ನವದೆಹಲಿ: RBI Monetary Policy - ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹಣಕಾಸು ಸಮಿತಿಯ ಸಭೆಯ ಫಲಿತಾಂಶ ಪ್ರಕಟಗೊಂಡಿವೆ. ಆರ್‌ಬಿಐ ಮತ್ತೊಮ್ಮೆ ರೆಪೊ ದರವನ್ನು ಸ್ಥಿರವಾಗಿರಿಸಿದೆ. ಅಂದರೆ ರೆಪೊ ದರವು ಶೇ.4 ರಷ್ಟು ಮುಂದುವರೆಯಲಿದೆ. ಇದರರ್ಥ ನಿಮ್ಮ ಬ್ಯಾಂಕ್ EMI ಕಡಿಮೆಯಾಗುವುದಿಲ್ಲ. ವಾಸ್ತವದಲ್ಲಿ ರೆಪೋ ದರ ಇಳಿಕೆ ಮಾಡಿದರೆ, ಬ್ಯಾಂಕ್ ಗಳ ಮೇಲೆ ಬಡ್ಡಿದರ ಕಡಿಮೆ ಮಾಡುವಂತೆ ಒತ್ತಡ ಉಂಟಾಗೀರುತ್ತದೆ. ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸಿದರೆ, ಇಎಂಐ ಕೂಡ ಕಡಿಮೆಯಾಗುತ್ತದೆ.
Economic activity has broadly evolved along the lines of the Monetary Policy Committee's expectations in June and the economy is recovering from the setback of the second phase of COVID19: RBI Governor Shaktikanta Das pic.twitter.com/i7RJJTuLAG
— ANI (@ANI) August 6, 2021
ಇಂತಹ ಪರಿಸ್ಥಿತಿಯಲ್ಲಿ, ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದಾದರೆ, ಬ್ಯಾಂಕುಗಳು ಕೂಡ ಸಾಲದ ಬಡ್ಡಿದರವನ್ನು ಕಡಿತಗೊಳಿಸುವುದಿಲ್ಲ ಎಂದರ್ಥ. ಸತತ ಏಳನೇ ಸಭೆಯಲ್ಲಿ, ಆರ್‌ಬಿಐ ರೆಪೊ (Repo Rate) ದರವನ್ನು ಶೇ.4ರಷ್ಟು ಸ್ಥಿರವಾಗಿಡಲು ನಿರ್ಧರಿಸಿದೆ ಎಂಬುದು ಇಲ್ಲಿ ಗಮನಾರ್ಹ. ಇನ್ನೊಂದೆಡೆ ರಿವರ್ಸ್ ರೆಪೊ (Reverse Repo Rate) ದರವು ಶೇ, 3.35 ರಷ್ಟು ಮುಂದುವರೆಯಲಿದೆ. ವಿತ್ತೀಯ ಸಮಿತಿ ಸಭೆಯ ಫಲಿತಾಂಶಗಳ ಬಗ್ಗೆ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das), ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ.6.1% ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ,
CPI inflation is projected at 5.7 % during 2021-22 - this consists of 5.9% in Q2, 5.3% in Q3 and 5.8% in Q4 of 2021-22 with risks broadly balanced. CPI inflation for the first quarter of 2022-23 is projected at 5.1%: RBI Governor Shaktikanta Das pic.twitter.com/SXE2HEZDWY
— ANI (@ANI) August 6, 2021
ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಿಂದ ಉಂಟಾದ ಆಘಾತದಿಂದ ಆರ್ಥಿಕತೆಯು ಹೊರಬರುತ್ತಿದೆ. ಲಸಿಕೆಯ ವೇಗದೊಂದಿಗೆ ಆರ್ಥಿಕ ಚಟುವಟಿಕೆಗಳು ಕೂಡ ಹೆಚ್ಚಾಗುತ್ತಿವೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಇದಲ್ಲದೆ ಮೇ ತಿಂಗಳಿನಲ್ಲಿ CPI (Consumer Price Index) ಹಣದುಬ್ಬರ (Inflation) ಆಶ್ಚರ್ಯಚಕಿತಗೊಳಿಸಿದ್ದು, ಪ್ರೈಸ್ ಮೊಮೆಂಟಮ್ ಮಧ್ಯಮವಾಗಿದೆ ಎಂದಿದ್ದಾರೆ.
ಇನ್ನೊಂದೆಡೆ ಡಿಮಾಂಡ್ ಔಟ್ ಲುಕ್ ನಲ್ಲಿ ಸುಧಾರಣೆಯಾಗಿದೆ ಆದರೆ, ಪರಿಸ್ಥಿತಿ ಸಾಮಾನ್ಯವಾಗಲು ಇನ್ನಷ್ಟು ಸಮಯಾವಕಾಶ ಬೇಕಾಗಲಿದೆ. ಡಿಮಾಂಡ್ ಹಾಗೂ ಸಪ್ಲೈ ಅನ್ನು ಸಮತೋಲನದಲ್ಲಿರಿಸಲು ಕೆಲ ಉಪಾಯಗಳನ್ನು ಮಾಡಬೇಕಿದ್ದು, ಜೂನ್ ತಿಂಗಳಿನಲ್ಲಿ ಹಣದುಬ್ಬರ ದರ ಹೆಚ್ಚಾಗಿದೆ. FY21-22 ರಲ್ಲಿ ಚಿಲ್ಲರೆ ಹಣದುಬ್ಬರದ (Retail Inflation) ಗುರಿಯನ್ನು ಶೇ.5.7ರಷ್ಟು ಇರಿಸಲಾಗಿದೆ ಎಂದು RBI ಗವರ್ನರ್ ಹೇಳಿದ್ದಾರೆ.
The projection for real GDP growth is retained at 9.5% for 2021-22: RBI Governor Shaktikanta Das pic.twitter.com/Qs5AL5s6EO
— ANI (@ANI) August 6, 2021
ಇದನ್ನೂ ಓದಿ- EPFO ಸದಸ್ಯರಿಗೆ ಸಿಗಲಿದೆ 7 ಲಕ್ಷ ರೂಪಾಯಿಗಳ ಲಾಭ ..! ಇದಕ್ಕಾಗಿ ಏನು ಮಾಡಬೇಕು ತಿಳಿಯಿರಿ
FY22ರಲ್ಲಿ GDP ಬೆಳವಣಿಗೆ ದರ ಶೇ.9.5 ರಷ್ಟು ಇರಲಿದೆ
2022ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ನಿರೀಕ್ಷೆಯಲ್ಲಿ RBI ಗವರ್ನರ್ ಯಾವುದೇ ಬದಲಾವಣೆ ಮಾಡಿಲ್ಲ. FY22ರ ಹಣಕಾಸು ವರ್ಷದಲ್ಲಿ GDP ಬೆಳವಣಿಗೆ ದರ ಶೇ.9.5ರಷ್ಟು ಇರಲಿದೆ ಎಂದು ಅವರು ಅಂದಾಜು ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ