Alert : ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (NACH)ನ ನಿಯಮಗಳನ್ನು ಬದಲಾಯಿಸಿದೆ. ಅತಿದೊಡ್ಡ ಬದಲಾವಣೆಯು ನಿಮ್ಮ ಸಂಬಳ, ಪಿಂಚಣಿ, ಇಎಂಐಗೆ ಸಂಬಂಧಿಸಿದ್ದಾಗಿದೆ. ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (NACH) ಸಿಸ್ಟಮ್ ಅನ್ನು ಏಳು ದಿನಗಳವರೆಗೆ ಕಾರ್ಯನಿರ್ವಹಿಸಲು RBI ನಿರ್ಧರಿಸಿದೆ. ಈ ಹಿಂದೆ, ಈ ಸೌಲಭ್ಯವು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ, ಕೆಲಸದ ದಿನಗಳಲ್ಲಿ ಮಾತ್ರ ಲಭ್ಯವಿತ್ತು.
NACH ಎನ್ನುವುದು NPCIನ ಪಾವತಿ ವ್ಯವಸ್ಥೆಯಾಗಿದೆ. ಇದು ಡಿವಿಡೆಂಡ್, ಬಡ್ಡಿ, ಸಂಬಳ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಕ್ರೆಡಿಟ್ ವರ್ಗಾವಣೆಗಳ ಸೌಲಭ್ಯವನ್ನು ಒದಗಿಸುತ್ತದೆ. ಇದು ಮ್ಯೂಚುವಲ್ ಫಂಡ್ (Mutual fund) ಎಸ್‌ಐಪಿ, ಮನೆ-ಕಾರಿನ ಇಎಂಐ (EMI) ಅಥವಾ ವೈಯಕ್ತಿಕ ಸಾಲ, ದೂರವಾಣಿ, ಗ್ಯಾಸ್ ಮತ್ತು ವಿದ್ಯುತ್ ಬಿಲ್‌ಗಳ ಪಾವತಿಯನ್ನೂ ಒಳಗೊಂಡಿದೆ.
ಇದನ್ನೂ ಓದಿ : EPF ಖಾತೆದಾರರು ತಕ್ಷಣ ಈ ಕೆಲಸ ಮಾಡಿ, ಇಲ್ಲವಾದರೆ 7 ಲಕ್ಷ ರೂ ಗಳ ನಷ್ಟವಾಗಬಹುದು
ದಂಡವನ್ನು ಪಾವತಿಸಬೇಕಾಗಬಹುದು :
ನೀವು ಚೆಕ್ (Cheque) ಮೂಲಕ ಯಾವುದೇ ಪಾವತಿ ಮಾಡುವುದಾದರೆ, ಇನ್ನೂ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಆರ್‌ಬಿಐನ (RBI) ಹೊಸ ನಿಯಮಗಳ ಪ್ರಕಾರ, ನಾನ್ ವರ್ಕಿಂಗ್ ಡೇಗಳಲ್ಲಿಯೂ ಚೆಕ್ ಅನ್ನು ಕ್ಲಿಯರೆನ್ಸ್ ಗೆ ಕಳುಹಿಸಬಹುದು. ಈ ಸಂದರ್ಭದಲ್ಲಿ ನಿಮ್ಮ ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಇಟ್ಟಿರಬೇಕಾಗುತ್ತದೆ. ಇಲ್ಲದಿದ್ದರೆ, ಚೆಕ್ ಬೌನ್ಸ್ ಅಪಾಯ ಖಂಡಿತಾ. ಚೆಕ್ ಬೌನ್ಸ್ (Cheque bounce) ಆದರೆ ಮತ್ತೆ ದಂಡ ಪಾವತಿಸಬೇಕಾಗುತ್ತದೆ.
NACH ನಿಯಮಗಳನ್ನು ಬದಲಾಯಿಸಿದ ಆರ್‌ಬಿಐ:
ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಆರ್‌ಟಿಜಿಎಸ್ ಸೌಲಭ್ಯವನ್ನು 24x7 ಲಭ್ಯವಾಗುವಂತೆ ಮಾಡಲು ಆರ್‌ಬಿಐ ಕೆಲ ನಿಯಮಗಳನ್ನು ಬದಲಾಯಿಸಿದೆ. ಇದರ ಪ್ರಕಾರ, ನಾನ್ ವರ್ಕಿಂಗ್ ಡೇಸ್ ಗಳಲ್ಲಿಯೂ, NACH ಸೌಲಭ್ಯ ಲಭ್ಯವಿರುತ್ತದೆ.
ಇದನ್ನೂ ಓದಿ : Gold Price Today : ಹತ್ತು ಸಾವಿರದಷ್ಟು ಅಗ್ಗವಾಯಿತು ಚಿನ್ನದ ಬೆಲೆ , ಇಂದಿನ ದರಕ್ಕಾಗಿ ಇಲ್ಲಿ ಚೆಕ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ